/newsfirstlive-kannada/media/post_attachments/wp-content/uploads/2025/04/Rana_Extradition_2.jpg)
2008ರ ಮುಂಬೈನ ದಾಳಿಯ ಪ್ರಮುಖ ಸಂಚುಕೋರ ತಹವೂರ್ ಹುಸೇನ್ ರಾಣಾ (Tahawwur rana) ಮುಂಬೈ ದಾಳಿಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ದೆಹಲಿಯ ತಿಹಾರ್ ಜೈಲಿನಲ್ಲಿರುವ (Tihar Jail) ತಹವೂರ್ ಹುಸೇನ್ ರಾಣಾನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು (Mumbai crime branch police) ವಿಚಾರಣೆಗೊಳಪಡಿಸಿದ್ದಾರೆ.
2008ರ ನವಂಬರ್ 26 ರಂದು ಮುಂಬೈನ ಮೇಲೆ ಪಾಕಿಸ್ತಾನದ 10 ಉಗ್ರರು ದಾಳಿ ನಡೆಸಿ ಜನರ ಮಾರಣ ಹೋಮ ನಡೆಸಿದಾಗ ತಾನು ಮುಂಬೈನಲ್ಲೇ ಇದ್ದೆ ಎಂದಿದ್ದಾನೆ. ತಾನು ಪಾಕ್ ಸೇನೆಯ ನಂಬಿಕಸ್ಥ ಏಜೆಂಟ್ ಎಂದು ಹೇಳಿದ್ದಾನೆ. ತಾನು ಹಾಗೂ ತನ್ನ ಸ್ನೇಹಿತ ಡೇವಿಡ್ ಕೋಲಮನ್ ಹೆಡ್ಲಿ (David Headley) ಪಾಕಿಸ್ತಾನದ ಲಷ್ಕರ್ ಇ ತೋಯ್ಬಾದಿಂದ (Lashkar-e-Taiba) ಸಾಕಷ್ಟು ತರಬೇತಿಯನ್ನು ಪಡೆದಿದ್ದೇವೆ ಎಂದಿದ್ದಾನೆ. ಲಷ್ಕರ್-ಇ-ತೋಯ್ಬಾ ಪ್ರಮುಖವಾಗಿ ಗೂಢಚಾರ ನೆಟ್ವರ್ಕ್ ಆಗಿ ಕೆಲಸ ಮಾಡುತ್ತೆ ಎಂದಿದ್ದಾನೆ.
ಮುಂಬೈನಲ್ಲಿ ವಲಸೆ ಸೆಂಟರನ್ನು ತನ್ನ ಕಂಪನಿಯಿಂದ ತೆರೆದಿದ್ದು, ಅದರ ಮೂಲಕ ಹಣಕಾಸು ವ್ಯವಹಾರ ನಡೆಸಿದ್ದನ್ನು ಬ್ಯುಸಿನೆಸ್ ವೆಚ್ಚ ಎಂದು ಮಾಡಿದ್ದೆ. 2008ರ ಮುಂಬೈನ ದಾಳಿಯ ಉಗ್ರಗಾಮಿಗಳ ಪ್ಲಾನ್ನಲ್ಲಿ ನಾನೂ ಕೂಡ ಭಾಗಿಯಾಗಿದ್ದೆ ಎಂದು ತಹವೂರ್ ಹುಸೇನ್ ರಾಣಾ ಹೇಳಿದ್ದಾನೆ.
ಇದನ್ನೂ ಓದಿ: ಫೋಟೋಗೆ ಪೋಸ್ ಕೋಡೋದಕ್ಕೆ ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ..
ದಾಳಿಗೂ ಮುನ್ನ ತಾನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ಗೆ ಭೇಟಿ ನೀಡಿದ್ದೆ. ಪಾಕಿಸ್ತಾನದ ಗುಪ್ತಚಾರ ಸಂಸ್ಥೆಯಾದ ಐಎಸ್‌ಐ ಸಹಯೋಗದೊಂದಿಗೆ ದಾಳಿ ನಡೆಸಲಾಗಿತ್ತು. ಖಲೀಜಾ ಯುದ್ಧದ ವೇಳೆ ತನ್ನನ್ನು ಪಾಕಿಸ್ತಾನ ಸೇನೆಯು ಸೌದಿ ಅರೇಬಿಯಾಕ್ಕೆ ಕಳಿಸಿತ್ತು ಎಂದಿದ್ದಾನೆ. ಈ ವಿಚಾರಣೆಯ ಬಳಿಕ ಮುಂಬೈ ಪೊಲೀಸರು ದೆಹಲಿಯ ತಿಹಾರ್ ಜೈಲಿನಲ್ಲಿರುವ ತಹವೂರ್ ಹುಸೇನ್ ರಾಣಾನ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಅಮೆರಿಕಾದಲ್ಲಿದ್ದ ತಹವೂರ್ ಹುಸೇನ್ ರಾಣಾನನ್ನು ಮೇ ತಿಂಗಳಿನಲ್ಲಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಬಳಿಕ ದೆಹಲಿಗೆ ಕರೆ ತಂದು ಎನ್‌ಐಎ ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿಟ್ಟಿದೆ. ದೆಹಲಿಯ ಎನ್‌ಐಎ ಕೋರ್ಟ್ ಜುಲೈ 9 ರವರೆಗೆ ತಹವೂರ್ ಹುಸೇನ್ ರಾಣಾಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ರಾಣಾನನ್ನು ಬಂಧಿಸಿ ತಮ್ಮ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ವ್ಯಾಕ್ಸಿನ್ ಹೃದಯಾಘಾತಕ್ಕೆ ಕಾರಣವಲ್ಲ, ಕೊರೊನಾ ಕೂಡ ಕಾರಣ; ಸರ್ಕಾರದಿಂದ 4 ಮಹತ್ವದ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ