Advertisment

ಮೋದಿ ಭೇಟಿ ಬೆನ್ನಲ್ಲೇ ಟ್ರಂಪ್ ದೊಡ್ಡ ಘೋಷಣೆ.. ತಹವ್ವೂರ್ ರಾಣಾ ಬಗ್ಗೆ ಮಹತ್ವದ ನಿರ್ಧಾರ

author-image
Ganesh
Updated On
14 ದೇಶಗಳ ಮೇಲೆ ಟ್ರಂಪ್ ಮತ್ತೆ ಸುಂಕ ಯುದ್ಧ.. ಪ್ರತೀಕಾರ ತೀರಿಸಿಕೊಂಡ್ರೆ ಸುಮ್ನಿರಲ್ಲ ಎಂದು ಎಚ್ಚರಿಕೆ
Advertisment
  • ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ
  • ತಹವ್ವೂರ್ ರಾಣಾ ಬಗ್ಗೆ ನಡೆದ ಚರ್ಚೆ ಏನು..?
  • ತಹವ್ವೂರ್ ರಾಣಾ ಮುಂಬೈ ದಾಳಿಯ ಸಂಚುಕೋರ

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಇಂದು ಬೆಳಗ್ಗೆ (ಭಾರತೀಯ ಕಾಲಮಾನ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಉಭಯ ನಾಯಕರ ಮಾತುಕತೆ ಬೆನ್ನಲ್ಲೇ ಡೊನಾಲ್ಡ್​ ಟ್ರಂಪ್ ದೊಡ್ಡ ಘೋಷಣೆ ಮಾಡಿದ್ದಾರೆ.

Advertisment

2008ರ ಮುಂಬೈ ದಾಳಿಯ ಭಯೋತ್ಪಾದಕ ತಹವ್ವೂರ್ ರಾಣಾ (Tahawwur Rana)ನನ್ನು ಹಸ್ತಾಂತರಿಸುವ ಕುರಿತು ಟ್ರಂಪ್ ಹೇಳಿಕೆ ನೀಡಿದ್ದಾರೆ. ‘2008ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲು ನನ್ನ ಆಡಳಿತ ಅನುಮೋದನೆ ನೀಡಿದೆ. ಇದನ್ನು ಹಂಚಿಕೊಳ್ಳಲು ಸಂತೋಷ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Aero India show ವೀಕ್ಷಣೆಗೆ ಕೊನೆ ಅವಕಾಶ, ಇವತ್ತು ಮಿಸ್​ ಮಾಡಿಬೇಡಿ.. ನಿನ್ನೆ ಏನಾಗಿತ್ತು ಗೊತ್ತಾ?

publive-image

ಮುಂಬೈ ದಾಳಿಯ ಅಪರಾಧಿ ತಹವ್ವೂರ್ ರಾಣಾನ ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಜನವರಿ 25, 2024 ರಂದು ಅನುಮೋದನೆ ನೀಡಿತ್ತು. ಈ ಪ್ರಕರಣದಲ್ಲಿ ಆತನ ಶಿಕ್ಷೆಯ ವಿರುದ್ಧದ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ತಹವ್ವೂರ್ ರಾಣಾನ 2009 ರಲ್ಲಿ ಎಫ್‌ಬಿಐ ಬಂಧಿಸಿತ್ತು. ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಆಗಿರುವ ರಾಣಾ 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.

Advertisment

ಆರೋಪಗಳು ಏನು?

26/11 ದಾಳಿ ಮಾಸ್ಟರ್​ ಮೈಂಡ್​​ಗಳಲ್ಲಿ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ಕೂಡ ಹೌದು. ಈತನಿಗೆ ರಾಣಾ ಸಹಾಯ ಮಾಡಿದ್ದಾನೆ. 60 ವರ್ಷದ ರಾಣಾನನ್ನು 2009ರಲ್ಲಿ ಚಿಕಾಗೋದಲ್ಲಿ ಬಂಧಿಸಲಾಗಿತ್ತು. ಸದ್ಯ ಲಾಸ್ ಏಂಜಲಿಸ್​ನ ಜೈಲಿನಲ್ಲಿದ್ದಾನೆ. ಐಎಸ್‌ಐ ಮತ್ತು ಲಷ್ಕರ್-ಎ-ತೊಯ್ಬಾ ಜತೆ ನಿಟಕ ಸಂಬಂಧ ಹೊಂದಿರುವ ಆರೋಪ ಇದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸದಸ್ಯ ಕೂಡ ಹೌದು.

2008ರಲ್ಲಿ ಮುಂಬೈನಲ್ಲಿ ದಾಳಿ

ನವೆಂಬರ್ 26, 2008 ರಂದು ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ ಒಟ್ಟು 166 ಮಂದಿ ಜೀವ ಕಳೆದುಕೊಂಡಿದ್ದಾರೆ. 10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು 60 ಗಂಟೆಗೂ ಹೆಚ್ಚು ಕಾಲ ಸರಣಿ ದಾಳಿ ಮಾಡಿದ್ದರು.

ಇದನ್ನೂ ಓದಿ: Aero India show ವೀಕ್ಷಣೆಗೆ ಕೊನೆ ಅವಕಾಶ, ಇವತ್ತು ಮಿಸ್​ ಮಾಡಿಬೇಡಿ.. ನಿನ್ನೆ ಏನಾಗಿತ್ತು ಗೊತ್ತಾ?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment