/newsfirstlive-kannada/media/post_attachments/wp-content/uploads/2024/12/TRISHA.jpg)
ಇಂದು ಕ್ರಿಸ್ಮಸ್ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಕ್ರಿಸ್ಮಸ್ ದಿನಂದಂತೆ ನಟಿ ತ್ರಿಶಾ ಕೃಷ್ಣನ್ ಮಗನನ್ನು ಕಳೆದುಕೊಂಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರೀತಿಯ ನಾಯಿ ಜೋರೊವನ್ನು ಕಳೆದುಕೊಂಡ ತ್ರಿಶಾ ಕೃಷ್ಣನ್ ಅವರು ಕಣ್ಣೀರು ಹಾಕಿದ್ದಾರೆ.
ನಟಿ ತ್ರಿಶಾ ಕೃಷ್ಣನ್ ಅವರು ತಮ್ಮ ನಿವಾಸದಲ್ಲಿ ಜೋರೊವನ್ನು ಪ್ರೀತಿಯಿಂದ ಮಗನಂತೆ ನೋಡಿಕೊಳ್ಳುತ್ತಿದ್ದರು. ಬಹಳ ವರ್ಷದಿಂದ ಇದ್ದಿದ್ದರಿಂದ ಅದರ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದರು. ಶೂಟಿಂಗ್ನಿಂದ ಬಂದಾಗ ಅದರ ಜೊತೆ ಸಮಯ ಕಳೆಯುತ್ತಿದ್ದರು. ಆದರೆ ಅದು ಅನಾರೋಗ್ಯದಿಂದ ಇಂದು ಕಣ್ಮುಚ್ಚಿದೆ. ಈ ಸಂಬಂಧ ನಟಿ ಕಣ್ಣೀರು ಹಾಕಿದ್ದು ಪ್ರೀತಿಯ ಮಗ ಇನ್ನಿಲ್ಲ. ಇನ್ನು ಮುಂದೆ ನನ್ನ ಜೀವನಕ್ಕೆ ಶೂನ್ಯ ಅರ್ಥವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಶೂಟಿಂಗ್ನಲ್ಲಿದ್ದ ತ್ರಿಶಾಗೆ ನಾಯಿ ಕಣ್ಣು ಮುಚ್ಚಿರುವ ಮಾಹಿತಿಯನ್ನು ತಿಳಿಸಲಾಗಿತ್ತು. ಇದರಿಂದ ತೀವ್ರ ಆಘಾತ ವ್ಯಕ್ತಪಡಿಸಿದ ತ್ರಿಶಾ, ತಕ್ಷಣ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಮನೆಗೆ ದೌಡಾಯಿಸಿದ್ದಾರೆ. ನಾಯಿಯನ್ನು ಕಂಡು ಕಣ್ಣೀರು ಹಾಕಿ, ನನ್ನ ಜೀವನಕ್ಕೆ ಇನ್ನು ಮುಂದೆ ಅರ್ಥ ಇಲ್ಲ ಎಂದು ಭಾವುಕರಾಗಿದ್ದಾರೆ. ಇನ್ನು ತ್ರಿಶಾ ಅವರು ಈ ಜೋರೊವನ್ನು 2012ರಲ್ಲಿ ತಮ್ಮ ಮನೆಗೆ ತಂದಿದ್ದರು.
ಇದನ್ನೂ ಓದಿ:1500 ಅಡಿ ಆಳಕ್ಕೆ ಬಿದ್ದ ಬಸ್.. ಪ್ರಯಾಣಿಕರ ರಕ್ಷಣೆಗೆ ಹರಸಾಹಸ
ಈ ಸಂಬಂಧ ಮಾಹಿತಿಯನ್ನು ಸದ್ಯ ತ್ರಿಶಾ ಅವರು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು ನಾಯಿಯ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ ಜೋರೊ ನಮ್ಮನ್ನು ಬಿಟ್ಟು ಅಗಲಿದೆ. ಈ ದುಃಖವನ್ನು ಮರೆಯಲು ಕೆಲವು ದಿನ ಜನರಿಂದ ದೂರವಿರಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್ಗೆ ಅಭಿಮಾನಿಗಳು RIP ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ