/newsfirstlive-kannada/media/post_attachments/wp-content/uploads/2025/02/silk-sarees1.jpg)
ಹೆಣ್ಣಿಗೆ ಸೀರೆ ಯಾಕೆ ಅಂದ ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ.. ಅಬ್ಬಬ್ಬಾ ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಪಂಚಪ್ರಾಣ. ಅದರಲ್ಲೂ ರೇಷ್ಮೆ ಸೀರೆ ಇದ್ದರೆ, ಮಹಿಳೆಯರ ಪಾಲಿಗೆ ದೇವಲೋಕದ ಅಪ್ಸರೆಯೇ ಧರೆಗಿಳಿದಂತಾಗುತ್ತೆ.
ಇದನ್ನೂ ಓದಿ:ಬರೋಬ್ಬರಿ 280 KG ತೂಕ.. ಇದು ಯಾರು ಅರಿಯದ ಬಂಗಾರದ ಬಾಗಿಲು; ಏನಿದರ ಇತಿಹಾಸ?
[caption id="attachment_109123" align="aligncenter" width="800"] ಪ್ರಿನ್ಸೆಸ್ ಕಟ್ ಬ್ಲೌಸ್[/caption]
ನಮ್ಮ ಮೈಸೂರು ಸಿಲ್ಕ್ ಸೀರೆ, ಪ್ರಾಚೀನವಾದ ಪಾರಂಪರಿಕ ಉಡುಪಿನ ಪ್ರತೀಕವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರೂ ಮೈಸೂರು ಸಿಲ್ಕ್ ಸೀರೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಮೈಸೂರು ಸಿಲ್ಕ್ ಸೀರೆಗಳಿಗೆ ವಿದೇಶಗಳಲ್ಲಿ ಜನಪ್ರಿಯತೆಯನ್ನು ತಂದುಕೊಡುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿಯೂ ಸೀರೆ ಉಡುಗೆಗೆ ಮಹತ್ವದ ಸ್ಥಾನವಿದೆ. ಶುಭಕಾರ್ಯಗಳಲ್ಲಿ ಮಹಿಳೆಯರು ರೇಷ್ಮೆ ಸೀರೆ ಉಡುಪಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ.
[caption id="attachment_109122" align="aligncenter" width="800"] ಬೋಟ್ ನೆಕ್ ಬ್ಲೌಸ್[/caption]
1912ರಲ್ಲಿ ಬ್ರಿಟನ್‌ನಲ್ಲಿ ರಾಣಿ ವಿಕ್ಟೋರಿಯ ಅವರ ಪಟ್ಟಾಭಿಷೇಕದ ಸಮಯದಲ್ಲಿ ಮಹಾರಾಜರು ಯಂತ್ರ-ನಿರ್ಮಿತ ರೇಷ್ಮೆ ವಸ್ತ್ರಗಳನ್ನು ನೋಡಿ, ಮೈಸೂರಿನಲ್ಲಿ ಇಂತಹದೇ ತಯಾರಿಕೆಯನ್ನು ಆರಂಭಿಸಲು ಪ್ರೇರಿತರಾದರು. ಅದರಿಂದಾಗಿ ಮೈಸೂರು ಸಿಲ್ಕ್ ಕಾರ್ಖಾನೆಗೆ ಪುನಃ ಜನಪ್ರಿಯತೆಯನ್ನು ತಂದುಕೊಟ್ಟರು. ಇನ್ನೂ, ಈಗಂತೂ ನಾರಿ ಮಣಿಯರು ಹೊಸ ಹೊಸ ಡಿಸೈನ್ನಲ್ಲಿ ಮಾರುಕಟ್ಟೆಗೆ ಬರುವ ಸಿಲ್ಕ್ ಸೀರೆಯನ್ನು ಖರೀದಿಸುತ್ತಲೇ ಇರುತ್ತಾರೆ. ಆದರೆ ಖರೀದಿಸಿದ ಆ ಸೀರೆಗಳಿಗೆ ಒಂದೇ ರೀತಿಯಲ್ಲಿ ಬ್ಲೌಸ್ ಡಿಸೈನ್ನಲ್ಲಿ ಸ್ಟಿಚಿಂಗ್ ಮಾಡಿಸಿಕೊಳ್ಳುತ್ತಾರೆ. ಅಂತಹವರು ಈ ಸ್ಟೋರಿ ಓದಲೇಬೇಕು.
[caption id="attachment_109121" align="alignnone" width="800"] ಸ್ಪೆಗೆಟಿ ಸ್ಟೈಲ್ ಬ್ಲೌಸ್[/caption]
ಹೌದು, ಸಾಮಾನ್ಯವಾಗಿ ಮಹಿಳೆಯರು ಮಾರ್ಡನ್ ಬ್ಲೌಸ್ ಡಿಸೈನ್ಸ್ ಧರಿಸುತ್ತಾರೆ. ವಿಶೇಷ ಎಂದರೆ ಮೈಸೂರು ಸಿಲ್ಕ್ ಸೀರೆಗಳ ಮೇಲೆ ಮಾರ್ಡನ್ ಬ್ಲೌಸ್ ಡಿಸೈನ್ಸ್ ಸ್ಟಿಚ್ ಮಾಡಿಕೊಂಡರೇ ಅದರ ಅಂದವನ್ನು ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರು ಈ ಬ್ಲೌಸ್ ಡಿಸೈನ್ಗೆ ಮಾರು ಹೋಗಿದ್ದಾರೆ.
[caption id="attachment_109120" align="alignnone" width="800"] ಹೈ ನೆಕ್ ಬ್ಲೌಸ್[/caption]
ಯಾವುದೇ ಕಾರ್ಯಕ್ರಮದಲ್ಲೂ ಈ ಡಿಸೈನ್ ಎದ್ದು ಕಾಣುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರು, ಯುವತಿಯರು ಶೇರ್ ಮಾಡಿಕೊಂಡಿರೋ ಫೋಟೋದಲ್ಲಿ ಚೆಂದವಾಗಿ ಸೀರೆಯನ್ನು ತೊಟ್ಟುಕೊಂಡು ಇದೇ ಸ್ಟೈಲ್ನಲ್ಲಿ ಬ್ಲೌಸ್ ಸ್ಟಿಚ್ ಮಾಡಿಸಿಕೊಂಡಿದ್ದಾರೆ. ಅದರಲ್ಲೂ ನೀವು ಮೈಸೂರು ಸಿಲ್ಕ್ ಧರಿಸಿಕೊಂಡಾಗ ಈ ಮೇಲಿನ ಟಾಪ್ 5 ಮಾರ್ಡನ್ ಬ್ಲೌಸ್ ಡಿಸೈನ್ಸ್ ಟ್ರೈ ಮಾಡಿ ನೋಡಿ.
[caption id="attachment_109119" align="alignnone" width="800"] ಹಾಲ್ಟರ್ ನೈಕ್ ಡಿಸೈನ್[/caption]
ಮಾರುಕಟ್ಟೆಗೆ ಸಾಕಷ್ಟು ಸ್ಟೈಲ್ನಲ್ಲಿ ಗ್ರಾಂಡ್ ಲುಕ್ ನೀಡುವ ಡಿಸೈನರ್ ಹ್ಯಾಂಡ್ ವರ್ಕ್ ಬ್ಲೌಸ್ಗಳು ಬರುತ್ತಲೇ ಇರುತ್ತವೆ. ಹೀಗಾಗಿ ಮಹಿಳೆಯರು ವಿಭಿನ್ನ ಬ್ಲೌಸ್ ಡಿಸೈನ್ಗೆ ಮನಸೋತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ