ಟ್ರಂಪ್ ತೆರಿಗೆ ಯುದ್ಧಕ್ಕೆ ನಡುಗಿದ ಜಗತ್ತು.. ಭಾರತ ಸೇರಿ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣ..!

author-image
Ganesh
Updated On
ಟ್ರಂಪ್ ತೆರಿಗೆ ಯುದ್ಧಕ್ಕೆ ನಡುಗಿದ ಜಗತ್ತು.. ಭಾರತ ಸೇರಿ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣ..!
Advertisment
  • ದಿನದ ಆರಂಭದಲ್ಲೇ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ
  • ಭಾರತ ಸೇರಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ
  • ಸೆನ್ಸೆಕ್ಸ್​ 4000 ಅಂಕ ಕುಸಿತ, ಷೇರು ಮಾರುಕಟ್ಟೆಯಲ್ಲಿ ತಲ್ಲಣ

ಬೆಂಗಳೂರು: ಡೊನಾಲ್ಡ್ ಟ್ರಂಪ್ ತೆರಿಗೆ ವಾರ್​ಗೆ ಇಡೀ ಜಗತ್ತು ನಡುಗುತ್ತಿದೆ. ರೈತರಿಂದ ಹಿಡಿದು ಷೇರು ಮಾರುಕಟ್ಟೆಗಳವರೆಗೆ ಎಲ್ಲವೂ ಗೊಂದಲದಲ್ಲಿವೆ. ಇಂದು ಷೇರು ಮಾರುಕಟ್ಟೆಗಳು ಕುಸಿದಿರುವುದು ಟ್ರಂಪ್ ಜಗತ್ತಿನ ಮೇಲೆ ಹಾಕಿರುವ ‘ಪ್ರತೀಕಾರದ ತೆರಿಗೆ’ಯ ಪರಿಣಾಮ ಅನ್ನೋದು ಸ್ಪಷ್ಟವಾಗುತ್ತಿದೆ.

ಟ್ರಂಪ್ ಪ್ರತೀಕಾರದ ಸುಂಕಗಳಿಂದಾಗಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ತಲ್ಲಣ ಆಗಿದೆ. ಇದರಿಂದ ಭಾರತೀಯ ಷೇರು ಮಾರುಕಟ್ಟೆಗಳೂ ಹೊರತಾಗಿಲ್ಲ. ಸೋಮವಾರ ಆರಂಭವಾಗುತ್ತಿದ್ದಂತೆ ದೇಶೀಯ ಷೇರು ಮಾರುಕಟ್ಟೆಗಳು ಭಾರೀ ನಷ್ಟಕ್ಕೆ ಸಿಲುಕಿವೆ. ಸೆನ್ಸೆಕ್ಸ್ 3900ಕ್ಕೂ ಹೆಚ್ಚು ಮತ್ತು ನಿಫ್ಟಿ 1140ಕ್ಕೂ ಹೆಚ್ಚು ಅಂಕಗಳೊಂದಿಗೆ ಕುಸಿತ ಕಂಡಿವೆ. ಭಾರತೀಯ ಷೇರು ಮಾರುಕಟ್ಟೆಗಳು ಶೇಕಡಾ 5 ರಷ್ಟು ಕುಸಿತ ಕಂಡಿವೆ.

ಬ್ಯಾಂಕಿಂಗ್, ಐಟಿ ಮತ್ತು ಫಾರ್ಮಾ ಸೇರಿದಂತೆ ಮೂಲಸೌಕರ್ಯ ವಲಯದ ಎಲ್ಲಾ ಷೇರುಗಳು ಕುಸಿದಿವೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಏಷ್ಯಾ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ತೀವ್ರ ನಷ್ಟದಲ್ಲಿವೆ. ಜಪಾನ್‌ನಲ್ಲಿ ಶೇಕಡಾ 8, ಕೋರಿಯಾದಲ್ಲಿ ಶೇಕಡಾ 5, ಆಸ್ಟ್ರೇಲಿಯಾದಲ್ಲಿ ಶೇಕಡಾ 6 ರಷ್ಟು ಹಾಗೂ ಹಾಂಗ್ ಕಾಂಗ್ ಷೇರು ಮಾರುಕಟ್ಟೆ ಶೇಕಡಾ 9 ರಷ್ಟು ಕುಸಿದಿವೆ. ಇನ್ನು ಟ್ರಂಪ್ ಸುಂಕ ನೀತಿಯಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಗಳೂ ಕೂಡ ಭಾರೀ ನಷ್ಟದಲ್ಲಿವೆ.

ಇದನ್ನೂ ಓದಿ: RCB vs MI ; ಇವತ್ತಿನ ಪಂದ್ಯಕ್ಕೂ ಮೊದಲು ಈ 5 ವಿಚಾರಗಳು ನಿಮಗೆ ಗೊತ್ತಿರಲಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment