ನೆಕ್ಸ್ಟ್ ಲೇವೆಲ್ ತಲುಪಿದ ಚೀನಾ-ಅಮೆರಿಕ ಸುಂಕ ಯುದ್ಧ; ‘ಸೇಡು ಬಿಡದಿದ್ರೆ..’ ಟ್ರಂಪ್ ಮತ್ತೊಂದು ಎಚ್ಚರಿಕೆ..!

author-image
Ganesh
Updated On
ಚೀನಾ ಮೇಲಿನ ಸುಂಕ ಶೇಕಡ 104ಕ್ಕೆ ಹೆಚ್ಚಳ.. ಅಲುಗಾಡಿದ ಜಾಗತಿಕ ಮಾರುಕಟ್ಟೆಗಳು..!
Advertisment
  • ಡ್ರ್ಯಾಗನ್ ರಾಷ್ಟ್ರದ ಮೇಲೆ ಸುಂಕ ಯುದ್ಧ ಘೋಷಿಸ್ತಾ ಅಮೆರಿಕ?
  • ಚೀನಾದ ಮೇಲೆ ಹೆಚ್ಚುವರಿ 50% ಸುಂಕವನ್ನ ಘೋಷಿಸಿದ ಟ್ರಂಪ್
  • ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ ಸುಂಕ ಫಿಕ್ಸ್​

ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಮೇಲೂ ಡೊನಾಲ್ಡ್ ಟ್ರಂಪ್‌ ಸುಂಕ ಹೇರಿದ್ದಾರೆ. ಏಪ್ರಿಲ್‌ 2ರಂದು ಲಿಬರೇಷನ್‌ ಡೇ ಅಂತ ಘೋಷಣೆ ಮಾಡಿ, ಶ್ವೇತ ಭವನದಲ್ಲಿ ಎಲ್ಲ ದೇಶಗಳು ಅಮೆರಿಕದ ವಸ್ತುಗಳ ಮೇಲೆ ಹಾಕ್ತಿರೋ ಸುಂಕದ ಪ್ರಮಾಣ, ಅದಕ್ಕೆ ಟ್ರಂಪ್‌ ನಿಗದಿ ಮಾಡಿರೋ ಟಾರಿಫ್‌ನ ಲೆಕ್ಕದ ಪಟ್ಟಿಯನ್ನು ತೋರಿಸಿದ್ದರು. ಅಲ್ಲಿಗೆ ಸುಂಕದ ಕಥೆ ಮುಗಿಯಲ್ಲಿಲ್ಲ.

ಅಮೆರಿಕ ಮತ್ತು ಚೀನಾ ದೇಶಗಳ ನಡುವೆ ವ್ಯಾಪಾರ ಯುದ್ಧ ಉಲ್ಬಣಗೊಂಡಿದೆ. ಟ್ರಂಪ್ ಟಾರಿಫ್ ಘೋಷಣೆಯಿಂದ ತಳಮಳಗೊಂಡಿರೋ ಚೀನಾ ಅಮೆರಿಕ ಸರಕುಗಳ ಮೇಲೆ ಸುಂಕ ಹೆಚ್ಚಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಈಗ ಎಲ್ಲಾ ಚೀನೀ ಸರಕುಗಳ ಮೇಲಿನ ಟ್ರಂಪ್ ಸುಂಕವನ್ನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇದು ಡ್ರ್ಯಾಗನ್​ಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 2 ರೂ ಹೆಚ್ಚಳ; ಆದರೂ ಗ್ರಾಹಕರಿಗೆ ಇಲ್ಲ ಹೊರೆ, ಹೆಂಗೆ..?

publive-image

ಡ್ರ್ಯಾಗನ್ ರಾಷ್ಟ್ರದ ಮೇಲೆ ಸುಂಕ ಯುದ್ಧ ಘೋಷಿಸ್ತಾ ಅಮೆರಿಕ?

ಈಗಾಗ್ಲೇ ಅಮೆರಿಕದ ಜನಕ್ಕೆ.. ಅಲ್ಲಿನ ಕಂಪನಿಗಳಿಗೆ ಬೆಲೆ ಏರಿಕೆ ಬಿಸಿ ತಟ್ಟೋದಕ್ಕೆ ಶುರುವಾಗಿದೆ. ಬೇರೆ ಬೇರೆ ದೇಶಗಳಿಂದ ವಸ್ತುಗಳನ್ನ ಆಮದು ಮಾಡಿಕೊಳ್ಳೋ ಅನೇಕ ಕಂಪನಿ ತನ್ನ ಪ್ರೊಡಕ್ಷನ್‌ ನಿಲ್ಲಿಸ್ತಿದೆ. ಅಮೆರಿಕದ ಷೇರುಪೇಟೆ ಅಲ್ಲೋಲ ಕಲ್ಲೋಲವಾಗಿದೆ. ಟ್ರಂಪ್​ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಇದೆಲ್ಲದರ ನಡುವೆ ಚೀನಾ ಅಮೆರಿಕದ ಟ್ರಂಪ್‌ ಟಾರಿಫ್‌ಗೆ ಪ್ರತಿಯಾಗಿ 34 ಪರ್ಸೆಂಟ್‌ ಹೆಚ್ಚುವರಿ ಸುಂಕವನ್ನ ಘೋಷಣೆ ಮಾಡಿದೆ. ಇದಕ್ಕೆ ಪ್ರತಿಕಾರವಾಗಿ ಚೀನಾದ ಮೇಲೆ ಹೆಚ್ಚುವರಿ 50% ಸುಂಕವನ್ನ ಘೋಷಿಸಿದ್ದಾರೆ ಟ್ರಂಪ್.

ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ ಸುಂಕ ಫಿಕ್ಸ್​

ಸ್ಪಷ್ಟವಾಗಿ ಹೇಳ್ಬೇಕು ಅಂದ್ರೆ ಇದು ಚೀನಾ ದೇಶಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿರುವ ಅವರು, ಏಪ್ರಿಲ್ 8ರೊಳಗೆ ಚೀನಾ 34% ತೆರಿಗೆಯನ್ನ ಹಿಂತೆಗೆದುಕೊಳ್ಳದಿದ್ರೆ, ಅಮೆರಿಕ ಚೀನಾದ ಮೇಲೆ 50% ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೆ. ಇದು ಏಪ್ರಿಲ್ 9 ರಿಂದ ಜಾರಿಗೆ ಬರುತ್ತೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಹಾಗೇನಾದ್ರು ವಿಧಿಸಿದ್ರೆ ಚೀನೀ ಸರಕುಗಳ ಮೇಲಿನ ಸುಂಕವನ್ನ ಸಾರ್ವಕಾಲಿಕ ಗರಿಷ್ಠ 84 ಪ್ರತಿಶತಕ್ಕೆ ಕೊಂಡೊಯ್ಯುದಿದೆ.

ಇದನ್ನೂ ಓದಿ: ಕೇಂದ್ರದಿಂದ ಮತ್ತೊಂದು ಶಾಕ್; ಇಂದಿನಿಂದ ಅಡುಗೆ ಗ್ಯಾಸ್​ ಸಿಲಿಂಡರ್​ ಬೆಲೆಯಲ್ಲಿ ಭಾರೀ ಏರಿಕೆ..!

publive-image

ಅಮೆರಿಕದಲ್ಲಿ ಯಾವುದೇ ಹಣದುಬ್ಬರ ಇಲ್ಲ ಎಂದ ಟ್ರಂಪ್​

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಮತ್ತು ಅಮೆರಿಕದ ಕಚ್ಚಾ ತೈಲದ ಬೆಲೆಯು ಇಳಿಕೆಯಾಗಿದೆ. ಅದರ ಜೊತೆಗೆ ಡಾಲರ್ ಮೌಲ್ಯವೂ ಕೂಡ ಕುಸಿತ ಕಂಡಿದೆ. ಇದನ್ನೇ ಉದಾಹರಣೆಯಾಗಿ ಕೊಟ್ಟಿರೋ ಟ್ರಂಪ್‌, ತೈಲ ಬೆಲೆಗಳು ಇಳಿಕೆಯಾಗಿವೆ. ಬಡ್ಡಿ ದರಗಳು ಕಡಿಮೆಯಾಗ್ತಿದೆ. ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿದೆ.. ಹಾಗಾಗಿ ಬೆಲೆ ಏರಿಕೆ ಇಲ್ಲ.. ಹಣದುಬ್ಬರ ಇಲ್ಲ.. ಎಂದಿದ್ದಾರೆ.

ಎಲ್ಲದರ ಬೆಲೆಯೂ ಇಳೀತಿದೆ ಅಂತಿರೋ ಟ್ರಂಪ್‌ ಅಮೆರಿಕದ ಷೇರುಪೇಟೆಗಳೂ ಕುಸಿತಿದೆ ಅನ್ನೋದನ್ನ ಗಂಭೀರವಾಗಿ ನೋಡ್ತಿಲ್ಲ. ಏಪ್ರಿಲ್‌ 10ರಿಂದ ಚೀನಾ ಅಮೆರಿಕದ ವಸ್ತುಗಳ ಮೇಲೆ ಪ್ರತಿ ಸುಂಕವನ್ನ ಶುರು ಮಾಡ್ತಿದೆ. ಹಾಗೇ ಅಮೆರಿಕಕ್ಕೆ ಅತ್ಯಾಧುನಿಕ ಮೆಡಿಕಲ್‌ ಹಾಗೂ ಎಲೆಕ್ಟ್ರಾನಿಕ್ಸ್‌ ತಂತ್ರಜ್ಞಾನದ ಸರಬರಾಜನ್ನು ನಿಲ್ಲಿಸ್ತೀವಿ.. ವಿಶ್ವ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸ್ತೀವಿ ಅಂತ ಎಚ್ಚರಿಕೆಯನ್ನ ಚೀನಾ ಕೊಟ್ಟಿದೆ. ಅದ್ಹೇನೆ ಇರಲಿ, ಚೀನಾ ಮತ್ತು ಅಮೆರಿಕ ಸರ್ಕಾರಗಳು ಪರಸ್ಪರ ಒಬ್ಬರಿಗೊಬ್ಬರು ಬೆದರಿಕೆ ಹಾಕೋದನ್ನ ಮುಂದುವರಿಸಿದ್ದು, ಇದು ಎಲ್ಲಿಗೆ ಹೋಗಿ ತಲುಪುತ್ತೋ ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಆಘಾತಕಾರಿ ಘಟನೆ.. ಸುಂದರ ಬದುಕಿಗೆ ವಿದಾಯ ಹೇಳಿದ ಮಹಿಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment