ರಸ್ತೆಯ ಕಂದಕಕ್ಕೆ ಉರುಳಿಬಿದ್ದ ಟ್ರಕ್, ರಸ್ತೆ ಪಾಲಾದ ಬೆಲೆಬಾಳುವ ಬಿಯರ್ ಬಾಟಲ್​​ಗಳು..!

author-image
Ganesh
Updated On
ರಸ್ತೆಯ ಕಂದಕಕ್ಕೆ ಉರುಳಿಬಿದ್ದ ಟ್ರಕ್, ರಸ್ತೆ ಪಾಲಾದ ಬೆಲೆಬಾಳುವ ಬಿಯರ್ ಬಾಟಲ್​​ಗಳು..!
Advertisment
  • ಮಳೆಯ ನಡ್ವೆಯೂ ಹೊಟ್ಟೆ ಉರಿದುಕೊಂಡ ಬಿಯರ್ ಪ್ರಿಯರು
  • ದೆಹಲಿಯಲ್ಲಿ ಧೋಣಿ ಮೇಲೆ ಓಡಾಡೋ ಪರಿಸ್ಥಿತಿ ನಿರ್ಮಾಣ
  • ಬೆಂಗಳೂರನ್ನ ಟೀಕಿಸೋರೆ ಗುರುಗ್ರಾಮ, ಡೆಲ್ಲಿಯನ್ನ ಒಮ್ಮೆ ನೋಡಿ..

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುರುಗ್ರಾಮದಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತ್ತವಾಗಿವೆ. ದೆಹಲಿ ಹಾಗೂ ಗುರುಗ್ರಾಮ ನಗರದ ರಸ್ತೆಗಳು ನದಿಯಂತಾಗಿವೆ. ದೆಹಲಿ ಹಾಗೂ ಗುರುಗ್ರಾಮದ ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ಕಷ್ಟವಾಗಿತ್ತು. ಹರಿಯಾಣದ ಗುರುಗ್ರಾಮದ ಸದರನ್ ಫೆರಿಫೆರಲ್ ರೋಡ್​ನಲ್ಲಿ ದೊಡ್ಡ ಕಂದಕ ಬಿದ್ದಿದೆ. ಇದು ಗೊತ್ತಾಗದೆ ಟ್ರಕ್​​ವೊಂದು ಕಂದಕಕ್ಕೆ ಬಿದ್ದಿದೆ. ಈ ಟ್ರಕ್​ನಲ್ಲಿ ಬಿಯರ್ ಬಾಟಲಿಗಳನ್ನು ಸಾಗಿಸಲಾಗುತ್ತಿತ್ತು. ಟ್ರಕ್ ಕಂದಕಕ್ಕೆ ಬಿದ್ದಿದ್ದರಿಂದ ಟ್ರಕ್ ರಸ್ತೆಯಲ್ಲಿ ಉರುಳಿಬಿದ್ದಿದೆ. ಬಿಯರ್ ಬಾಟಲಿಗಳೆಲ್ಲಾ ಸ್ಥಳದಲ್ಲೇ ಹೊಡೆದು ಹೋಗಿವೆ. ಬೆಲೆಬಾಳುವ ಬಿಯರ್ ರಸ್ತೆ ಪಾಲಾಗಿದೆ. ಮದ್ಯಪ್ರಿಯರ ಅಚ್ಚುಮೆಚ್ಚಿನ ಬಿಯರ್ ರಸ್ತೆ ಪಾಲಾಗಿದ್ದನ್ನು ಕಂಡು ಬಿಯರ್ ಪ್ರಿಯರಂತೂ ಹೊಟ್ಟೆ ಉರಿದುಕೊಂಡಿದ್ದಾರೆ.

ಗುರುಗ್ರಾಮದಲ್ಲಿ ಕಳೆದ ರಾತ್ರಿ ಕೇವಲ 12 ಗಂಟೆಯಲ್ಲಿ 133 ಮಿಲಿಮೀಟರ್ ನಷ್ಟು ಭಾರೀ ಮಳೆಯಾಗಿದೆ. ಕೇವಲ 90 ನಿಮಿಷಗಳಲ್ಲಿ 103 ಮಿಲಿಮೀಟರ್ ನಷ್ಟು ಮಳೆಯಾಗಿದೆ. ವಜೀರಾಬಾದ್ ತಹಸೀಲ್​ನಲ್ಲಿ 122 ಮಿಲಿಮೀಟರ್ ನಷ್ಟು ಭಾರಿ ಮಳೆಯಾಗಿದೆ.

ಈ ಬಿಯರ್ ಟ್ರಕ್ ಕಂದಕಕ್ಕೆ ಉರುಳಿಬಿದ್ದರೂ ಟ್ರಕ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಚಾಲಕನ ಹೇಳಿಕೆಯ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಸದರನ್ ಫೆರಿಫರಲ್ ರಸ್ತೆಯಲ್ಲಿ ಇತ್ತೀಚೆಗೆ ಚರಂಡಿ ನಿರ್ವಹಣೆಯ ಕೆಲಸ ನಡೆದಿತ್ತು. ದೆಹಲಿ ಹಾಗೂ ಗುರುಗ್ರಾಮದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಧಾನಿ ವಲಯದಲ್ಲಿ ಕಳೆದ ರಾತ್ರಿ ಭಾರಿ ಮಳೆಯಿಂದ ಹೆಚ್ಚಿನ ಅವಾಂತರಗಳು ಸೃಷ್ಟಿಯಾಗಿವೆ.

ರಸ್ತೆಗಳಲ್ಲಿ ಕೆಲವರು ಬೋಟ್ ಮೂಲಕ ಸಂಚಾರ ಮಾಡಬಹುದು. ದೆಹಲಿ ಹಾಗೂ ಗುರುಗ್ರಾಮ ನಗರಗಳು ವೆನ್ನಿಸ್ ನಗರದಂತಾಗಿವೆ. ಗುರುಗ್ರಾಮದಲ್ಲಿ ಶ್ರೀಮಂತರು 8-10 ಕೋಟಿ ರೂಪಾಯಿ ನೀಡಿ ಲಕ್ಷುರಿ ಮನೆ, ಅಪಾರ್ಟ್ ಮೆಂಟ್ ಫ್ಲಾಟ್​​ಗಳನ್ನು ಖರೀದಿಸಿದ್ದಾರೆ. ಗುರುಗ್ರಾಮದಲ್ಲಿ ಸರಿಯಾದ ರಸ್ತೆ, ಚರಂಡಿ, ಒಳಚರಂಡಿ ವ್ಯವಸ್ಥೆಯೇ ಇಲ್ಲ. ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ಹೋಗುವ ವ್ಯವಸ್ಥೆಯೇ ಇಲ್ಲ. ಇದೊಂದು ಮಿಲೇನಿಯಂ ಸಿಟಿ ಅಂತ ಬೇರೆ ಇದಕ್ಕೆ ಕರೆಯುತ್ತಾರೆ ಅಂತ ಗುರುಗ್ರಾಮದ ಮೂಲಸೌಕರ್ಯದ ಬಗ್ಗೆ ಅನೇಕರು ಟೀಕೆ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐ.ಟಿ. ಸಿಟಿ ಗುರುಗ್ರಾಮ ಕೇವಲ 90 ನಿಮಿಷದ ಮಳೆಗೆ ಮುಳುಗಿ ಹೋಗಿದೆ. ಉತ್ತರ ಭಾರತದಿಂದ ಬೆಂಗಳೂರಿಗೆ ಉದ್ಯೋಗಕ್ಕೆ ಬಂದಿರುವ ಟೆಕ್ಕಿಗಳು, ಬೆಂಗಳೂರು ಅನ್ನು ಮಾತ್ರ ಮಳೆಯ ಕಾರಣಕ್ಕೆ ಟೀಕಿಸುತ್ತಾರೆ. ಮೊದಲು ತಮ್ಮ ಉತ್ತರ ಭಾರತದ ಗುರುಗ್ರಾಮ, ದೆಹಲಿಯ ಸ್ಥಿತಿಯನ್ನೊಮ್ಮೆ ನೋಡಿಕೊಳ್ಳಲಿ ಎಂದು ಬೆಂಗಳೂರಿಗರು ಉತ್ತರ ಭಾರತೀಯರಿಗೆ ಟಾಂಗ್ ನೀಡಿದ್ದಾರೆ. ಬೆಂಗಳೂರು ಟೀಕಿಸುವವರು ಬೇಕಾದರೆ ಉತ್ತರದ ಐ.ಟಿ. ಸಿಟಿ ಗುರುಗ್ರಾಮ, ನೋಯ್ಡಾದಲ್ಲೇ ಹೋಗಿ ಇರಲಿ ಅಂತ ಕನ್ನಡಿಗರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment