/newsfirstlive-kannada/media/post_attachments/wp-content/uploads/2025/02/deporting-Indian-migrants.jpg)
ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಹಾಗೂ ಪ್ರಮಾಣ ವಚನ ಸಂದರ್ಭದಲ್ಲಿ ಹೇಳಿದ್ದ ಕಾರ್ಯವನ್ನು ತುರ್ತಾಗಿಯೇ ಆರಂಭಿಸಿದ್ದಾರೆ. ಈಗಾಗಲೇ ಅಮೆರಿಕಾದಲ್ಲಿದ್ದ ಮೆಕ್ಸಿಕೋ ಅಕ್ರಮ ನಿವಾಸಿಗಳನ್ನ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್ ಸರ್ಕಾರ ಈಗ ಅಮೆರಿಕಾದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಭಾರತೀಯರನ್ನು ಗಡಿಪಾರು ಮಾಡಲು ಆರಂಭಿಸಿದೆ. ಅಧಿಕೃತ ಮೂಲಗಳ ಹೇಳಿರುವ ಪ್ರಕಾರ ಈಗಾಗಲೇ ಸಿ 17ಎಂಬ ಮಿಲಿಟರಿ ವಿಮಾನದಲ್ಲಿ ಅಕ್ರಮ ನಿವಾಸಿಗಳನ್ನು ಭಾರತಕ್ಕೆ ರವಾನಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಅವರು ಭಾರತ ತಲುಪಲಿದ್ದಾರೆ ಎಂದು ಹೇಳಲಾಗಿದೆ.
ಟ್ರಂಪ್ ಅಮೆರಿಕಾ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಗಡಿಪಾರಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಮತ್ತು ಆ ಕಾರ್ಯವನ್ನು ಈಗಾಗಲೇ ಅವರ ಸರ್ಕಾರ ಕೈಗೆತ್ತಿಕೊಂಡಿದೆ. ಯುಎಸ್ನ ಇಮಿಗ್ರೇಷನ್ ಆ್ಯಂಡ್ ಕಸ್ಟಮ್ ಎನ್ಫೋರ್ಸಮೆಂಟ್( ICE) ಈಗಾಗಲೇ ಸರಿಯಾದ ದಾಖಲೆಯನ್ನು ಹೊಂದದ ಒಟ್ಟು 18 ಸಾವಿರ ಭಾರತೀಯರನ್ನು ಅಮೆರಿಕಾದಿಂದ ಗಡಿಪಾರು ಮಾಡಲು ಸಜ್ಜಾಗಿದೆ. ಒಟ್ಟು 15 ಲಕ್ಷ ಅಕ್ರಮ ನಿವಾಸಿಗಳನ್ನು ಗಡಿಪಾರು ಮಾಡಲು ಐಸಿಇ ಗುರುತುಮಾಡಿಕೊಂಡಿದೆ. ಆದರೆ ಈಗಾಗಲೇ ಎಷ್ಟು ಜನರನ್ನು ಅಮೆರಿಕಾದಿಂದ ಗಡಿಪಾರು ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ:ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್: ಫೆಬ್ರವರಿ 13ರಂದು ಭೇಟಿಯಾಗಲಿದ್ದಾರೆ ದಿಗ್ಗಜ ನಾಯಕರು
ಒಟ್ಟಾರೆಯಾಗಿ ಅಮೆರಿಕಾದಲ್ಲಿ 7 ಲಕ್ಷ 25 ಸಾವಿರ ಭಾರತೀಯರು ಕಾನೂನು ಬಾಹಿರವಾಗಿ ವಾಸಿಸುತ್ತಾರೆ ಎಂಬ ಮಾಹಿತಿ ಇದೆ. ಇದು ಅಮೆರಿಕಾದ ಮೂರನೇ ಅತಿದೊಡ್ಡ ಜನಸಂಖ್ಯೆ ಎಂದು ಕೂಡ ಗುರುತಿಸಲಾಗುತ್ತದೆ. ಮೆಕ್ಸಿಕೋದ ಬಳಿಕ ಅತಿಹೆಚ್ಚು ಕಾನೂನು ಬಾಹಿರವಾಗಿ ನೆಲೆಸಿರುವವರ ಸಂಖ್ಯೆ ಭಾರತೀಯರದ್ದೇ ಹೆಚ್ಚು ಎಂದು ಹೇಳಲಾಗಿದೆ. ಈಗಾಗಲೇ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಮೆರಿಕಾ ಯಾವೆಲ್ಲಾ ಭಾರತೀಯರನ್ನು ಗಡಿಪಾರು ಮಾಡಬೇಕು ಎಂದುಕೊಂಡಿದೆಯೋ ಅವರ ಬಗ್ಗೆ ಭಾರತ ಸರ್ಕಾರ ಪರಿಶೀಲಿಸುತ್ತಿದೆ. ಆದ್ರೆ ಇಲ್ಲಿಯವರೆಗೂ ಅಕ್ರಮ ನಿವಾಸಿಗಳ ಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆದಾಯ ತೆರಿಗೆಯನ್ನೇ ಪಡೆಯದ ದುಬೈ ಅಷ್ಟೊಂದು ಶ್ರೀಮಂತ ರಾಷ್ಟ್ರವಾಗಿದ್ದು ಹೇಗೆ? ಇಲ್ಲಿವೆ ಕಾರಣಗಳು
ಪ್ರತಿಯೊಂದು ದೇಶ, ಯುಎಸ್ ಸೇರಿ ಯಾವುದೇ ದೇಶಕ್ಕೂ ಕೂಡ ವಿನಾಯಿತಿ ಇಲ್ಲ. ನಾವು ಇದನ್ನು ಸದಾ ಕಾಯ್ದುಕೊಂಡು ಬಂದಿದ್ದೇವೆ. ಯಾವುದೇ ದೇಶದಲ್ಲಿ ನಮ್ಮ ದೇಶದ ಪ್ರಜೆಗಳು ಕಾನೂನು ಬಾಹಿರವಾಗಿ ನೆಲೆಸುತ್ತಿದ್ದರೆ. ಅದರ ಬಗ್ಗೆ ನಮಗೆ ಸ್ಪಷ್ಟನೆ ಇದ್ದಲ್ಲಿ ಅವರನ್ನು ವಾಪಸ್ ಭಾರತಕ್ಕೆ ಕರೆದುಕೊಳ್ಳುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲೆ ಎಂದು ಜೈ ಶಂಕರ್ ಹೇಳಿದ್ದಾರೆ.
ಇನ್ನು ಜನವರಿಯಂದು ಡೊನಾಲ್ಡ್ ಟ್ರಂಪ್ ಕೂಡ ಪ್ರಧಾನಿ ನರೇಂದ್ರ ಮೋದಿಯರವರಿಗೆ ಯಾವುದು ಸರಿ ಎಂಬುದು ಗೊತ್ತಿದೆ. ಅದರಲ್ಲೂ ವಿಶೇಷವಾಗಿ ಅಮೆರಿಕಾದಲ್ಲಿ ಕಾನೂನು ಬಾಹಿರವಾಗಿ ನೆಲೆಸುತ್ತಿರುವ ಭಾರತೀಯರ ವಿಚಾರದಲ್ಲಿ ನಾವು ಈಗಾಗಲೇ ಫೋನ್ ಸಂಭಾಷಣೆ ಮೂಲಕ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ