newsfirstkannada.com

810 ಕೆಜಿ ಚಿನ್ನ..! ಒಟ್ಟು 666 ಕೋಟಿ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಟ್ರಕ್ ಪಲ್ಟಿ.. ಮುಂದೇನಾಯ್ತು..?

Share :

Published May 9, 2024 at 9:59am

  ಟ್ರಕ್​​ನಲ್ಲಿದ್ದ ಚಿನ್ನಾಭರಣಗಳನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು

  ದುರ್ಘಟನೆಯಲ್ಲಿ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

  ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು

ತಮಿಳುನಾಡಿನ ಕೊಯಮತ್ತೂರಿನಿಂದ ಸೇಲಂಗೆ ಚಿನ್ನಾಭರಣ ಸಾಗಿಸುತ್ತಿದ್ದ ಟ್ರಕ್ ಮೇ 8ರಂದು ಅಪಘಾತಕ್ಕೀಡಾಗಿದೆ. ಮಾಹಿತಿಯ ಪ್ರಕಾರ.. ವಾಹನಕ್ಕೆ ಕಟ್ಟಲಾಗಿದ್ದ ಟಾರ್ಪಾಲಿನ್ ಹಾರಿ ಹೋಗಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡು ಟ್ರಕ್ ಪಲ್ಟಿ ಹೊಡೆದಿದೆ.
ವಾಹನದಲ್ಲಿ 810 ಕೆಜಿ ಚಿನ್ನಾಭರಣ ಇತ್ತು. ಈ ಆಭರಣಗಳ ಮೌಲ್ಯ ಸುಮಾರು 666 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಇದನ್ನೂ ಓದಿ:ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರ ಸಹಾಯದಿಂದ ಬದಲಿ ವಾಹನದ ಮೂಲಕ ಚಿನ್ನಾಭರಣವನ್ನು ಸೇಲಂಗೆ ಕಳುಹಿಸಲಾಗಿದೆ. ಈ ಅಪಘಾತದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು.. ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದರಲ್ಲಿ ಚಿನ್ನಾಭರಣಗಳು ಇದ್ದವು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಿಚಾರಣಾಧೀನ ಕೈದಿ ನಂಬರ್​ 4567; ನಿನ್ನೆ ರಾತ್ರಿ ರೇವಣ್ಣರ ಜೈಲಿನ ದಿನಚರಿ ಹೇಗಿತ್ತು..?

ಅಪಘಾತದಲ್ಲಿ ಇಬ್ಬರಿಗೆ ಗಾಯ..!
ಅಪಘಾತದಲ್ಲಿ ಚಾಲಕ ಶಶಿಕುಮಾರ್ (29), ಭದ್ರತಾ ಸಿಬ್ಬಂದಿ ಪಾಲ್ರಾಜ್ (40) ಮತ್ತು ಸಹಾಯಕ ನವೀನ್ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿನ್ನಾಭರಣ ಯಾರಿಗೆ ಸೇರಿತ್ತು ಅನ್ನೋದ್ರ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

810 ಕೆಜಿ ಚಿನ್ನ..! ಒಟ್ಟು 666 ಕೋಟಿ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಟ್ರಕ್ ಪಲ್ಟಿ.. ಮುಂದೇನಾಯ್ತು..?

https://newsfirstlive.com/wp-content/uploads/2024/05/TRUCK.jpg

Load More