newsfirstkannada.com

ಹಬ್ಬದ ದಿನ ಕಂದಕಕ್ಕೆ ಉರುಳಿ ಬಿದ್ದ ಟ್ರಕ್​; 17 ಜನರು ಸಾವು, 40 ಮಂದಿಗೆ ಗಾಯ

Share :

Published April 11, 2024 at 2:04pm

Update April 11, 2024 at 2:06pm

    ದೇವಸ್ಥಾನದ ಕಡೆಗೆ ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರಕ್​

    50ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ಲಾರಿ ಕಂದಕಕ್ಕೆ

    ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಲಾರಿ

ಟ್ರಕ್​ವೊಂದು ಕಂದಕಕ್ಕೆ ಬಿದ್ದ ಪರಿಣಾಮ 17 ಜನರು ಸಾವನ್ನಪ್ಪಿದ ಘಟನೆ ಬಲೂಚಿಸ್ತಾನದಲ್ಲಿ ನಡೆದಿದೆ. ಸುಮಾರು 40 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

50ಕ್ಕೂ ಹೆಚ್ಚು ಜನರನ್ನು ಹೊತ್ತು ಸಾಗುತ್ತಿದ್ದ ಲಾರಿ ಷಾ ನೂರಾನಿ ದೇವಸ್ಥಾನದ ಕಡೆಗೆ ಸಾಗುತ್ತಿತ್ತು. ಈ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ 17 ಜನರು ಕೊನೆಯುಸಿರೆಳೆದಿದ್ದಾರೆ.

ಸಾವನ್ನಪ್ಪಿದ 17 ಮಂದಿಯಲ್ಲಿ 15 ಜನರನ್ನು ಗುರುತಿಸಲಾಗಿದೆ. ಈ ದುರ್ಘಟನೆ ಬಗ್ಗೆ ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್​ ಸರ್ಫ್ರಾಜ್​​ ಬುಗ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ಪುಷ್ಪಾ 2 ಸಲಾರ್ ದಾಖಲೆ ಬ್ರೇಕ್ ಮಾಡಿದ್ಯಾ? ಇಲ್ವಾ? ಅಲ್ಲು ಅರ್ಜುನ್-ಪ್ರಭಾಸ್​ ಫ್ಯಾನ್ಸ್ ಮಧ್ಯೆ ಬಿಗ್‌ ವಾರ್

WHO ಮಾಹಿತಿ ಪ್ರಕಾರ, 2018ರಲ್ಲಿ ಪಾಕಿಸ್ತಾನ ರಸ್ತೆ ಅಫಘಾತಗಳಲ್ಲಿ ಸುಮಾರು 27 ಸಾವಿರಕ್ಕೂ ಅಧಿಕ ಜನರು ಸಾವು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಬ್ಬದ ದಿನ ಕಂದಕಕ್ಕೆ ಉರುಳಿ ಬಿದ್ದ ಟ್ರಕ್​; 17 ಜನರು ಸಾವು, 40 ಮಂದಿಗೆ ಗಾಯ

https://newsfirstlive.com/wp-content/uploads/2024/04/Truck.jpg

Load More