/newsfirstlive-kannada/media/post_attachments/wp-content/uploads/2025/01/SUNITA-WILLIAMS.jpg)
ಯುಎಸ್​ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಕ್ ಟೈಟಾನ್ ಎಲಾನ್ ಮಸ್ಕ್​ಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಸ್ಪೇಸ್ ಎಕ್ಸ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಅಮೆರಿಕಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ವಾಪಸ್ ಕೂಡಲೇ ಕರೆತರುವಂತೆ ಸೂಚಿಸಿದ್ದಾರೆ. ಜೋ ಬೈಡನ್ ಸರ್ಕಾರ ಸುನೀತಾ ವಿಲಿಯಮ್ಸ್ ಪ್ರಕರಣವನ್ನು ಅಲ್ಲಿಗೆ ಕೈಬಿಟ್ಟು ಹೋಗಿದೆ ಕೂಡಲೇ ಆಕೆಯನ್ನು ವಾಪಸ್ ಕರೆಸುವ ಪ್ರಕ್ರಿಯೆಗೆ ಚುರುಕು ನೀಡುವಂತೆ ಡೊನಾಲ್ಡ್ ಟ್ರಂಪ್​ ಎಲಾನ್ ಮಸ್ಕ್​ಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮೆಕ್ಸಿಕೋ ಅಕ್ರಮ ವಲಸಿಗರಿಗೆ ಗಡಿಪಾರು ಭಾಗ್ಯ! ಖ್ಯಾತ ಗಾಯಕಿ ಕಣ್ಣೀರಿಟ್ಟಿದ್ದೇಕೆ?
ಕಳೆದ ಏಳು ತಿಂಗಳುಗಳಿಂದ ಸುನೀತಾ ವಿಲಿಯಮ್ಸ್​ ಹಾಗೂ ವಿಲ್​ಮೋರ್​ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿಯೇ ಸಿಲುಕಿಕೊಂಡಿದ್ದಾರೆ. ಮುಂದಿನ ಹತ್ತು ದಿನಗಳಲ್ಲಿ ಈ ಒಂದು ಮಿಷನ್ ಕಂಪ್ಲೀಟ್ ಮಾಡಲು ಪ್ರಯತ್ನಿಸುವಂತೆ ಎಲಾನ್ ಮಸ್ಕ್​ಗೆ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರುತ್ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಕೂಡಲೇ ಆ ಇಬ್ಬರು ಧೈರ್ಯಶಾಲಿ ಗಗನಯಾತ್ರಿಗಳನ್ನು ಆದಷ್ಟು ಬೇಗ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡು. ಯಾವ ಕೆಲಸವನ್ನು ಜೋ ಬೈಡನ್ ಆಡಳಿತ ಕೈಬಿಟ್ಟಿದೆಯೋ ಅದನ್ನು ಸಂಪೂರ್ಣಗೊಳಿಸು ಎಂದು ಎಲಾನ್​ ಮಸ್ಕ್​ಗೆ ಹೇಳಿದ್ದಾರೆ. ಅವರು ಕಳೆದ ಹಲವು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಎಲಾನ್​ ಈ ಬಗ್ಗೆ ಒಂದು ಮಾರ್ಗವನ್ನು ಶೀಘ್ರದಲ್ಲಿಯೇ ತುಳಿಯಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಲಿದ್ದಾರೆ. ಗುಡ್ ಲಕ್ ಎಲಾನ್ ಮಸ್ಕ್ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us