/newsfirstlive-kannada/media/post_attachments/wp-content/uploads/2024/04/matte-libs.jpg)
ಲಿಪ್ ಸ್ಟಿಕ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಈಗಂತೂ ಚಿಕ್ಕ ಹುಡುಗಿಯರಿಂದ ಹಿಡಿದು ವೃದ್ಧರವರೆಗೂ ಲಿಪ್ ಸ್ಟಿಕ್ ಹಚ್ಚಿಕೊಳ್ಳದೇ ಮನೆಯಿಂದ ಹೊರ ಬರುವುದಿಲ್ಲ. ಅದರಲ್ಲೂ ಇಷ್ಟಪಡದೇ ಇರುವ ಮಹಿಳೆಯರು ಬಹಳ ಕಡಿಮೆ. ಲಿಪ್ ಸ್ಟಿಕ್ ಹಚ್ಚಿದರೆ ಮುಖದ ಅಂದ ಹೆಚ್ಚುವುದು ಎಂಬುದು ಮಹಿಳೆಯರ ಅಭಿಪ್ರಾಯವಾಗಿದೆ.
/newsfirstlive-kannada/media/post_attachments/wp-content/uploads/2024/04/face-dull-1.jpg)
ಪಾರ್ಟಿ, ಸಮಾರಂಭ, ವಿಶೇಷ ಕಾರ್ಯಕ್ರಮಗಳಲ್ಲಿ ಲಿಪ್ ಸ್ಟಿಕ್ ಹಚ್ಚಿಕೊಳ್ಳದೇ ಮಹಿಳೆಯರು ಹೊರಗೆ ಕಾಲು ಕೂಡ ಇಡುವುದಿಲ್ಲ. ಅದರಲ್ಲಿಯೂ ಕೆಲ ಮಹಿಳೆಯರು ಪ್ರತಿದಿನ ಲಿಪ್ ಸ್ಟಿಕ್ ಹಚ್ಚಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಎಲ್ಲಾ ಮಹಿಳೆಯರಿಗೂ ಸುಂದರವಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗಾಗಿ ಕನ್ನಡಿ ಮುಂದೆ ನಿಂತುಕೊಂಡರೇ ಗಂಟೆಗಟ್ಟಲೇ ಸಿಂಗಾರ ಮಾಡಿಕೊಳ್ಳುತ್ತಾ ಇರುತ್ತಾರೆ. ಎಲ್ಲ ಮೇಕಪ್ ಸಾಧನಗಳನ್ನು ಬಳಸಿದರೂ, ಮಹಿಳೆಯರ ಮುಖದ ಅಂದ ಹೆಚ್ಚಿಸುವುದೇ ಲಿಪ್ ಸ್ಟಿಕ್.
/newsfirstlive-kannada/media/post_attachments/wp-content/uploads/2024/04/matte-libs1.jpg)
ಅದರಲ್ಲೂ ಮಹಿಳೆಯರು ಹಚ್ಚುವ ಲಿಪ್ ಸ್ಟಿಕ್​ನಲ್ಲಿ ನಾನಾ ವಿಧಗಳಿವೆ. ನಿಮ್ಮ ಮುಖಕ್ಕೆ ಯಾವ ಬಣ್ಣ ಲಿಪ್ ಸ್ಟಿಕ್ ಸೂಕ್ತ ಅನಿಸುತ್ತದೆ ಅದನ್ನು ಬಳಸಿದರೆ ಉತ್ತಮ. ಸಾಮಾನ್ಯವಾಗಿ ಮಹಿಳೆಯರು ಲಿಕ್ವಿಡ್ ತರಹದ ಲಿಪ್ ಸ್ಟಿಕ್ ಬಳಸುತ್ತಾರೆ. ಆದರೆ ಲಿಕ್ವಿಡ್ ತರಹದ ಲಿಪ್ ಸ್ಟಿಕ್ ಬಳಸಿದರೇ ಬೇಗನೇ ತುಟಿಯಿಂದ ಹೋಗುತ್ತದೆ. ಆದರೆ ಮ್ಯಾಟ್ ಲಿಪ್ ಸ್ಟಿಕ್ ಹಚ್ಚಿಕೊಂಡರೇ ಅಷ್ಟೂ ಸುಲಭವಾಗಿ ಹೋಗುವುದಿಲ್ಲ. ಹೀಗಾಗಿ ಈ ಟ್ರಿಕ್​ ಯೂಸ್​ ಮಾಡಿದರೇ ಬಹು ಬೇಗನೇ ಮ್ಯಾಟ್ ಲಿಪ್ ಸ್ಟಿಕ್ ತುಟಿಯಿಂದ ಮಂಗಮಾಯ ಮಾಡಬಹುದಾಗಿದೆ.
ಇದನ್ನೂ ಓದಿ:ಮಹಿಳೆಯರೇ ಎಚ್ಚರ.. ಬಿರು ಬಿಸಿಲಿನಲ್ಲಿ ಈ ಬಟ್ಟೆ ಧರಿಸಿ ತಪ್ಪು ಮಾಡಬೇಡಿ; ಯಾವ ಉಡುಪು ಹಾಕಿದ್ರೆ ಬೆಸ್ಟ್!
/newsfirstlive-kannada/media/post_attachments/wp-content/uploads/2024/04/matte-libs2.jpg)
ಸಾಕಷ್ಟು ಮಹಿಳೆಯರು ಮ್ಯಾಟ್​ ಲಿಪ್ ಸ್ಟಿಕ್ ಹಚ್ಚಿಕೊಂಡು ಬರೆಸಿಕೊಳ್ಳಲು ಒದ್ದಾಡುತ್ತಾರೆ. ಆದರೆ ಸುಲಭವಾಗಿ ಮ್ಯಾಟ್​ ಲಿಪ್ ಸ್ಟಿಕ್​​ ಅನ್ನು ವ್ಯಾಸಲಿನ್ ಮೂಲಕ ಅಳಿಸಬಹುದಾಗಿದೆ. ಸ್ವಲ್ಪ ವ್ಯಾಸಲಿನ್ ತೆಗೆದುಕೊಂಡು ಮ್ಯಾಟ್​ ಲಿಪ್ ಸ್ಟಿಕ್ ಮೇಲೆ ನಿಧನವಾಗಿ ಬರೆಸಿಕೊಳ್ಳಿ ಬಳಿಕ ಒಂದು ಟಿಶ್ಯೂ ಪೇಪರ್​ನಿಂದ ಅಳಿಸಿಕೊಂಡರೆ ಒಂದೇ ಕ್ಷಣದಲ್ಲಿ ಮ್ಯಾಟ್​ ಲಿಪ್ ಸ್ಟಿಕ್​​ ತುಟಿಯ ಮೇಲಿಂದ ಮಾಯ ಆಗುತ್ತದೆ. ನೀವು ಕೂಡ ಒಂದು ಬಾರಿ ಟ್ರೈ ಮಾಡಿ ನೋಡಿ. ಇನ್ನೊಂದು ವಿಧಾನವೆಂದರೆ ಕ್ರೀಮ್ ಅಥವಾ ಎಣ್ಣೆ ಆಧಾರಿತ ಕ್ಲಿನ್ಸರ್‌ನಲ್ಲಿ ಅದ್ದಿ, ಅದನ್ನು ತುಟಿಗಳಿಗೆ ಹಚ್ಚಿಕೊಂಡು ಮತ್ತು ಕೆಲವು ನಿಮಿಷಗಳ ನಂತರ ಬರೆಸಿಕೊಂಡರೇ ಹೋಗುತ್ತದೆ. ಜೊತೆಗೆ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸಹ ಬಳಸಬಹುದು.
ಲೇಖನ: ವೀಣಾ ಗಂಗಾಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us