/newsfirstlive-kannada/media/post_attachments/wp-content/uploads/2025/04/Trucks.jpg)
ಅಧಿಕಾರಿಗಳ ಕಿರುಕುಳದ ವಿರುದ್ಧ ಸಮರ ಸಾರಿರೋ ಲಾರಿ ಮಾಲೀಕರು ನಾವು ಲಾರಿಗಳನ್ನ ಬೀದಿಗಿಳಿಸಲ್ಲ ಅಂತ ಹಠ ಹಿಡಿದಿದ್ದಾರೆ. ಲಾರಿಗಳು, ಗೋಡೌನ್ನಲ್ಲೇ ಲಂಗರು ಹಾಕಿವೆ. ಅನಿರ್ದಿಷ್ಟಾವಧಿ ಮುಷ್ಕರ ಮಧ್ಯರಾತ್ರಿಯಿಂದ್ಲೇ ಆರಂಭವಾಗಿದೆ. ಈ ಲಾರಿ ಸ್ಟ್ರೈಕ್ ತರಕಾರಿ ಸೇರಿ ಅಗತ್ಯ ಸೇವೆಗಳ ಪೂರೈಕೆಯಲ್ಲಿ ವ್ಯತ್ಯಯ ಸೃಷ್ಟಿಸಲಿದೆ.
ಡಿಸೇಲ್-ಪೆಟ್ರೋಲ್ ಬೆಲೆ ಏರಿಕೆ.. ಟೋಲ್ ಶುಲ್ಕ ಹೆಚ್ಚಳ.. RTO ಅಧಿಕಾರಿಗಳ ಕಿರುಕುಳ.. ಹೀಗೆ ಸಾಲು ಸಾಲು ಪಟ್ಟಿ ಹಿಡ್ಕೊಂಡಿರೋ ಲಾರಿ ಮಾಲೀಕರು ಇವತ್ತು ಸರಿಯಾಗಿ ಮಧ್ಯರಾತ್ರಿ 12 ಗಂಟೆಯಿಂದ್ಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಶುರುವಾಗಿದೆ.
ಇದನ್ನೂ ಓದಿ: ಐಷಾರಾಮಿ ಕಾರು ಖರೀದಿಸಿದ ಕಾಂತಾರ ನಟ ರಿಷಬ್ ಶೆಟ್ಟಿ.. ಇದರ ಬೆಲೆ ಎಷ್ಟು ಕೋಟಿ ರೂ. ಗೊತ್ತಾ?
ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಶುರು
ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ ಶುರುವಾಗಿದ್ದು. ಲಾರಿ ಸಂಚಾರವನ್ನ ನಿಲ್ಲಿಸಿದ್ರು. ಯಶವಂತಪುರ ಟ್ರಕ್ ಟರ್ಮಿನಲ್ನಲ್ಲಿ ಲಾರಿಗಳು.. ಸಾಲುಗಟ್ಟಿ ನಿಂತಿದ್ವು.. ಸರಕು ಸಾಗಾಣಿಕೆ ಲಾರಿಗಳ ಸಂಚಾರ ಸ್ಥಬ್ಧವಾಗಿತ್ತು.. ಟ್ರಕ್ ಟರ್ಮಿನಲ್ನಲ್ಲಿ ಹೀಗೆ ಸರಕುಗಳ ಸಾಗಾಣಿಕೆಗೆ ಬಳಕೆಯಾಗ್ತಿದ್ದ ಲಾರಿಗಳು ಕ್ಯೂ ನೋಡಿ ಜನ ಕಂಗಾಲಗಿದ್ರು.
ಬೇಡಿಕೆ ಏನು?
- ಡಿಸೇಲ್ ದರ ಕಡಿಮೆ ಮಾಡಬೇಕು
- ರಾಜ್ಯ ಹೆದ್ದಾರಿ ಟೋಲ್ ಪ್ಲಾಜಾ ರದ್ದು
- RTO ಗಡಿ ಚೆಕ್ ಪೋಸ್ಟ್ ರದ್ದು
- FC ಶುಲ್ಕವನ್ನ ಕಡಿಮೆ ಮಾಡಬೇಕು
- ಸಾರಿಗೆ ವಾಹನಗಳಿಗೆ ನಗರ ಪ್ರದೇಶ ಮುಕ್ತ
ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಮತ್ತು ಏಜೆಂಟ್ ಅಸೋಸಿಯೇಷನ್ ಲಾರಿ ಬಂದ್ ಮಾಡ್ತಿವೆ. ಮತ್ತೊಂದ್ಕಡೆ ಫೆಡರೇಷನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ ಯಾವುದೇ ಕಾರಣಕ್ಕೂ ನಾವು ಬಂದ್ ಮಾಡಲ್ಲ ಅಂತಿದೆ.
ಇದನ್ನೂ ಓದಿ: ಆರೋಗ್ಯ ರಕ್ಷಣೆಯಲ್ಲಿ AI ಆವಿಷ್ಕಾರ.. 14ನೇ LHIF ಆವೃತ್ತಿಗೆ ಕ್ಷಣಗಣನೆ; ನೀವೂ ಭಾಗವಹಿಸಿ!
‘ಬಂದ್’ ಬಣ ಹೇಳೋದೇನು?
ಬಂದ್ ಮಾಡ್ತೀವಿ ಅನ್ನೋರು ಹೇಳ್ತಿರೋದೇನು ಅಂದ್ರೆ ಇವತ್ತು ಮಧ್ಯರಾತ್ರಿಯಿಂದ್ಲೇ ಏರ್ಪೊರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು, ಮರಳು ಲಾರಿಗಳು ರಸ್ತೆಗೆ ಇಳೀತಿಲ್ಲ. ಗೂಡ್ಸ್ ವೆಹಿಕಲ್ಸ್ ಮತ್ತು 5 ಲಕ್ಷ ಲಾರಿಗಳ ಸಂಚಾರವೂ ಬಂದ್ ಆಗಿದೆ. ಅಕ್ಕಿ ಲೋಡ್ ವೆಹಿಕಲ್, ಗೂಡ್ಸ್, ಪೆಟ್ರೋಲ್, ಡಿಸೇಲ್ ಟ್ಯಾಂಕರ್‌ಗಳೂ ಬಂದ್ ಆಗಿದೆ. ಇನ್ನು ಹಾಲು, ಔಷಧ, ತರಕಾರಿ, ಹಣ್ಣು ಪೂರೈಕೆ, ಮೆಡಿಕಲ್ ಶಾಪ್, ಆಸ್ಪತ್ರೆ, ಌಂಬುಲೆನ್ಸ್, ಫೈರ್ ಸರ್ವಿಸ್ಗೆ ನಾವು ತೊಂದ್ರೆ ಮಾಡಲ್ಲ ಎಂದಿದ್ದಾರೆ.
ಏರ್ಪೋರ್ಟ್ ಟ್ಯಾಕ್ಸಿ.. ವರ್ತಕರೂ ನೈತಿಕ ಬೆಂಬಲ ಮಾತ್ರ ಕೊಟ್ಟಿದ್ದಾರೆ. ಹೀಗಾಗಿ ಅಕ್ಕಿ ಲೋಡ್ ಪೂರೈಕೆಯಲ್ಲೂ ವ್ಯತ್ಯಯ ಸಾಧ್ಯತೆಯಿಲ್ಲ. ಆದ್ರೆ ಗ್ಯಾಸ್ ಸರ್ವೀಸ್, ಪೆಟ್ರೋಲ್ - ಡೀಸೆಲ್ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯ ಆಗೋ ಸಾಧ್ಯತೆ ಇದೆ. ಒಟ್ನಲ್ಲಿ, ಲಾರಿಗಳ ಓಡಾಟ ಮಧ್ಯರಾತ್ರಿಯಿಂದಲೇ ನಿಂತಿದೆ. ಸಹಜವಾಗಿ ಬೆಂಗಳೂರಿನಂತ ದೊಡ್ಡ ಸಿಟಿಯಲ್ಲಿ ಸಮಸ್ಯೆ ಆಗೋದು ನಿಶ್ಚಿತ. ಇದು ಜನಸಾಮಾನ್ಯನ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಕಾದುನೋಡಬೇಕು.
ಇದನ್ನೂ ಓದಿ: ಲವ್ವರ್ ಜೊತೆ AC ಲಾಡ್ಜ್ನಲ್ಲಿದ್ದ.. ಸುದ್ದಗುಂಟೆ ಪಾಳ್ಯದ ಕಾಮುಕನ ಕ್ಲೂ ಕೊಟ್ಟಿದ್ದು ಒಂದು ಸಿಮ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ