/newsfirstlive-kannada/media/post_attachments/wp-content/uploads/2025/03/25-Percent-Tax.jpg)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ತಮ್ಮ ತೆರಿಗೆ ಸಮರವನ್ನು ಮುಂದುವರಿಸಿದ್ದಾರೆ. ಈ ಬಾರಿ ವಿದೇಶಿ ನಿರ್ಮಿತ ಕಾರುಗಳಿಗೆ ದೊಡ್ಡ ಹೊಡೆತ ಕೊಡುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ತೆರಿಗೆ ನೀತಿಯನ್ನು ಘೋಷಿಸಿದ್ದಾರೆ. ಅಮೆರಿಕಾದಾಚೆ ತಯಾರಾಗುವ ಹಾಗೂ ಅಮೆರಿಕಾಗೆ ರಫ್ತಾಗುವ ಕಾರುಗಳ ಮೇಲೆ ಹಾಗೂ ಲಘು ಭಾರದ ಟ್ರಕ್ಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ಹೇರುವ ಮೂಲಕ ಶಾಕ್ ಕೊಟ್ಟಿದ್ದಾರೆ. ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಈ ಒಂದು ತೆರಿಗೆ ನೀತಿಯನ್ನು ಟ್ರಂಪ್ ಘೋಷಿಸಿದ್ದಾರೆ.
ಇದನ್ನೂ ಓದಿ:3,900 ಚದರ ಕಿ.ಮೀ ಭೂಕಬಳಿಕೆಗೆ ಯತ್ನ.. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ನಿತ್ಯಾನಂದ! ಅಸಲಿಯತ್ತು ಏನು?
ಯುನೈಟೆಡ್ ಸ್ಟೇಟ್ನಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಲು ನಾವು ಸಿದ್ಧರಾಗಿದ್ದೇವೆ. ಈ ಒಂದು ತೆರಿಗೆ ಶಾಶ್ವತವಾಗಿ ಉಳಿಯಲಿದೆ. ಈ ಹಿಂದೆ 2.5 ರಷ್ಟಿದ್ದ ತೆರಿಗೆ ಈಗ ಶೇಕಡಾ 25ರಷ್ಟು ತಲುಪಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಸಹಾಯಕವಾಗಿ ನಿಲ್ಲಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಹಿಂದೆ ಎಂದು ಕಾಣದಂತಹ ದೊಡ್ಡದಾದ ಆರ್ಥಿಕ ಬೆಳವಣಿಗೆಯನ್ನು ನಾವು ನೋಡಲಿದ್ದೇವೆ ಎಂದು ಹೇಳುವುದರ ಜೊತೆಗೆ ಅಮೆರಿಕಾದಲ್ಲಿಯೇ ಕಾರು ಉತ್ಪಾದನೆ ಮಾಡಿದಲ್ಲಿ ಆ ಕಾರುಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ತೆರಿಗೆ ರಹಿತವಾಗಿ ಕಾರು ಉತ್ಪಾದನೆ ಮಾಡಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಏಪ್ರಿಲ್ 2ನ್ನು ಲಿಬರೇಷನ್ ಡೇ ಎಂದು ಆಚರಿಸಲಾಗುತ್ತದೆ ಹೀಗಾಗಿ ಅದೇ ದಿನದಿಂದ ಅನ್ವಯವಾಗುಂತೆ ವಿದೇಶಿ ಕಾರುಗಳ ಮೇಲೆ ಡೊನಾಲ್ಡ್ ಟ್ರಂಪ್ ಶೇಕಡಾ 25 ರಷ್ಟು ತೆರಿಗೆ ಹಾಕುವ ಮೂಲಕ ಅಮೆರಿಕಾದಾಚೆಗಿನ ದೇಶಗಳ ಆಟೋಮೊಬೈಲ್ ವಲಯಕ್ಕೆ ದೊಡ್ಡ ಶಾಕ್ ಕೊಟ್ಟಿದ್ದಾರೆ.
ವಿದೇಶಿ ಉತ್ಪನ್ನಗಳಿಗೆ ಈ ರೀತಿ ದೊಡ್ಡ ಮಟ್ಟದ ತೆರಿಗೆ ಹೇರುವ ಮೂಲಕ ಟ್ರಂಪ್ ದೇಶದ ಆದಾಯವನ್ನು ಹೆಚ್ಚಿಸುವ ಹಾಗೂ ಯುಎಸ್ನ ಇಂಡಸ್ಟ್ರಿಯಲ್ ಸೆಕ್ಟರ್ನ್ನು ನವೀಕರಿಸುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಿಷ್ಟೇ ಅಲ್ಲ ಬರುವ ದಿನಗಳಲ್ಲಿ ಇನ್ನು ಹಲವು ವಿದೇಶಿ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
ಇನ್ನು ಟ್ರಂಪ್ನ ಈ ನಿರ್ಧಾರದ ಹಿಂದೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಪಾತ್ರ ದೊಡ್ಡದಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಟ್ರಂಪ್ ಈ ವಿಚಾರದಲ್ಲಿ ಒಂದು ಸ್ಪಷ್ಟನೆ ನೀಡಿದ್ದು. ತೆರಿಗೆ ಏರಿಕೆಯಲ್ಲಿ DOGE ನ ಯಾವುದೇ ಪಾತ್ರವಿಲ್ಲ. ಮಸ್ಕ್ ಆಟೋಮೊಬೈಲ್ಗೆ ಸಂಬಂಧಿಸಿದ ತೆರಿಗೆ ವಿಚಾರದಲ್ಲಿ ಯಾವುದೇ ರೀತಿಯಾದ ಸಲಹೆಯನ್ನು ನನಗೆ ನೀಡಿಲ್ಲ ಎಂದು ಹೇಳಿದ್ದಾರೆ.
ಶೇಕಡಾ 25 ರಷ್ಟು ತೆರಿಗೆ.. ಭಾರತಕ್ಕೆ ಆಗಲಿರುವ ಪರಿಣಾಮ ಏನು?
ಟ್ರಂಪ್ ವಿದೇಶಿ ಕಾರುಗಳ ಮೇಲೆ ಶೇಕಡಾ 25 ರಷ್ಟು ತೆರಿಗೆಯನ್ನು ಹೇರಿದ ನಿರ್ಧಾರ ಭಾರತದ ಆಟೋಮೊಬೈಲ್ ಕ್ಷೇತ್ರದ ಮೇಲೂ ಪರಣಾಮ ಬೀರಲಿದೆ. ಭಾರತದ ಹಲವು ಕಂಪನಿಗಳ ಕಾರುಗಳು ಅಮೆರಿಕಾಗೆ ಇಂದಿಗೂ ಕೂಡ ರಫ್ತಾಗುತ್ತವೆ. ಭಾರತೀಯ ಪ್ರಮುಖ ಕಂಪನಿಗಳಾದ ಟಾಟಾ ಮೋಟರ್ಸ್ ಇಚರ್ ಮೋಟರ್ಸ್ ಸೋನಾ ಬಿಎಲ್ಡಬ್ಲೂ ಮತ್ತು ಸಂವರ್ಧನಾ ಮದರ್ ಸನ್ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ.
ಟಾಟಾ ಮೋಟರ್ಸ್ ನೇರವಾಗಿ ಅಮೆರಿಕಾಗೆ ತನ್ನ ಕಾರುಗಳನ್ನು ರಫ್ತು ಮಾಡದಿದ್ದರು ಕೂಡ, ಈ ಕಂಪನಿಯ ಜಾಗ್ವಾರ್ ಲ್ಯಾಂಡ್ ರೋವರ್ಗಳ ಹೆಜ್ಜೆ ಗುರುತುಗಳು ಅಮೆರಿಕಾದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಮೂಡಿವೆ. ಜಾಗ್ವಾರ್ ಲ್ಯಾಂಡ್ ರೋವರ್ನ 2024ರ ವರದಿಯ ಪ್ರಕಾರ ಈ ಕಂಪನಿಯ ಶೇಕಡಾ 22 ರಷ್ಟು ಕಾರುಗಳ ಮಾರಾಟ ಯುಎಸ್ನಲ್ಲಿ ಆಗಿದೆ. 2024ರಲ್ಲಿ ಜಾಗತಿಕವಾಗಿ 4 ಲಕ್ಷ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಮಾರಾಟವಾಗಿವೆ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ.
ಇದನ್ನೂ ಓದಿ: ಬೀದಿಗೆ ಬಂತು 10 ಬಿಲಿಯನ್ ಡಾಲರ್ ಉದ್ಯಮಿ ದಾಂಪತ್ಯ ಕಲಹ; ಜಗತ್ತಿನಲ್ಲೇ ಅತಿ ಹೆಚ್ಚು ಚರ್ಚೆಯಾದ ಕೇಸ್!
ಟಾಟಾ ಮೋಟರ್ಸ್ ಕಂಪನಿ ಯುಕೆ ಅಂತಾರಾಷ್ಟ್ರೀಯ ಘಟಕದಲ್ಲಿ ಉತ್ಪಾದನೆ ಮಾಡಲಾಗಿರುವ ಕಾರುಗಳು ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಇನ್ನು ಮುಂದೆ ಈ ಕಾರುಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ಬೀಳಲಿದ್ದು. ಟಾಟಾ ಮೋಟರ್ಸ್ಗೆ ದೊಡ್ಡ ಹೊಡೆತ ಬೀಳಲಿದೆ.
ಇನ್ನು ಇಚರ್ ಮೋಟರ್ಸ್ನ ರಾಯನ್ ಎನ್ಫೀಲ್ಡ್ ಬೈಕ್ಗಳು ಕೂಡ ಅಮೆರಿಕಾದಲ್ಲಿ ದೊಡ್ಡ ಬೇಡಿಕೆಯನ್ನು ಹೊಂದಿವೆ. ಇದರ 650ಸಿಸಿ ಮಾಡೆಲ್ನ ಬೈಕ್ಗಳಿಗೆ ಅಮೆರಿಕಾದಲ್ಲಿ ಭಾರೀ ಬೇಡಿಕೆ ಇದೆ.
ಇನ್ನು ಭಾರತದ ಮತ್ತೊಂದು ಪ್ರಮುಖ ಕಾರು ಉತ್ಪಾದನ ಸಂಸ್ಥೆಯಾಗಿರುವ ಸೋನಾ ಎಲ್ಡಬ್ಲ್ಯೂ ಮೇಲೆಯೂ ಇದೇ ರೀತಿಯ ಪರಿಣಾಮ ಬೀರಲಿದೆ. ಈ ಎಲ್ಲಾ ಕಂಪನಿಗಳು ಅಮೆರಿಕಾಗೆ ಕಾರು, ಟ್ರ್ಯಾಕ್ಟರ್ ಹಾಗೂ ಬೈಕ್ಗಳನ್ನು ರಫ್ತು ಮಾಡುತ್ತಿವೆ. ಸದ್ಯ ಅಮೆರಿಕಾ ಘೋಷಿಸಿರುವ ಶೇಕಡಾ 25 ರಷ್ಟು ತೆರಿಗೆಯಿಂದಾಗಿ ಈ ಕಂಪನಿಗಳ ಕಾರುಗಳ ಮಾರಾಟದಲ್ಲಿ ಕುಸಿತ ಕಾಣಲಿದ್ದು, ಕಂಪನಿಗಳ ಆದಾಯದ ಮೇಲೂ ಪರಿಣಾಮ ಬೀರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ