ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಅಕ್ಕಿ ತುಂಬಿದ ಲಾರಿ.. ಹಳ್ಳಕ್ಕೆ ಚೆಲ್ಲಿದ ಮೂಟೆ.. ಚಾಲಕನ ಸ್ಥಿತಿ?

author-image
AS Harshith
Updated On
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಅಕ್ಕಿ ತುಂಬಿದ ಲಾರಿ.. ಹಳ್ಳಕ್ಕೆ ಚೆಲ್ಲಿದ ಮೂಟೆ.. ಚಾಲಕನ ಸ್ಥಿತಿ?
Advertisment
  • ಬೆಳ್ಳಂ ಬೆಳಗ್ಗೆ 3 ಗಂಟೆ ಸುಮಾರಿಗೆ ಪಲ್ಟಿ ಹೊಡೆದ ಲಾರಿ
  • ಅಕ್ಕಿ ತುಂಬಿದ್ದ ಲಾರಿ ಪಲ್ಟಿ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್
  • ನಿಯಂತ್ರಣ ತಪ್ಪಿ ಹಳ್ಳಕ್ಕೆ ಹೋಗಿ ಬಿದ್ದ ಅಕ್ಕಿ ತುಂಬಿದ ಲಾರಿ

ರಾಯಚೂರು: ಅಕ್ಕಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ಸಿಂಧನೂರು ಬಳಿ ನಡೆದಿದೆ. ಬೆಳ್ಳಂ ಬೆಳಗ್ಗೆ 3 ಗಂಟೆ ಸುಮಾರಿಗೆ ಲಾರಿ ಪಲ್ಟಿಯಾಗಿದೆ.

ರಾಯಚೂರು ಮುಖ್ಯರಸ್ತೆಯ ಹಳ್ಳದಲ್ಲಿ ಅಕ್ಕಿ ಲಾರಿ ಪಲ್ಟಿಯಾಗಿದೆ. ನಡುರಸ್ತೆಯಲ್ಲೇ ಲಾರಿ ಪಲ್ಟಿ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

publive-image

ಇದನ್ನೂ ಓದಿ: ಇಂದು ರಾಮನವಮಿ ಸಂಭ್ರಮ.. ಅಯೋಧ್ಯೆಯ ಬಾಲರಾಮನ ಸ್ಪರ್ಶಿಸಲಿವೆ ಸೂರ್ಯನ ಹೊಂಗಿರಣಗಳು, ಹೇಗೆ?

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment