‘ಲವ್​ ಯೂ, ಗಿವ್ ಯೂ..’ ಭವ್ಯ ಗೌಡಗೆ Love ಪ್ರಪೋಸ್​ ಮಾಡಿದ ಬಗ್ಗೆ ವಿಕ್ಕಿ ಹೇಳಿದ್ದೇನು?

author-image
Ganesh
Updated On
ಬರೀ ಭವ್ಯಾಗಷ್ಟೇ ಅಲ್ಲ.. ಈ ಸ್ಪರ್ಧಿಗೂ I LOVE YOU ಹೇಳಿದ್ದ ತ್ರಿವಿಕ್ರಮ್‌; ಯಾರದು ಗೊತ್ತಾ?
Advertisment
  • ಅತಿದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ಗೆ ತೆರೆ
  • ನ್ಯೂಸ್​ಫಸ್ಟ್​ ವಿಶೇಷ ಸಂದರ್ಶನದಲ್ಲಿ ತ್ರಿವಿಕ್ರಮ್
  • ಭವ್ಯ ಗೌಡ ಜೊತೆಗಿನ ಸ್ನೇಹದ ಬಗ್ಗೆ ಹೇಳಿದ್ದೇನು?

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ಗೆ (Bigg Boss) ತೆರೆ ಬಿದ್ದಿದೆ. ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ (Trivikram) ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನಲ್ಲಿ ಬಿಗ್​ಬಾಸ್ ಜರ್ನಿ ಮನಬಿಚ್ಚಿ ಮಾತನಾಡಿದರು. ಈ ವೇಳೆ ಭವ್ಯಗೌಡ (Bhavya Gowda) ಮತ್ತು ತಮ್ಮ ನಡುವಿನ ಸ್ನೇಹದ ಬಗ್ಗೆ ಮಾತನಾಡಿದರು.

ಬಿಗ್​ಬಾಸ್​ ಮನೆಯಲ್ಲಿದ್ದಾಗ ತ್ರಿವಿಕ್ರಮ್ ಅವರು ಭವ್ಯಗೌಡಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ತ್ರಿವಿಕ್ರಮ್ ಅವರು ಭವ್ಯಗೆ ಲವ್ ಪ್ರಪೋಸ್ ಮಾಡಿದ್ದಾರೆ. ಅದಕ್ಕೆ ಭವ್ಯ ಸಮಯ ಕೇಳಿದ್ದಾರೆ ಅನ್ನೋ ಸುದ್ದಿ ಎದ್ದಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ತ್ರಿವಿಕ್ರಮ್ ಸ್ಪಷ್ಟನೆ ನಿಡಿದ್ದಾರೆ.

ಇದನ್ನೂ ಓದಿ: BBK11: ಉಗ್ರಂ ಮಂಜು ಸೋಲಿಗೆ ಗೌತಮಿ, ಮೋಕ್ಷಿತಾನೇ ಕಾರಣನಾ? ಶಾಕಿಂಗ್​ ಸಂಗತಿ ಬಿಚ್ಚಿಟ್ಟ ತಂದೆ

publive-image

ತ್ರಿವಿಕ್ರಮ್ ಹೇಳಿದ್ದೇನು..?

ಒಬ್ಬರಿಗೆ ನೀವು ಲವ್​ ಯೂ (Love you) ಅನ್ನೋದ್ರಲ್ಲಿ ತಪ್ಪೇ ಇಲ್ಲ. ನನಗಿಂತ ಅವಳು ಚಿಕ್ಕವಳಿದ್ದಾಳೆ. ಅವಳು ನನಗೆ ತುಂಬಾ ಕ್ಲೋಸ್ ಇದ್ದಾಳೆ. ನಾನು ಆ ಮಾತನ್ನು ಅನುಗೂ ಹೇಳಿದ್ದೆ. ನಿಮಗೆ ಯಾರ ಜೊತೆ ನೋಡಬೇಕು ಅಂದಾಗ ಅಲ್ಲಿ ಆ ವಿಷಯಗಳು ಕೇಳುತ್ತದೆ. ಅದೇ ನಮ್ಮ ಕಿವಿಗೆ ಬೀಳುತ್ತದೆ ಬಿಟ್ಟರೆ ಬೇರೆ ಏನೂ ಇಲ್ಲ. ನಾನು ಬರುವಾಗ ಲೆಟರ್​​ನಲ್ಲೂ ಬರೆದಿದ್ದೆ. ಐ ಲವ್​ ಯೂ ಕುಟ್ಟಿ. ಯಾರು ಏನೇ ಹೇಳಲಿ ತಲೆ ಕೆಡಿಸಿಕೊಳ್ಳಬೇಡ. ನಾನು ನಿಮ್ಮ ಜೊತೆ ಒಳ್ಳೆಯ ಫ್ರೆಂಡ್ ಆಗಿರುತ್ತೇನೆ ಎಂದು.

ಒಂದು ಒಳ್ಳೆಯ ವ್ಯಕ್ತಿ. ಮೊದಲ ದಿನದಿಂದಲೂ ನನಗೆ ಸಾಥ್ ಕೊಟ್ಟುಕೊಂಡು ಬಂದ ವ್ಯಕ್ತಿ. ನಾನು ಕಪ್ ಎತ್ತಿಲ್ಲ ಎಂದರೂ ಪರ್ವಾಗಿಲ್ಲ. ನೀನು ಕಪ್ ಎತ್ತಬೇಕು ಅಂದುಕೊಂಡ ಬಂದಿರುವ ವ್ಯಕ್ತಿ. ಲವ್​ ಯೂ, ಗಿವ್ ಯೂ ಅಲ್ಲ, ಆ ಟೈಮ್​​ನಲ್ಲಿ ಒಬ್ಬ ಕ್ಲೋಸ್ ಪರ್ಸನ್​​ಗೆ ಆ ಟೈಮ್​​ನಲ್ಲಿ ಹೇಳಿದ್ದೆ ಅನ್ಸುತ್ತೆ. ಅದರಲ್ಲಿ ಕುಕ್ ಮಾಡುವಂತದ್ದು ಏನೂ ಇಲ್ಲ. ಅದರಲ್ಲಿ ಏನೂ ಇಲ್ಲ.

ಇದನ್ನೂ ಓದಿ: ಅಮ್ಮನಿಗಾಗಿ ಬರೋಬ್ಬರಿ 8 ಕೋಟಿ ಬೆಲೆಯ ಐಷಾರಾಮಿ ಮನೆ ಕಟ್ಟಿಸಿದ ವರ್ತೂರು ಸಂತೋಷ್​; ಹೇಗಿದೆ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment