ಅಲ್ಲು ಅರ್ಜುನ್‌ಗೆ ಎದುರಾಯ್ತು ಕಾನೂನು ಸಂಕಷ್ಟ.. ಪುಷ್ಪಾ 2 ಪ್ರಮೋಷನ್ ವೇಳೆ ದೊಡ್ಡ ಯಡವಟ್ಟು!

author-image
Gopal Kulkarni
Updated On
ಅಲ್ಲು ಅರ್ಜುನ್‌ಗೆ ಎದುರಾಯ್ತು ಕಾನೂನು ಸಂಕಷ್ಟ.. ಪುಷ್ಪಾ 2 ಪ್ರಮೋಷನ್ ವೇಳೆ ದೊಡ್ಡ ಯಡವಟ್ಟು!
Advertisment
  • ಪುಷ್ಪಾ 2 ಸಿನಿಮಾ ಬಿಡುಗಡೆಯ ಮುನ್ನವೇ ವಿವಾದ ಸೃಷ್ಟಿಸಿದದ ಅಲ್ಲು ಅರ್ಜುನ್
  • ನಟ ಅಲ್ಲು ಅರ್ಜುನ್ ಅಭಿಮಾನಿಗಳು ಕುರಿತು ಹೇಳಿದ ಆ ಮಾತು ದುಬಾರಿಯಾಯ್ತಾ?
  • ಹೈದ್ರಾಬಾದ್​ನ ಜವಾಹರ್ ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ದೂರು ದಾಖಲು

ಪುಷ್ಪಾ 2 ಸಿನಿಮಾ ಬಿಡುಗಡೆಗೆ ಇನ್ನೇನು ದಿನಗಣನೆಗಳು ಆರಂಭವಾಗಿವೆ. ಅದರ ನಡುವೆಯೇ ಸಿನಿಮಾದ ನಟ ಅಲ್ಲು ಅರ್ಜುನ್ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ತಮ್ಮ ಅಭಿಮಾನಿ ಬಳಗವನ್ನು ಸೇನೆಗೆ ಹೋಲಿಕೆ ಮಾಡಿ ಮಾತನಾಡಿದ್ದೆ ಈಗ ಅಲ್ಲು ಅರ್ಜುನ್​ಗೆ ದುಬಾರಿಯಾಗಿದೆ. ಅಲ್ಲು ಅರ್ಜುನ್ ವಿರುದ್ಧ ಹೈದ್ರಾಬಾದ್​​ನ ಜವಾಹರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ದಾಖಲಿಸಿದುರವ ಶ್ರೀನಿವಾಸ ಎನ್ನುವವರು ನಾವು ಕಾಲಿವುಡ್ ನಟ ಅಲ್ಲು ಅರ್ಜುನ್ ವಿರುದ್ಧ ನಾವು ದೂರು ದಾಖಲಿಸಿದ್ದೇವೆ, ಈ ದೂರಿನ ಮೂಲಕ ನಾವು ಅಲ್ಲು ಅರ್ಜುನ್​ಗೆ ತಮ್ಮ ಅಭಿಮಾನಿ ಬಳಗವನ್ನು ಸೇನೆಯೆಂದು ಕರೆಯದಂತೆ ವಿನಂತಿ ಮಾಡಿದ್ದೇವೆ. ಸೇನೆಯೆಂಬುದು ಗೌರವಾನ್ವಿತ ಪದವಿ. ಅವರೊಬ್ಬರೇ ಈ ದೇಶವನ್ನು ಎಲ್ಲ ರೀತಿಯಿಂದ ಕಾಪಾಡುವುದರು. ಹೀಗಾಗಿ ನೀವು ನಿಮ್ಮ ಅಭಿಮಾನಿಗಳನ್ನು ಸೇನೆಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ನೀವು ನಿಮ್ಮ ಅಭಿಮಾನಿಗಳನ್ನು ಕರೆಯಲು ಸಾಕಷ್ಟು ಪರ್ಯಾಯ ಪದಗಳು ಇವೆ ಆದ್ರೆ ಸೇನೆಗೆ ನಿಮ್ಮ ಅಭಿಮಾನಿಗಳನ್ನು ಹೋಲಿಸಬೇಡಿ ಎಂದು ಹೇಳದ್ದಾರೆ ಶ್ರೀನಿವಾಸ್

ಇದನ್ನೂ ಓದಿ:2 ಮಕ್ಕಳ ತಾಯಿಯಾದ ಮೇಲೂ ತರುಣಿಯಂತೆ ಕಾಣ್ತಾರೆ.. ನಯನತಾರಾ ಡಯಟ್ ಸಿಕ್ರೇಟ್ ರಿವೀಲ್..!

ಮುಂಬೈನಲ್ಲಿ ತಮ್ಮ ಸಿನಿಮಾ ಪುಷ್ಪಾ 2 ಪ್ರಮೋಷನ್ ವೇಳೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿ ಬಳಗವನ್ನು ಆರ್ಮಿಗೆ ಹೋಲಿಸಿದ್ದರು. ನಾನು ಒಂದು ದೊಡ್ಡ ಸೇನೆಯನ್ನೇ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರು. ಅವು ನನ್ನ ಕುಟುಂಬವಿದ್ದಂತೆ, ಅವರು ಸದಾ ನನ್ನ ಬೆನ್ನ ಹಿಂದೆ ನಿಂತಿರುತ್ತಾರೆ. ನನ್ನ ಗೆಲುವನ್ನು ಸಂಭ್ರಮಿಸುತ್ತಾರೆ. ಅವರು ಅಪ್ಪಟ ಸೇನೆಯಂತೆ ನನ್ನ ಬೆನ್ನಿಗೆ ನಿಂತಿದ್ದಾರೆ, ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಇಂತಹ ಅಭಿಮಾನಿಗಳನ್ನು ಹೊಂದಿದ್ದಕ್ಕೆ ನನಗೆ ಹೆಮ್ಮೆಯಿದೆ. ಈ ಸಿನಿಮಾ ದೊಡ್ಡ ಸಕ್ಸಸ್​ ಕಂಡಲ್ಲಿ ಆ ಗೆಲುವನ್ನು ನಾನು ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದರು

ಯಾವಾಗ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು ಸೇನೆಗೆ ಹೋಲಿಸಿದರೋ ಅಲ್ಲಿಂದ ವಿವಾದದ ಅಲೆಯೆಂದು ಎದ್ದು ನಿಂತಿತು. ಈಗ ಅದು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮಟ್ಟಕ್ಕೂ ಹೋಗಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಲ್ಲದ ವಿವಾವದವೊಂದನ್ನು ಅಲ್ಲು ಅರ್ಜುನ್ ಮೈಮೇಲೆ ಎಳೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ನಟಿಸಿರುವ ಪುಷ್ಪಾ 2 ಸಿನಿಮಾ ಇದೇ ತಿಂಗಳು 5ನೇ ತಾರೀಖು ರಿಲೀಸ್ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಸಿದ್ದಾರೆ. ಫಹಾದ್ ಫಾಸಿಲ್​ ಪೊಲೀಸ್ ಆಫೀಸರ್​ ಪಾತ್ರದಲ್ಲಿ ಮಿಂಚಿದ್ದಾರೆ. ಪುಷ್ಪಾ ಸಿನಿಮಾದ ಈ ಸಿಕ್ವೆಲ್ ಕಲೆಕ್ಷನ್​ನಲ್ಲಿ ಮೊದಲ ಭಾಗವನ್ನೂ ಮೀರಿಸಲಿದೆ ಎಂಬ ನಿರೀಕ್ಷೆಯಿದ್ದು. ಈಗಾಗಲೇ ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು. ಟಿಕೆಟ್ ರೇಟು ಗಗನಕ್ಕೆ ಮುಟ್ಟಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment