/newsfirstlive-kannada/media/post_attachments/wp-content/uploads/2025/03/TRUMP_NEW.jpg)
ಯುದ್ಧ ಪೀಡಿತ ಉಕ್ರೇನ್ ನೆಲದಲ್ಲಿ ಖನಿಜ ಸಂಪನ್ಮೂಲಗಳಿಗೆ ಅಮೆರಿಕಕ್ಕೆ ಒತ್ತು ನೀಡಿ ನೆರವು ನೀಡೋದಾಗಿ ಟ್ರಂಪ್ ಹೇಳಿದ್ದರು. ಇದರ ಸಲುವಾಗಿ ಝೆಲೆನ್ಸ್ಕಿ, ಟ್ರಂಪ್ರನ್ನ ಭೇಟಿಯಾಗಿದ್ದರು. ಆದ್ರೆ ಝೆಲೆನ್ಸ್ಕಿ ಮಾತಿನ ಶೈಲಿ ಎಲ್ಲವನ್ನೂ ಬದಲಿಸಿ ಬಿಟ್ಟಿದೆ. ಒಪ್ಪಂದದ ಬದಲು ಎಚ್ಚರಿಕೆಯನ್ನ ತೆಗೆದುಕೊಂಡು ಹೋಗಿದ್ದಾರೆ ಉಕ್ರೇನ್ ಅಧ್ಯಕ್ಷ.
ಉಕ್ರೇನ್ ಮೇಲೆ ರಷ್ಯಾ ಮಾಡಿರುವ ದಾಳಿ ಕಂಡು ಅನೇಕ ದೇಶಗಳು ಇದು 3ನೇ ಯುದ್ಧ ಅಂತಾನೇ ಕನ್ಫಾರ್ಮ್ ಮಾಡಿತ್ತು. ನ್ಯಾಟೋ ಉಕ್ರೇನ್ ಬೆಂಬಲಕ್ಕೆ ನಿಂತಿತ್ತು. ಆದ್ರೆ ಹಲವು ದೇಶಗಳು ರಷ್ಯಾ ಪರ ಬ್ಯಾಟ್ ಬೀಸಿದ್ದವು. ಉಕ್ರೇನ್-ರಷ್ಯಾ ನಡುವೆ ಯುದ್ಧ ಶುರುವಾಗಿ 3 ವರ್ಷ ಉರುಳಿವೆ. ಆದ್ರೆ, ಯುದ್ಧ ಮಾತ್ರ ಅಂತ್ಯವಾಗುತ್ತಿಲ್ಲ. ಭಾರತದ ಪ್ರಧಾನಿ ಮೋದಿ, ಎರಡೂ ದೇಶಗಳ ಜೊತೆ ಮಾತುಕತೆ ನಡೆಸಿದ್ರೂ, ಪ್ರಯೋಜನ ಆಗಿಲ್ಲ. ಇದೀಗ ರಷ್ಯಾ-ಉಕ್ರೇನ್ ಮಧ್ಯೆ ಕದನ ವಿರಾಮಕ್ಕೆ ಮಧ್ಯಸ್ಥಿತಿ ವಹಿಸಿಲು ವಿಶ್ವದ ದೊಡ್ಡಣ ಅಮೆರಿಕ ಮುಂದಾಗಿತ್ತು. ಆದ್ರೆ ಆಗಿದ್ದೇ ಬೇರೆ.
ಡೀಲ್ ಒಪ್ಪಿಕೋ ಎಂದ ಟ್ರಂಪ್ ಜೊತೆ ಝೆಲೆನ್ಸ್ಲಿ ವಾಗ್ವಾದ
ರಷ್ಯಾ ಜೊತೆಗಿನ ಯುದ್ಧದ ಆರಂಭದಲ್ಲಿ ಉಕ್ರೇನ್ ಜೊತೆಗಿದ್ದ ಅಮೆರಿಕ, ಇದೀಗ ಕದನ ವಿರಾಮಕ್ಕೆ ಮಧ್ಯಸ್ಥಿತಿವಹಿಸುವ ಮಾತನಾಡುತ್ತಿದೆ. ಇದರ ನಡುವೆ ಉಕ್ರೇನ್ ಅಧ್ಯಕ್ಷ ಅಮೆರಿಕ ಪ್ರವಾಸ ಕೈಗೊಂಡಿದ್ದು, ಯುದ್ಧವನ್ನ ಕೊನೆಗೊಳಿಸುವತ್ತ ನಿರ್ಣಾಯಕ ಹೆಜ್ಜೆ ಎಂದೇ ಇಡೀ ವಿಶ್ವ ಭಾವಿಸಿತ್ತು. ಆದ್ರೆ ಟ್ರಂಪ್, ಝೆಲೆನ್ಸ್ಕಿ ಭೇಟಿ ವೇಳೆ ಆಗಿದ್ದೇ ಬೇರೆ. ಒವೆಲ್ ಕಚೇರಿಯಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಜೋರು ಧ್ವನಿಯಲ್ಲೇ ಮಾತಿನಿ ಚಕಮಕಿ ನಡೆಯಿತು. ರಾಜತಾಂತ್ರಿಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಅಮೆರಿಕ ಉಪಾಧ್ಯಕ್ಷ ನೀಡಿದ ಸಲಹೆಗೆ ಉಕ್ರೇನ್ ಅಧ್ಯಕ್ಷ ಲೇವಡಿ ಮಾಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಟ್ರಂಪ್, ಜನರ ಜೀವದ ಜೊತೆ ಆಟವಾಡಬೇಡ. ನಾವು ನಿಮಗೆ ಸಹಾಯ ಮಾಡದೇ ಇದಿದ್ದರೆ, ಎರಡು-ಮೂರು ವಾರಗಳನ್ನೇ ನಿಮ್ಮ ಕಥೆ ಮುಗಿಯುತ್ತಿತ್ತು ಎಂದು ಸಾಲು ಸಾಲು ವಾರ್ನಿಂಗ್ ನೀಡಿದ್ದಾರೆ.
ಡೀಲ್ ಒಪ್ಪಿಕೋ.. ಇಲ್ಲದಿದ್ದರೆ ನಾವು ಹೊರಗುಳಿಯುತ್ತೇವೆ
ಝೆಲೆನ್ಸ್ಕಿಯ ಮನವೊಲಿಕೆ ಮಾಡಲು ಟ್ರಂಪ್ ಎಷ್ಟೇ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗಲಿಲ್ಲ. ಬಳಿಕ ಇಬ್ಬರ ನಡುವಿನ ವಾಗ್ವಾದ ಮತ್ತಷ್ಟು ತಾರತಕ್ಕೇರಿತು. ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಕ್ಕೆ ನಮಗೆ ನೀವು ಕೃತಜ್ಞತೆ ತೋರಿಸಬೇಕು. ಹೀಗೆ ವಾದಿಸೋದು ಸರಿಯಲ್ಲ. ಒಂದು ವೇಳೆ ಕದನ ವಿರಾಮದ ಡೀಲ್ಗೆ ಒಪ್ಪದಿದ್ದರೆ, ಅಮೆರಿಕ ತನ್ನ ಬೆಂಬಲವನ್ನು ಹಿಂಪಡೆಯುತ್ತೆ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಟ್ರಂಪ್, ಝೆಲೆನ್ಸ್ಕಿಗೆ ವಾರ್ನಿಂಗ್ ಮಾಡಿದ್ದಾರೆ.
ಇದನ್ನೂ ಓದಿ:ಇಂದಿನಿಂದ ದ್ವಿತೀಯ PUC Exam- 1.. ಈ ಬಾರಿ ಎಷ್ಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ?
ಓವಲ್ ಆಫೀಸ್ನಲ್ಲಿ ಮಾತಿನ ಸ್ಫೋಟದ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗಿನ ಮಾತುಕತೆಯನ್ನ ಟ್ರಂಪ್ ಮೊಟಕುಗೊಳಿಸಿದರು. ಇಷ್ಟಾದ್ರೂ ಅಮೆರಿಕ ಅಧ್ಯಕ್ಷ ಟ್ರಂಪ್ ಶಾಂತಿಗೆ ಸಿದ್ಧರಾದಾಗ ಮತ್ತೆ ಬರಬಹುದು ಎಂದು ಝೆಲೆನ್ಸ್ಕಿಗೆ ಪರೋಕ್ಷ ಆಹ್ವಾನ ನೀಡಿದ್ದಾರೆ. ಅಮೆರಿಕ ಮಾತಿಗೆ ಬಗ್ಗದ ಝೆಲೆನ್ಸ್ಕಿ, ಶ್ವೇತಭವನದಿಂದ ಹೊರ ನಡೆದರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಡೆದುಕೊಂಡ ರೀತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಮಾತುಕತೆಗೆ ಕರೆದು, ಬೆದರಿಕೆ ಹಾಕಿದ್ದು ಸರಿನಾ ಎಂಬ ಚರ್ಚೆಗಳು ನಡೆಯುತ್ತಿವೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ