ಜನರೇ ಇಲ್ಲದ ಆಸ್ಟ್ರೇಲಿಯಾ ದ್ವೀಪಗಳ ಮೇಲೂ ಟ್ರಂಪ್ ತೆರಿಗೆ! ಪೆಂಗ್ವಿನ್​ಗಳು ಸುಂಕ ಕಟ್ಟುತ್ತಾವಾ?

author-image
Gopal Kulkarni
Updated On
ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್​ ಟ್ರಂಪ್.. ಕಾರಣವೇನು?
Advertisment
  • ಜನವಸತಿಯಿಂದ 4100 ಕಿ.ಮೀ ದೂರದಲ್ಲಿರುವ ದ್ವೀಪಗಳ ಮೇಲೆ ಟ್ಯಾಕ್ಸ್
  • ಟ್ರಂಪ್ ತೆರಿಗೆ ನೀತಿ ನೋಡಿ ಗಹಗಹಿಸಿ ನಗುತ್ತಿದೆ ಸೋಷಿಯಲ್ ಮೀಡಿಯಾ
  • ಜನರೇ ಇಲ್ಲದ ದ್ವೀಪದಲ್ಲಿ ಹೇರುವ ತೆರಿಗೆ ಪೆಂಗ್ವಿನ್​ಗಳು ಕಟ್ಟುತ್ತವಾ ಎಂದು ಪ್ರಶ್ನೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರ ಅಮೆರಿಕಾ ಫಸ್ಟ್​ ಎಂಬ ನೀತಿ ಅವರಿಗೆ ಮುಳುವಾಗುತ್ತಾ ಹೋಗುತ್ತಿದೆ. ಅವರು ವಿಶ್ವದ ಬೇರೆ ರಾಷ್ಟ್ರಗಳ ವಿರುದ್ಧ ಸಾರಿದ ಆಮದು ರಫ್ತಿನ ಸುಂಕದ ಹೇರಿಕೆ ಈಗ ಇಡೀ ಯುರೋಪ ಒಕ್ಕೂಟವೇ ಅಮೆರಿಕಾದ ವಿರುದ್ಧ ಸಿಡಿದೆದ್ದು ನಿಲ್ಲುವಂತೆ ಮಾಡಿದೆ, ಅವರ ತೆರಿಗೆ ನೀತಿಗಳು, ವಿದೇಶಾಂಗ ನೀತಿಗಳು ಒಟ್ಟಾರೆ ಇಡೀ ವಿಶ್ವವನ್ನೇ ಗೊಂದಲಕ್ಕೆ ತಳ್ಳುವುದರ ಜೊತೆಗೆ ಭವಿಷ್ಯದಲ್ಲಿ ಅಮೆರಿಕಾಗೆ ದೊಡ್ಡ ಹೊಡೆತ ತಂದಿಡುವ ಸೂಚನೆ ನೀಡುತ್ತಿದೆ. ಚೀನಾ ಮತ್ತಿತರ ದೇಶಗಳನ್ನು ಶಿಕ್ಷಿಸುತ್ತೇನೆ ಎಂಬ ಭರದಲ್ಲಿ ತನ್ನ ದೇಶವನ್ನೇ ಶಿಕ್ಷಿಸಲು ಹೊರಟಿದ್ದಾರೆ ಎಂದು ದೊಡ್ಡ ದೊಡ್ಡ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಟ್ರಂಪ್ ಈ ನೀತಿಯಿಂದಾಗಿಯೇ ಈಗ ಅಮೆರಿಕಾದಲ್ಲಿ ಹಣದುಬ್ಬರ ಎನ್ನುವುದು ಗಗನಕ್ಕೆ ಮುಟ್ಟುತ್ತಿದೆ. ಮುಂದೊಂದು ದಿನ ಇದು ವಿಶ್ವ ತೆರಿಗೆ ಯುದ್ಧದ ನೀತಿಗೆ ಮುನ್ನುಡಿ ಬರೆಯಲಿದೆ. ಸದ್ಯ ಅಮೆರಿಕಾ ವರ್ಸಸ್​ ರೆಸ್ಟ್ ಆಫ್​ ದಿ ವರ್ಡ್ ಎನ್ನುವಂತ ಪರಿಸ್ಥಿತಿ ಬಂದಿದೆ ಎಂದು ಆರ್ಥಿಕ ಪರಿಣಿತರು ಷರಾ ಬರೆಯುತ್ತಿದ್ದಾರೆ.

publive-image

ಸದ್ಯ ಈ ಪರಿಸ್ಥಿತಿಯನ್ನು ಅಮೆರಿಕಾಗೆ ತಂದಿರುವ ಟ್ರಂಪ್​. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಆಸ್ಟ್ರೇಲಿಯಾದ ಜನವಸತಿಯೇ ಇಲ್ಲದ ಹಲವು ದ್ವೀಪಗಳ ಮೇಲೆ ಡೊನಾಲ್ಡ್​ ಟ್ರಂಪ್ ಶೇಕಡಾ 10 ರಷ್ಟು ತೆರಿಗೆ ಹೇರುವ ಮೂಲಕ ಲೇವಡಿಗೆ ಈಡಾಗಿದ್ದಾರೆ. ಯುಎಸ್​ ಜೊತೆಗೆ ವ್ಯಾಪಾರ ಒಪ್ಪಂದಗಳಿಗಾಗಿ ಕೆಲವು ದೇಶಗಳ ಮೇಲೆ ಟ್ರಂಪ್​ ಹಲವು ನೀತಿ ನಿಯಮಗಳನ್ನು ಹೇರಿದ್ದಾರೆ. ಈಗ ಆಸ್ಟ್ರೇಲಿಯಾದ ಹರ್ಡ್​ ಮತ್ತು ಮ್ಯಾಕ್​ಡೊನಾಲ್ಡ್​ಗಳೆಂಬ ಪುಟ್ಟ ದ್ವೀಪಗಳ ಮೇಲು ತಮ್ಮ ತೆರಿಗೆ ನೀತಿಯನ್ನು ಅಳವಡಿಸಿದ್ದಾರೆ. ಅವುಗಳ ಜೊತೆ ವ್ಯಾಪಾರ ವ್ಯವಹಾರಗಳ ಒಪ್ಪಂದಕ್ಕೆ ಶೇಕಡಾ 10 ರಷ್ಟು ತೆರಿಗೆ ವಿಧಿಸಿದ್ದಾರೆ. ಅಸಲಿಗೆ ಆ ದ್ವೀಪಗಳು ಆಸ್ಟ್ರೇಲಿಯಾದ ಜನಬೀಡ ಪ್ರದೇಶದಿಂದ ಸುಮಾರು 4,100 ಕಿಲೋ ಮೀಟರ್ ದೂರದಲ್ಲಿವೆ.

ಇದನ್ನೂ ಓದಿ:ಅತ್ಯಂತ ದುಬಾರಿ ಮದುವೆಗೆ ಸಾಕ್ಷಿಯಾಗಲಿದೆ ಜಗತ್ತು! ಈ ವಿವಾಹಕ್ಕೆ ಖರ್ಚಾಗಲಿರುವ ಹಣ ಎಷ್ಟು ಗೊತ್ತಾ?

publive-image

ಈ ದ್ವೀಪಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು ಎಂದು ಗುರುತಿಸಿದೆ. ಇವು ವಿಶ್ವದಲ್ಲಿಯೇ ಅತ್ಯಂತ ಪರಿಸರೀಯವಾಗಿ ಶುದ್ಧವಿರುವ ದ್ವೀಪ ಎಂದು ಗುರುತಿಸಿಕೊಂಡಿವೆ. ಇಲ್ಲಿ ಪೆಂಗ್ವಿನ್ ಮತ್ತು ಸೀಬರ್ಡ್​ಗಳ ಆಚೆ ಬೇರಾವ ಪ್ರಾಣಿಗಳು ಕಾಣಸಿಗುವುದಿಲ್ಲ. ಮನುಷ್ಯರ ಗುರುತಂತೂ ಇಲ್ಲವೇ ಇಲ್ಲ. ಹೀಗಾಗಿ ಈ ದ್ವೀಪಗಳ ಮೇಲೆ ಶೇಕಡಾ 10ರಷ್ಟು ತೆರಿಗೆ ವಿಧಿಸಿರುವ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ಲೇವಡಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ:21 ಕೋಟಿ ಲಾಟರಿ ಗೆದ್ದ ಮಹಿಳೆಗೆ ಬಿಗ್ ಶಾಕ್‌.. ಟಿಕೆಟ್‌ ದಾನ ಮಾಡಿದ ಮೇಲೆ ಏನಾಯ್ತು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡದಾಗಿ ಟ್ರೋಲ್ ಮಾಡಲಾಗುತ್ತಿದೆ. ಅಲ್ಲಿರುವ ಪೆಂಗ್ವಿನ್​ಗಳಿಂದ ಡೊನಾಲ್ಡ್ ಟ್ರಂಪ್ ತೆರಿಗೆ ವಸೂಲಿ ಮಾಡುತ್ತಾರಾ ಎಂದು. ಅವು ತೆರಿಗೆ ನೀಡುತ್ತವಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಯುಎಸ್​ನ ತೆರಿಗೆ ಯುದ್ಧವನ್ನು ಪೆಂಗ್ವಿನ್​ಗಳು ಧ್ವಂಸಗೊಳಿಸಿದವು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರಂಪ್ ತೆರಿಗೆ ನೀತಿ ಕುರಿತು ದೊಡ್ಡ ಪ್ರಮಾಣದಲ್ಲಿ ಲೇವಡಿ ಮಾತುಗಳು ಶುರುವಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment