/newsfirstlive-kannada/media/post_attachments/wp-content/uploads/2025/01/BBK-11-Trivikram-8.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ವಿನ್ನರ್ ಯಾರೆಂದು ಕಿಚ್ಚ ಸುದೀಪ್ ಕೊನೆಗೂ​ ಘೋಷಣೆ ಮಾಡಿದ್ದಾರೆ. ಇಷ್ಟು ದಿನ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಜನರಿಗೆ ಕೊನೆಗೂ ಉತ್ತರ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಕಟ್ಟ ಕಡೆಯ ಶೋ.. ಗ್ರ್ಯಾಂಡ್ ಫಿನಾಲೆಗೂ ಮುನ್ನ ಕಿಚ್ಚ ಸುದೀಪ್ ಭಾವುಕ! VIDEO
ಹೌದು, ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ ವಿನ್ನರ್​ ಪಟ್ಟವನ್ನು ಹನುಮಂತ ಗಿಟ್ಟಿಸಿಕೊಂಡಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ವಿನ್ನರ್​ಗೆ ಬಂದಿರೋ ವೋಟ್ಸ್​ಗಳನ್ನು ರಿವೀಲ್​ ಮಾಡಿದ್ದರು. ಅಂದ್ರೆ ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಆಗಿರೋ ಹನುಮಂತನಿಗೆ (5,23,89,318) 5 ಕೋಟಿ 23 ಲಕ್ಷದ 89 ಸಾವಿರದ 318 ವೋಟ್ಸ್​ ಅನ್ನು ಪಡೆದುಕೊಂಡಿದ್ದಾರೆ. ರನ್ನರ್ ಅಪ ತ್ರಿವಿಕ್ರಮ್ ಅವರು 2 ಕೋಟಿಗೂ ಹೆಚ್ಚು ವೋಟ್ ಪಡೆದಿದ್ದಾರೆ. ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಇದನ್ನೂ ಓದಿ: BBK11: ಕೊನೆಗೂ 5 ಕೋಟಿ ಕನ್ನಡಿಗರ ಹೃದಯ ಗೆದ್ದ ಹನುಮಂತ; ಬಿಗ್​ಬಾಸ್ ಸೀಸನ್ 11 ವಿನ್ನರ್ ಘೋಷಣೆ
ಆದ್ರೆ ಸಾಕಷ್ಟು ಮಂದಿ ಈ ಬಾರಿಯ ಬಿಗ್​ಬಾಸ್​ ವಿನ್ನರ್​ ತ್ರಿವಿಕ್ರಮ್​ ಆಗುತ್ತಾರೆ ಎಂದು ಅಂದುಕೊಂಡಿದ್ದರು. ಅಲ್ಲದೇ ತ್ರಿವಿಕ್ರಮ್​ ಕೂಡ ಓವರ್ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದರು. ನಾನೇ ಗೆಲ್ಲುತ್ತೇನೆ ಅಂತ ಕಿಚ್ಚ ಸುದೀಪ್​ ಮುಂದೆಯೂ ಹೇಳಿದ್ದರು. ಆದ್ರೆ ಇದೀಗ ವೈಲ್ಡ್​ ಕಾರ್ಡ್​ ಸ್ಪರ್ಧಿ ಹನುಮಂತನ ಮುಂದೆ ತ್ರಿವಿಕ್ರಮ್​ ಸೋತಿದ್ದಾರೆ. ಕೊನೆಯ ಕ್ಷಣದಲ್ಲಿ ಕಿಚ್ಚ ಸುದೀಪ್​ ಅವರು ಹನುಮಂತನ ಕೈ ಎತ್ತಿದ್ದಾರೆ. ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯ ಎಲ್ಲಾ ಟಾಸ್ಕ್‌ನಲ್ಲಿ ಟಾಸ್ಕ್ ಮಾಸ್ಟರ್ ಎಂದೇ ಕರೆಯಿಸಿಕೊಂಡಿದ್ದರು. ಆದರೆ ಹನುಮಂತ ಅವರ ಮುಗ್ದ, ಪ್ರಾಮಾಣಿಕತೆಯ ಆಟದ ಮುಂದೆ ತ್ರಿವಿಕ್ರಮ್ ಅವರ ಆತ್ಮವಿಶ್ವಾಸದ ಆಟ ಸೋತಿದೆ. ಹೀಗಾಗಿ ರನ್ನರ್ ಪಟ್ಟವನ್ನು ತ್ರಿವಿಕ್ರಮ್​ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಈ ಬಾರಿಯ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಮುಕ್ತಾಯಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ