ಮೋದಿ-ಟ್ರಂಪ್ ಫೋನ್ ಸಂಭಾಷಣೆ; ಬೆನ್ನಲ್ಲೇ ಬಿಗ್ ಸ್ಟೇಟ್​​ಮೆಂಟ್ ಕೊಟ್ಟ ಅಮೆರಿಕ ಅಧ್ಯಕ್ಷ..!

author-image
Gopal Kulkarni
Updated On
ಮೋದಿ-ಟ್ರಂಪ್ ಫೋನ್ ಸಂಭಾಷಣೆ; ಬೆನ್ನಲ್ಲೇ ಬಿಗ್ ಸ್ಟೇಟ್​​ಮೆಂಟ್ ಕೊಟ್ಟ ಅಮೆರಿಕ ಅಧ್ಯಕ್ಷ..!
Advertisment
  • ಮೋದಿ ಅಮೆರಿಕ ಪ್ರವಾಸದ ಬಗ್ಗೆ ಟ್ರಂಪ್ ಮಾಹಿತಿ
  • ಇಂಡೋ-ಫೆಸಿಫಿಕ್ ಕ್ವಾಡ್ ಪಾಲುದಾರಿಕೆ ಬಗ್ಗೆ ಚರ್ಚೆ
  • ಭಾರತದಿಂದ ಅಮೆರಿಕಗೆ ಏನು ಬೇಕು ಅಂತಲೂ ಚರ್ಚೆ..!

ಯುಎಸ್​ನ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ತಿಂಗಳು ವೈಟ್​ಹೌಸ್​ಗೆ ಭೇಟಿ ನೀಡಿಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್​ನಲ್ಲಿ ಮಾತನಾಡಿದ್ದು. ವ್ಯಾಪಾರ ಒಪ್ಪಂದ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಸಲು ಉಭಯ ನಾಯಕರು ಶೀಘ್ರದಲ್ಲಿಯೇ ಅಮೆರಿಕಾದಲ್ಲಿ ಭೇಟಿಯಾಗಲಿದ್ದಾರೆ. ಈ ವಿಚಾರವನ್ನು ಖುದ್ದು ಡೊನಾಲ್ಡ್ ಟ್ರಂಪ್ ಅವರೇ ಹೇಳಿಕೊಂಡಿದ್ದಾರೆ.

ಸೋಮವಾರದಂದು ನಾನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಮುಂದಿನ ತಿಂಗಳು ಅವರು ವೈಟ್​ಹೌಸ್​ಗೆ ಭೇಟಿ ನೀಡಲಿದ್ದಾರೆ. ನಾವು ಈಗಾಗಲೇ ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇವೆ ಎಂದು ಟ್ರಂಪ್ ಫ್ಲೋರಿಡಾದಿಂದ ವಾಪಸ್ ಬರುವಾಗ ಮಾಧ್ಯಮಗಳಿಗೆ ಹೇಳಿದ್ದಾರೆ. ಪತ್ರಕರ್ತರು ಫೋನ್​ ಕರೆಯಲ್ಲಿ ಮೋದಿಯವರೊಂದಿಗೆ ಏನೆಲ್ಲಾ ಚರ್ಚೆಗಳನ್ನು ಮಾಡಿದಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಡೊನಾಲ್ಡ್ ಟ್ರಂಪ್ ನಾನೀಗಾಗಲೇ ಮೋದಿಯವರೊಂದಿಗೆ ಫೋನ್​ನಲ್ಲಿ ಎಲ್ಲವನ್ನೂ ಮಾತನಾಡಿದ್ದೇನೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:ಮನೆಯಲ್ಲಿ ಬೈಯುತ್ತಿದ್ದ ಅಪ್ಪನನ್ನೇ ಜೈಲಿಗೆ ಕಳುಹಿಸಿದ 10 ವರ್ಷದ ಮಗ; ಅಸಲಿಗೆ ಆಗಿದ್ದೇನು?

ಇನ್ನು ವೈಟ್​ಹೌಸ್​ನಿಂದ ಬಿಡುಗಡೆಗೊಂಡಿರುವ ಹೇಳಿಕೆಯ ಪ್ರಕಾರ ಟ್ರಂಪ್ ಮೋದಿಯವರೊಂದಿಗೆ ಈಗಾಗಲೇ ಉಭಯ ದೇಶಗಳ ನಡುವಿನ ಸಹಕಾರ ಹಾಗೂ ಬಾಂಧ್ಯವನ್ನು ಮತ್ತಷ್ಟು ವಿಸ್ತಾರ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೈಟ್​​ಹೌಸ್​ಗೆ ಭೇಟಿ ನೀಡಿದಾಗ ಪ್ರಾದೇಶಿಕ ಸಮಸ್ಯೆಗಳು ಸೇರಿದಂತೆ ಇಂಡೊ ಫೆಸಿಫಿಕ್​ ನಡುವಿನ ರಕ್ಷಣಾ ವ್ಯವಸ್ಥೆ, ಮಧ್ಯಪ್ರಾಚ್ಯ ಹಾಗೂ ಯುರೋಪನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದೆ.
ಅದರಲ್ಲೂ ಪ್ರಮುಖವಾಗಿ ಡೊನಾಲ್ಡ್ ಟ್ರಂಪ್ ಅಮೆರಿಕಾ ನಿರ್ಮಿತ ಶಸ್ತ್ರಾಸ್ತ್ರಗಳ ವ್ಯಾಪಾರ ಒಪ್ಪಂದಕ್ಕಾಗಿ ಮೋದಿಯವರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸೌದಿ ಅರೇಬಿಯಾಗಿದೆಯಾ ಉಕ್ರೇನ್​-ರಷ್ಯಾ ಯುದ್ಧ ನಿಲ್ಲಿಸುವ ಶಕ್ತಿ; ಡೊನಾಲ್ಡ್ ಟ್ರಂಪ್ ಶಾಕಿಂಗ್ ಹೇಳಿಕೆ

ಇಬ್ಬರು ನಾಯಕರು ಅಮೆರಿಕಾ ಹಾಗೂ ಭಾರತದ ನಡುವಿನ ಬಾಂಧವ್ಯ ಹಾಗೂ ಶಕ್ತಿಯನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಈ ಭೇಟಿ ನಡೆಯಲಿದೆ. ಟ್ರಂಪ್ ಕೂಡ ಉಭಯ ದೇಶಗಳ ನಡುವಿನ ಬಾಂಧವ್ಯ ಸ್ನೇಹ ಹಾಗೂ ಗಟ್ಟಿಯಾದ ಒಪ್ಪಂದಗಳು ನಡೆಸುವ ನಿಟ್ಟಿನಲ್ಲಿ, ಇಂಡೋ ಫೆಸಿಫಿಕ್​ ಕ್ವಾಡ್​ ಪಾಲುದಾರಿಕೆಯಲ್ಲಿ ಸ್ನೇಹವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬದ್ಧರಾಗಿದ್ದಾರೆ ಎಂದು ವೈಟ್​ಹೌಸ್​ ಮೂಲಗಳು ಹೇಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment