Advertisment

BBK11: ಸ್ವಾರ್ಥಕ್ಕೆ ಇಷ್ಟು ದಿನ ಯೂಸ್​ ಮಾಡಿಕೊಳ್ಳಬಾರ್ದು ಭವ್ಯಾ? ತ್ರಿವಿಕ್ರಮ್​ ಹೇಳಿದ್ದೇನು?

author-image
Veena Gangani
Updated On
BBK11: ಸ್ವಾರ್ಥಕ್ಕೆ ಇಷ್ಟು ದಿನ ಯೂಸ್​ ಮಾಡಿಕೊಳ್ಳಬಾರ್ದು ಭವ್ಯಾ? ತ್ರಿವಿಕ್ರಮ್​ ಹೇಳಿದ್ದೇನು?
Advertisment
  • ದಿನೇ ದಿನೇ ಬಿಗ್​ಬಾಸ್​ ಮನೆಯಲ್ಲಿ ಹೆಚ್ಚಾಗುತ್ತಿದೆ ಈ ಇಬ್ಬರ ಗಲಾಟೆ
  • ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ ಒಟ್ಟು 8 ಸ್ಪರ್ಧಿಗಳು
  • ಏಕಾಏಕಿ ಭವ್ಯಾ ಗೌಡ ವಿರುದ್ಧ ತ್ರಿವಿಕ್ರಮ್ ತಿರುಗಿ ಬಿದ್ದಿದ್ದು ಏಕೆ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 108ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಸೀಸನ್​ 11 ಮುಕ್ತಾಯಗೊಳ್ಳುವುದಕ್ಕೆ ಇನ್ನೂ 2 ವಾರ ಬಾಕಿ ಉಳಿದಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 8ರಲ್ಲಿ ಕೊನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ ಹನುಮಂತನನ್ನು ಹೊರತು ಪಡಿಸಿ ಉಳಿದ 7 ಜನರು ಈ ವಾರ ನಾಮಿನೇಟ್ ಆಗಿದ್ದಾರೆ.

Advertisment

ಇದನ್ನೂ ಓದಿ:ಚಹಲ್​ -ಧನಶ್ರೀ ಪ್ರೇಮ ಕಹಾನಿ ಹೇಳುತ್ತೆ ಈ ಜೆರ್ಸಿ.. ಪ್ರೀತಿಯ ಮಡದಿನ ಮರೆಯದ ಕ್ರಿಕೆಟಿಗ

ಸದ್ಯ ಬಿಗ್​ಬಾಸ್​ ಕಾಲ ಕಾಲಕ್ಕೆ ಕೊಡುವ ಟಾಸ್ಕ್​ನಲ್ಲಿ ವಿನ್​ ಆದವರು ನಾಮಿನೇಷನ್​ನಿಂದ ಸೇಫ್​ ಆಗಲಿದ್ದಾರೆ. ಸೇಫ್​ ಆಗದೇ ಇರೋ ಸ್ಪರ್ಧಿಗಳಲ್ಲಿ ಓರ್ವ ಸ್ಪರ್ಧಿ ಮಿಡ್​ ವೀಕ್​ನಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೊಗಲಿದ್ದಾರೆ. ಇನ್ನೂ, ಇದೇ ಟಾಸ್ಕ್​ನಲ್ಲಿ ಮೊದಲು ಆಡಿದ ಭವ್ಯಾ ಗೌಡ ಗೆದ್ದು ಬಿಗಿದ್ದಾರೆ. ಮೊದ ಮೊದಲು ಕೆಲವೊಂದು ಟಾಸ್ಕ್​ ಆಡಲು ವಿಫಲರಾಗುತ್ತಿದ್ದರು. ಆದ್ರೆ, ಬಿಗ್​ಬಾಸ್​ ಮುಕ್ತಾಯದ ಕೊನೆಯಲ್ಲಿ ಭವ್ಯಾ ಗೌಡ ಅವರ ಆಟ ಬದಲಾಗಿದೆ. ಟಫ್​ ಕಾಂಪಿಟೇಟರ್ ಆಗಿದ್ದಾರೆ ಭವ್ಯಾ ಗೌಡ.

ಇನ್ನೂ, ಈ ವಾರ ಭವ್ಯಾ ಗೌಡ ಜೊತೆಗೆ ತ್ರಿವಿಕ್ರಮ್​ ಗಲಾಟೆ ಮಾಡಿಕೊಳ್ಳುತ್ತಲೇ ಇದ್ದಾರೆ. ಮೊನ್ನೆಯ ಸಂಚಿಕೆಯಲ್ಲಿ ಭವ್ಯಾ ಗೌಡ ಜೊತೆಗೆ ಗಲಾಟೆ ಮಾಡಿಕೊಂಡು ಬಿಗ್​ಬಾಸ್ ಮನೆಯಲ್ಲಿ ಒಬ್ಬಂಟಿಯಾಗಿದ್ದರು ತ್ರಿವಿಕ್ರಮ್. ಆದರೆ ನಿನ್ನೆಯ ಸಂಚಿಕೆಯಲ್ಲಿ ಏಕಾಏಕಿ ಭವ್ಯಾ ಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿಟ್ಟಿನಲ್ಲಿ ಮಾತಾಡಿದ ತ್ರಿವಿಕ್ರಮ್​, 105 ದಿನ ಇಲ್ಲದೇ ಇರೋ ಬಾಟಿಂಗ್​, ಫ್ರೆಂಡ್ಶಿಪ್ ಇನ್ನೊಬ್ಬರ ಜತೆಗೆ ಸೇರಿಕೊಂಡ ನನ್ನ ಆಚೆ ಇಡುತ್ತಿಯಾ ಅಂದ್ರೇ ಏನ್​ ಅರ್ಥ. ಸಾರ್ಥಕ್ಕೆ ಅಂತ ಒಬ್ಬ ಮನುಷ್ಯನನ್ನು ಇಷ್ಟು ದಿನ ಯೂಸ್​ ಮಾಡಿಕೊಳ್ಳಬಾರದು ಭವ್ಯಾ ಎಂದು ಹೇಳಿದ್ದಾರೆ. ಅದಕ್ಕೆ ಭವ್ಯಾ ಗೌಡ ಕೋಪಗೊಂಡು ಆ ಜಾಗದಿಂದ ಎದ್ದು ಹೋಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment