/newsfirstlive-kannada/media/post_attachments/wp-content/uploads/2025/05/MODI_TRUMP.jpg)
ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಿಳಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಇದನ್ನು ಘೋಷಣೆ ಮಾಡಲು ನನಗೆ ತುಂಬಾ ಸಂತಸವಾಗುತ್ತಿದೆ. ಈ ಒಂದು ನಿರ್ಧಾರದಿಂದ ಎರಡು ದೇಶಗಳಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಭಾರತದ ನಡುವೆ ಘರ್ಷಣೆ ತೀವ್ರವಾಗಿತ್ತು. ಇದರಿಂದ ಪಾಕಿಸ್ತಾನ ಸಾಕಷ್ಟು ನಷ್ಟ ಅನುಭವಿಸಿ ಸಮಸ್ಯೆಗೆ ಒಳಗಾಗಿ ಭಾರತವನ್ನು ಸಂಪರ್ಕ ಮಾಡಿತ್ತು. ಈ ಎರಡು ರಾಷ್ಟ್ರಗಳ ನಡುವೆ ಅಮೆರಿಕ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿತ್ತು. ಶಾಂತಿಯನ್ನು ಕಾಪಾಡುವುದಕ್ಕಾಗಿ ಭಾರತ ಒಪ್ಪಿಗೆ ಸೂಚಿಸಿದೆ. ಇದರಿಂದ ಎರಡು ರಾಷ್ಟ್ರಗಳು ಸದ್ಯಕ್ಕೆ ಕದನ ವಿರಾಮವನ್ನು ಘೋಷಣೆ ಮಾಡಿವೆ.
ಇದನ್ನೂ ಓದಿ:ಭಯೋತ್ಪಾದನೆ ವಿರುದ್ಧ ಮಹತ್ವದ ತೀರ್ಮಾನ.. ಏನಿದು Act of War?
ಪಾಕಿಸ್ತಾನದ ಡಿಜಿಎಂಒ ಮೊದಲು ಭಾರತವನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ಮನವಿ ಮಾಡಿದ್ದರು. ಇದರ ನಂತರ ಎರಡು ದೇಶಗಳು ಯುದ್ಧ ವಿರಾಮಕ್ಕೆ ಘೋಷಣೆ ಮಾಡಿವೆ. ಇದು ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಘೋಷಣೆ ಮಾಡಲಾಗಿದೆ. ಉಳಿದ ಮಾಹಿತಿಯನ್ನು ಮೇ 12 ರಂದು ಹೇಳುತ್ತೇವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಈ ಕದನ ವಿರಾಮವನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ಮಾಡಲಾಗುತ್ತದೆ. ಮೇ 12 ರಂದು ಮತ್ತೊಮ್ಮೆ ಡಿಜಿಎಂಒ ಅಧಿಕಾರಿಗಳು ಸಭೆ ನಡೆಸಿ ಮಹತ್ವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
— Donald J. Trump (@realDonaldTrump)
— Donald J. Trump (@realDonaldTrump) May 10, 2025
">May 10, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ