ನವೆಂಬರ್​ 1ಕ್ಕೆ ತ್ರಿಪುರ-ಬಾಂಗ್ಲಾದೇಶ ಹೊಸ ರೈಲು ಮಾರ್ಗ ಉದ್ಘಾಟನೆ.. ಮೋದಿ ಜೊತೆಗೂಡಿ ಚಾಲನೆ ನೀಡಲಿದ್ದಾರೆ ಬಾಂಗ್ಲಾ ಪ್ರಧಾನಿ

author-image
AS Harshith
Updated On
ನವೆಂಬರ್​ 1ಕ್ಕೆ ತ್ರಿಪುರ-ಬಾಂಗ್ಲಾದೇಶ ಹೊಸ ರೈಲು ಮಾರ್ಗ ಉದ್ಘಾಟನೆ.. ಮೋದಿ ಜೊತೆಗೂಡಿ ಚಾಲನೆ ನೀಡಲಿದ್ದಾರೆ ಬಾಂಗ್ಲಾ ಪ್ರಧಾನಿ
Advertisment
  • ತ್ರಿಪುರದಿಂದ ಬಾಂಗ್ಲಾದೇಶ ಸಂಪರ್ಕಿಸುವ ಹೊಸ ರೈಲು ಮಾರ್ಗ
  • 862.58 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ರೈಲು ಮಾರ್ಗ
  • ಅಗರ್ತಲ -ಅಗೌರ ರೈಲ್ವೇ ಮಾರ್ಗ ಭಾರತದಲ್ಲಿ 5.05 ಕಿ.ಮೀ ಇದೆ

ಭಾರತದ ತ್ರಿಪುರದಿಂದ ಬಾಂಗ್ಲಾದೇಶ ಸಂಪರ್ಕಿಸುವ ಹೊಸ ರೈಲು ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಚಾಲನೆ ನೀಡಲಿದ್ದಾರೆ. 862.58 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅಗರ್ತಲ - ಅಗೌರ ರೈಲ್ವೇ ಮಾರ್ಗ ಭಾರತದಲ್ಲಿ 5.05 ಕಿ.ಮೀ ಹಾಗೂ ಬಾಂಗ್ಲಾದೇಶದಲ್ಲಿ 10.014 ಕಿ.ಮೀ ಉದ್ದ ಇದ್ದು ಒಟ್ಟು 15.064 ಕಿ.ಮೀ ಉದ್ದ ಹೊಂದಿದೆ.

ಅಗರ್ತಲ - ಅಗೌರ ರೈಲ್ವೆ ಸೇವೆಗಳನ್ನು ಪ್ರಾರಂಭಿಸುವುದರಿಂದ, ಢಾಕಾ ಮೂಲಕ ಅಗರ್ತಲಾ-ಕೋಲ್ಕತ್ತಾ ಮಾರ್ಗದ ಪ್ರಯಾಣದ ಸಮಯವನ್ನು 31 ಗಂಟೆಗಳಿಂದ 10 ಗಂಟೆಗಳಿಗೆ ಇಳಿಸಲಾಗುತ್ತದೆ. ಪ್ರಧಾನಿ ಮೋದಿ ಅವರು ನವೆಂಬರ್ 01 ರಂದು ಬೆಳಗ್ಗೆ 11 ಗಂಟೆಗೆ ವರ್ಚುವಲ್ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಉದ್ಘಾಟಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment