/newsfirstlive-kannada/media/post_attachments/wp-content/uploads/2025/02/TRUMP-GIFT-TO-MODI.jpg)
ಯುಎಸ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುಸ್ತಕ ಅವರ್ ಜರ್ನಿ ಟುಗೇದರ್ನ ಒಂದು ಪ್ರತಿ ಉಡುಗೊರೆಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿ. ಅದರಲ್ಲಿ ತಮ್ಮ ಹಸ್ತಾಕ್ಷರವನ್ನು ಮಾಡಿದ್ದಾರೆ. ಮಿಸ್ಟರ್ ಪ್ರೈಮ್ ಮಿನಿಸ್ಟರ್ ಯು ಆರ್ ಗ್ರೇಟ್ ಎಂದು ಬರೆಯುವ ಮೂಲಕ, ಟ್ರಂಪ್ ಸಹಿ ಮಾಡಿ ಆ ಪುಸ್ತಕವನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಒಂದು ಫೋಟೋಬುಕ್ನಲ್ಲಿ, ಟ್ರಂಪ್ನ ಹಿಂದಿನ ಅವಧಿ ಸರ್ಕಾರದಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯಾದ ವಿಶೇಷ ಫೋಟೋಗಳಿವೆ. ಅದರಲ್ಲೂ ಸೆಪ್ಟಂಬರ್ 2019ರಲ್ಲಿ ಅಮೆರಿಕಾದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ವಿಶೇಷ ಫೋಟೋಗಳು ಇವೆ.
ಮೋದಿ ಅಮೆರಿಕಾದ ಟ್ರಂಪ್ ಓವಲ್ ಆಫೀಸ್ ತಲುಪಿದಾಗಿ ಮೋದಿಯನ್ನು ಗಟ್ಟಿಯಾಗಿ ತಬ್ಬಿಕೊಂಡ ಟ್ರಂಪ್ ಆ ನಂತರ ಉಭಯ ದೇಶಗಳ ನಡುವಿನ ಚರ್ಚೆಗೆ ಕುಳಿತರು. ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಟ್ರಂಪ್ ತಾವು ಸಹಿ ಮಾಡಿದ ವಿಶೇಷ ಉಡುಗೊರೆಯನ್ನು ಮೋದಿಯವರಿಗೆ ನೀಡಿದರು. ಈ ಒಂದು ಪುಸ್ತಕದಲ್ಲಿ 2020ರಲ್ಲಿ ಭಾರತದಲ್ಲಿ ನಡೆದ ನಮಸ್ತೆ ಟ್ರಂಪ್ನ ಹಲವು ವಿಶೇಷ ಛಾಯಾಚಿತ್ರಗಳು ಕೂಡ ಸೇರಿವೆ. ಮೆಲಾನಿಯಾ ಟ್ರಂಪ್ ಜೊತೆ ತಾಜ್ ಮಹಲ್ ಎದುರು ನಿಂತು ತೆಗೆದುಕೊಂಡಿರುವ ಫೋಟೋಗಳು ಕೂಡ ಇವೆ.
ಅಮೆರಿಕಾದಲ್ಲಿ ಮೋದಿಯೊಂದಿಗೆ ಭೇಟಿ ಮಾಡುವುದು ನಿಜಕ್ಕೂ ಒಂದು ಗೌರವದ ಸಂಕೇತ ಕಳೆದ ಹಲವು ವರ್ಷಗಳಿಂದ ಅವರು ನನಗೆ ಅದ್ಭುತ ಸ್ನೇಹಿತನಾಗಿದ್ದಾರೆ. ನಮ್ಮ ನಡುವೆ ಒಂದು ಗಟ್ಟಿಯಾದ ಬಾಂಧವ್ಯವಿದೆ. ಕಳೆದ 4 ವರ್ಷಗಳಿಂದ ಈ ಒಂದು ಬಾಂಧವ್ಯವನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ:ಮೋದಿ ಭೇಟಿ ಬೆನ್ನಲ್ಲೇ ಟ್ರಂಪ್ ದೊಡ್ಡ ಘೋಷಣೆ.. ತಹವ್ವೂರ್ ರಾಣಾ ಬಗ್ಗೆ ಮಹತ್ವದ ನಿರ್ಧಾರ
ಇನ್ನು ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ವಿಚಾರವಾಗಿಯೂ ಕೂಡ ಟ್ರಂಪ್ ಸ್ಪಷ್ಟ ನುಡಿಗಳನ್ನು ಆಡಿದ್ದಾರೆ. ಭಾರತ ಅಮೆರಿಕಾದ ಸರಕುಗಳ ಮೇಲೆ ಏನು ಸುಂಕ ವಿಧಿಸಲಿದೆಯೋ ಅದೆ ಪ್ರಮಾಣದ ಸುಂಕವನ್ನು ಅಮೆರಿಕಾ ಭಾರತದ ಸರಕುಗಳಿಗೆ ವಿಧಿಸಲಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಒಬ್ಬರು ನಾಯಕರು ಉಭಯ ದೇಶಗಳ ನಡುವೆ ನಡೆಯಬೇಕಾದ ವ್ಯಾಪಾರ ಒಪ್ಪಂದಗಳ ನಡುವಿನ ಮಾತುಕತೆ ನಡೆಸಿದರು. ನಾವು ಅದ್ಭುತ ವ್ಯಾಪಾರ ಒಪ್ಪಂದಕ್ಕೆ ಒಂದು ಯೋಜನೆಯನ್ನು ರೂಪಿಸಿದ್ದೆವೆ. ಭಾರತ ಮತ್ತು ಅಮೆರಿಕಾದ ನಡುವಿನ ವ್ಯಾಪಾರ ಒಪ್ಪಂದಕ್ಕೆ ವಿಶೇಷವಾಗಿ ಪ್ಲ್ಯಾನ್ ಮಾಡಲಾಗಿದೆ ಎಂದು ಕೂಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ