ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್​ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್

author-image
Gopal Kulkarni
Updated On
ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್​ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್
Advertisment
  • ಮಿಚಿಗನ್​ನ ಅರಬ್ ಅಮೆರಿಕನ್ ಮತಗಳ ಮೇಲೆ ಹ್ಯಾರಿಸ್​, ಟ್ರಂಪ್ ಕಣ್ಣು
  • ಮಿಚೆಲ್ ಒಬಾಮಾ ಜೊತೆಗೂಡಿ ಭರ್ಜರಿ ಪ್ರಚಾರ ಕೈಗೊಂಡಿರುವ ಕಮಲಾ
  • ಕಮಲಾ ಹ್ಯಾರಿಸ್ ಬೆನ್ನಲ್ಲೆ ಮಿಚಿಗನ್ ಅಂಗಳದಲ್ಲಿ ಟ್ರಂಪ್ ಭರ್ಜರಿ ಪ್ರಚಾರ

ಅಮೆರಿಕಾದಲ್ಲಿ ಈಗ ಚುನಾವಣೆಯ ಕಾವು ಜೋರಾಗಿದೆ. ಎಲ್ಲಾ ಮತದಾರರನ್ನು ತಮ್ಮ ಬುಟ್ಟಿಗೆ ಸೆಳೆಯುವ ಕಾರ್ಯತಂತ್ರಗಳು ನಡೆದಿವೆ. ಮುಸ್ಲಿಂ ವೋಟುಗಳೇ ಪ್ರಮುಖ ಪಾತ್ರವಹಿಸುವ ಅಮೆರಿಕಾದ ಮಿಚಿಗನ್​ನಲ್ಲಿ ಈಗಾಗಲೇ ಕಮಲಾ ಹ್ಯಾರಿಸ್​, ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾರೊಂದಿಗೆ ಭರ್ಜರಿ ಕ್ಯಾಂಪೇನ್​ ನಡೆಸಿ ಅಲ್ಲಿನ ಅರಬ್​ ಅಮೆರಿಕನ್ ಪ್ರಜೆಗಳ ಮೇಲೆ ತಮ್ಮ ಪ್ರಭಾವ ಬೀರಿದ್ದರು. ಈಗ ಪ್ರತಿಸ್ಪರ್ಧಿ ನಡೆಸಿದ ಸಿಟಿಯಲ್ಲಿಯೇ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕೂಡ ಭಾರಿ ಪ್ರಚಾರ ಕೈಗೊಂಡಿದ್ದಾರೆ.

ಸದ್ಯ ಅಮೆರಿಕಾದ ಮುಸ್ಲಿಂರಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಹಲವು ಆತಂಕಗಳಿವೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ ಬಂಧುಗಳ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂಬ ಪ್ರಶ್ನೆಗಳು ಕೂಡ ಇವೆ. ಹೀಗಾಗಿ ಇಂದು ಮಿಚಿಗನ್​ನಲ್ಲಿ ಪ್ರಚಾರ ಕೈಗೊಂಡು ಮಾತನಾಡಿರುವ ಟ್ರಂಪ್ ನಾನು ಈಗಾಗಲೇ ಸ್ಥಳೀಯ ಮುಸ್ಲಿಂ ಇಮಾಮ್​​ಗಳ ಜೊತೆ ಮಾತನಾಡಿದ್ದೇನೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಕಾರ್ಮೋಡವನ್ನು ಶಾಂತಿ ರೀತಿಯಿಂದ ಬಗೆಹರಿಸಲು ನನಗೆ ಮತ ನೀಡಿ ಎಂದು ಕೇಳಿದ್ದೇನೆ ಎಂದು ಹೇಳಿ ಮಿಚಿಗನ್ ಮತದಾರರ ಮನ ಸೆಳೆಯಲು ಯತ್ನಿಸಿದ್ದಾರೆ.

ಇದನ್ನೂ ಓದಿ:100 ಯುದ್ಧ ವಿಮಾನ.. ಸೇನಾನೆಲೆಗಳು ಧ್ವಂಸ; ಇರಾನ್ ಮೇಲೆ ಇಸ್ರೇಲ್ ಅಟ್ಯಾಕ್ ಹೇಗಿತ್ತು ಗೊತ್ತಾ?

ಇನ್ನು ಅತಿಹೆಚ್ಚು ಮುಸ್ಲಿಂರು ವಾಸಿಸುವ ಡೆಟ್ರಾಯ್ಟ್​ನ್ನು ನೊವಿಯ ಉಪನಗರ ಎಂದು ಬಣ್ಣಿಸಿರುವ ಟ್ರಂಪ್ ಇಲ್ಲಿ ಇರುವ ಆಟೋ ವರ್ಕರ್ಸ್​ಗಳ ಜೀವನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಡೆಟ್ರಾಯ್ಟ್ ಹಾಗೂ ಉಳಿದ ಕೆಲವು ಪ್ರದೇಶಗಳು ನಮ್ಮ ದೇಶವನ್ನು ಮತ್ತಷ್ಟು ಪ್ರಗತಿಯತ್ತ ತೆಗೆದುಕೊಂಡು ಹೋಗಲಿವೆ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ:ಅಬ್ಬಾ.. ಬುರ್ಜ್ ಖಲೀಫಾಗೆ ಸೆಡ್ಡು; ಸೌದಿ ಅರೇಬಿಯಾದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಕಟ್ಟಡ! ಏನಿದರ ವಿಶೇಷ?

ಮಿಚಿಗನ್​ನಲ್ಲಿ 84 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹೆಸರನ್ನು ನೊಂದಣಿ ಮಾಡಿಸಿದ್ದಾರೆ. ಮಿಚಿಗನ್​ ಚುನಾವಣೆಯ ಮೇಲೆ ಪರಿಣಾಮ ಬೀರುವ ಯುಎಸ್​​ನ ಏಳನೇ ನಗರ ಎಂದು ಬಣ್ಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಹೆಚ್ಚಿನ ಮಟ್ಟದ ಪ್ರಚಾರಕ್ಕೆ ಹ್ಯಾರಿಸ್ ಮತ್ತು ಟ್ರಂಪ್​ ಮನಸ್ಸು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment