ತಿರುಪತಿ ದೇವಸ್ಥಾನದಿಂದ ಅರ್ಜಿ ಆಹ್ವಾನ.. ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ TTD

author-image
Bheemappa
Updated On
ತಿರುಪತಿ ದೇವಸ್ಥಾನದಿಂದ ಅರ್ಜಿ ಆಹ್ವಾನ.. ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ TTD
Advertisment
  • ಆನ್​ಲೈನ್ ಅಲ್ಲ, ಆಫ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿ
  • ಟಿಟಿಡಿಯಿಂದ ಎಷ್ಟು ಉದ್ಯೋಗ ಆಹ್ವಾನ ಮಾಡಲಾಗಿದೆ..?
  • ಅರ್ಜಿಗಳನ್ನು ಎಲ್ಲಿಂದ ಡೌನ್​ಲೋಡ್ ಮಾಡಬೇಕಾಗುತ್ತದೆ?

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಟಿಟಿಡಿ ಸಂಸ್ಥೆ ಅಡಿ ಕಾರ್ಯನಿರ್ವಹಿಸುವ ಶ್ರೀಪದ್ಮಾವತಿ ಮಕ್ಕಳ ಹೃದಯ ಕೇಂದ್ರದಲ್ಲಿ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಇದೇ ಸಂಬಂಧ ನುರಿತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಇದನ್ನೂ ಓದಿ: ಇಂದೇ ಅಪ್ಲೇ ಮಾಡಿ..! ನುರಿತ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಗಳು

ಶ್ರೀಪದ್ಮಾವತಿ ಮಕ್ಕಳ ಹೃದಯ ಕೇಂದ್ರದಲ್ಲಿ ಪಿಡಿಯಾಟ್ರಿಕ್ ಕಾರ್ಡಿಯಾಕ್ ಅನಸ್ತಾಟಿಸ್ಟ್ (Pediatric Cardiac Anaesthetist​) ಹಾಗೂ ಪಿಡಿಯಾಟ್ರಿಕ್ ಕಾರ್ಡಿಯಲಾಜಿಸ್ಟ್​ (Pediatric Cardiologist) ಉದ್ಯೋಗ ಖಾಲಿ ಇವೆ. ಎಂಬಿಬಿಎಸ್​ ಪೂರ್ಣಗೊಳಿಸಿರುವುದರ ಜೊತೆಗೆ ಪಿಜಿ ಕೂಡ ಪೂರ್ಣಗೊಳಿಸಿರಬೇಕು. ಅಲ್ಲದೇ ಈಗಾಗಲೇ ಕೆಲಸ ಮಾಡಿದ ಅನುಭವ ಕೂಡ ಹೊಂದಿರಬೇಕು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿ 42 ವರ್ಷದ ಒಳಗಿನವರು ಆಗಿರಬೇಕು.

publive-image

ಇದನ್ನೂ ಓದಿ:ಕರ್ನಾಟಕ ಲೋಕಾಯುಕ್ತದಿಂದ Group- C ಹುದ್ದೆಗಳ ನೇಮಕಾತಿ.. ಕೊನೆ ದಿನಾಂಕ ಯಾವಾಗ?

ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಈ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಉದ್ಯೋಗ ಪಡೆದ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ 1,01,500 ರೂಪಾಯಿಗಳಿಂದ 1,67,400 ರೂಪಾಯಿ ಸಂಬಳ ನೀಡಲಾಗುತ್ತದೆ. ಈ ಹುದ್ದೆಗಳು ಕಾಂಟ್ರಾಕ್ಟ್ ಆಧಾರಿತ ಆಗಿವೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವಾಗ ತಾವು ಈಗಾಗಲೇ ಕೆಲಸ ಮಾಡಿದ ಅನುಭವ ದಾಖಲೆಗಳನ್ನ ನೀಡಬೇಕು. ಇನ್ನು ಅರ್ಜಿಗೆ ಬೇಕಾದ ಪ್ರತಿ ಟಿಟಿಡಿಯ ವೆಬ್​ಸೈಟ್- https://www.tirumala.org/ ​ನಿಂದ ಡೌನ್​ಲೋಡ್ ಮಾಡಿಕೊಳ್ಳಬೇಕು. ಇದು ಆಫ್​ಲೈನ್​ ಮೂಲಕ ಅಪ್ಲೇ ಮಾಡಬೇಕಾಗಿದೆ. ಆನ್​ಲೈನ್ ಲಭ್ಯ ಇರುವುದಿಲ್ಲ.

ವಿಳಾಸ:
ಡೈರೆಕ್ಟರ್​, ಶ್ರೀ ಪದ್ಮಾವತಿ ಚಿಲ್ಡ್ರನ್​ ಹಾರ್ಟ್​ ಸೆಂಟರ್,
ಬಿಐಆರ್​ಆರ್​ಡಿ ಸಮೀಪ, ತಿರುಪತಿ- 517507

ಟಿಟಿಡಿಯಲ್ಲಿ ಮತ್ತೊಂದು ಉದ್ಯೋಗ ಇದೆ
ಟಿಟಿಡಿಯ ನೀರು ಮತ್ತು ಆಹಾರ ಪ್ರಯೋಗಾಲಯದಲ್ಲಿ 1 ಹುದ್ದೆ ಖಾಲಿ ಇದೆ. ಇದನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಹೆಚ್​ಒಡಿ/ ಕ್ವಾಲಿಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಇದಕ್ಕೆ 62 ವರ್ಷದ ಒಳಗಿನ ಅರ್ಜಿ ಸಲ್ಲಿಸಬಹುದು. ಆದರೆ ಅವರು ಕೆಮಿಸ್ಟ್ರಿ, ಬಯೋಕೆಮಿಸ್ಟ್ರಿ, ಡೈರಿ ಕೆಮಿಸ್ಟ್ರಿ, ಫುಡ್ ಸೇಫ್ಟಿ, ಫುಡ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಅಥವಾ ಪಿಹೆಚ್‌ಡಿ ಪೂರ್ಣಗೊಳಿಸಿರಬೇಕು. ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು.

ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನ https://www.tirumala.orgವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಮಾರ್ಕೆಟಿಂಗ್ ಗೊಡನ್, ಮೊದಲ ಮಹಡಿ, ಗೋಶಾಲಾ, ತಿರುಮಲ- 517504 ಗೆ ಕಳುಹಿಸಬೇಕು. ಇದು ಗುತ್ತಿಗೆ ಆಧಾರದ ಕೆಲಸವಾಗಿದೆ.

ಈ 3 ಹುದ್ದೆಗಳಿಗೆ ಕೊನೆ ದಿನಾಂಕ?
2024 ನವೆಂಬರ್ 30

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment