/newsfirstlive-kannada/media/post_attachments/wp-content/uploads/2025/01/hanuma-6-1.jpg)
ಕನ್ನಡದ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಆಗಿ ಹನುಮಂತ ಹೊರ ಹೊಮ್ಮಿದ್ದಾರೆ. ರನ್ನರ್ ಅಪ್​ ಆಗಿ ತ್ರಿವಿಕ್ರಮ್​ ಹೊರ ಹೊಮ್ಮಿದ್ದಾರೆ. ಬಿಗ್​ಬಾಸ್​ ರನ್ನರ್ ಅಪ್ ಆಗಿರೋ ತ್ರಿವಿಕ್ರಮ್​ ಜನರ ಪ್ರೀತಿ ಗಳಿಸಿಕೊಂಡಿದ್ದಾರೆ. ಆದರೆ ಇದರ ಮಧ್ಯೆ ತ್ರಿವಿಕ್ರಮ್ ತಾಯಿ ಹನುಮಂತ ಗೆದ್ದಿದ್ದು ಸರಿಯಿಲ್ಲ ಎಂದಿದ್ದಾರೆ.
ಇದನ್ನೂ ಓದಿ: BBK11 Grand Finale: ಬಿಗ್​ಬಾಸ್ ಸೀಸನ್ 11 ರೋಚಕ ರಿಸಲ್ಟ್.. ತ್ರಿವಿಕ್ರಮ್ ಸೋಲಿಗೆ ಅಸಲಿ ಕಾರಣವೇನು?
/newsfirstlive-kannada/media/post_attachments/wp-content/uploads/2025/01/hanumantha-1.jpg)
ಹೌದು, ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತಾಡಿದ ತ್ರಿವಿಕ್ರಮ್​ ತಾಯಿ ವನಜಾಕ್ಷಿ, ನನಗೆ ಹನುಮಂತನಲ್ಲಿ ಬೇರೆ ಏನೂ ಕಾಣಿಸಲಿಲ್ಲ. ಅವನಿಗೆ ಬಿಟ್ಟು ಬೇರೆ ಯಾರಿಗಾದ್ರೂ ಸಿಕ್ಕಿದರೆ ನನಗೆ ಖುಷಿ ಆಗುತ್ತಿತ್ತು. ನನ್ನ ಮಗನಿಗೆ ಸಿಕ್ಕಿಲ್ಲ ಅಂತ ಬೇಸರ ಇಲ್ಲ, ಅಷ್ಟು ಜನರಲ್ಲಿ ಹನುಮಂತನಿಗೆ ಬಿಟ್ಟು ಬೇರೆಯವರಿಗೆ ಸಿಗಬೇಕಿತ್ತು ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2024/12/trivikram3.jpg)
ಸದ್ಯ ಬಿಗ್​ಬಾಸ್​ ಟ್ರೋಫಿ ಗೆದ್ದುಕೊಂಡಿದ್ದ ಹನುಮಂತ ಸಂಭ್ರಮದಲ್ಲಿ ಮುಳುಗಿದ್ದಾರೆ. ಸಾಕಷ್ಟು ಮಂದಿ ಹನುಮಂತ ಗೆದ್ದಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇದರ ಮಧ್ಯೆ ತ್ರಿವಿಕ್ರಮ್​ ತಾಯಿ ವನಜಾಕ್ಷಿ ಈ ರೀತಿ ಕೊಟ್ಟ ಹೇಳಿಕೆ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us