ಲಡ್ಡು ವಿವಾದದ ಬಳಿಕ ತಿರುಪತಿಯಲ್ಲಿ ದಿಟ್ಟ ನಿರ್ಧಾರ; ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

author-image
admin
Updated On
ಲಡ್ಡು ವಿವಾದದ ಬಳಿಕ ತಿರುಪತಿಯಲ್ಲಿ ದಿಟ್ಟ ನಿರ್ಧಾರ; ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ
Advertisment
  • ತಿರುಮಲದಲ್ಲಿ ಹಿಂದೂಯೇತರರಿಗೆ 2 ಆಯ್ಕೆಗಳಿವೆ ಎಂದ TTD
  • ಹಿಂದೂ ಧರ್ಮದ ಬಗ್ಗೆ ಶ್ರದ್ದೆ, ಭಕ್ತಿ ಇಲ್ಲದವರಿಗೆ ಗೇಟ್‌ಪಾಸ್‌!
  • ಲಡ್ಡು ವಿವಾದದ ಬಳಿಕ ಮೊದಲ ಬಾರಿಗೆ TTD ಇಂದ ದಿಟ್ಟ ನಿರ್ಧಾರ

ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಲಡ್ಡು ವಿವಾದದ ಬಳಿಕ ತಿರುಮಲ ತಿರುಪತಿ ದೇವಸ್ಥಾನದ (TTD) ಅಧ್ಯಕ್ಷ ಬಿ.ಆರ್ ನಾಯ್ಡು ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.

ಬಿ.ಆರ್ ನಾಯ್ಡು ಅವರು TTD ಅಧ್ಯಕ್ಷರಾದ ಬಳಿಕ ತಿರುಮಲವನ್ನು ಸ್ವಚ್ಛಗೊಳಿಸುವ ಮಾತನಾಡಿದ್ದರು. ಕೊಟ್ಟ ಮಾತಿನಂತೆ ಈಗ ಬಿ.ಆರ್ ನಾಯ್ಡು ಅವರು ತಿರುಮಲದಲ್ಲಿ ಹಿಂದೂಯೇತರ 18 ಉದ್ಯೋಗಿಗಳಿಗೆ VRS ನೀಡಿದ್ದಾರೆ.

publive-image

ವರ್ಗಾವಣೆ ಅಥವಾ ನಿವೃತ್ತಿ ಫಿಕ್ಸ್‌!
TTD ಅಧ್ಯಕ್ಷ ಬಿ.ಆರ್ ನಾಯ್ಡು ಅವರ ಪ್ರಕಾರ ತಿರುಮಲದಲ್ಲಿ ಹಿಂದೂಯೇತರರಿಗೆ 2 ಆಯ್ಕೆಗಳಿವೆ. ತಿರುಪತಿಯಿಂದ ವರ್ಗಾವಣೆ ಆಗಬೇಕು. ಇಲ್ಲವೇ ಸ್ವಯಂ ನಿವೃತ್ತಿ ಹೊಂದಬೇಕು. ಹಿಂದೂ ಧರ್ಮದ ಬಗ್ಗೆ ಶ್ರದ್ದೆ, ಭಕ್ತಿ ಇಲ್ಲದವರು ಟಿಟಿಡಿ ಉದ್ಯೋಗಿಗಳಾಗಿ ಇರಬಾರದು. ಈ ಹಿನ್ನೆಲೆಯಲ್ಲಿ ಹಿಂದೂಯೇತರರಿಗೆ ಟಿಟಿಡಿ ಸ್ವಯಂ ನಿವೃತ್ತಿ ನೀಡಿ ಗೇಟ್‌ ಪಾಸ್ ಕೊಟ್ಟಿದೆ.

ಇದನ್ನೂ ಓದಿ: Modi Laddu: ಮಾರುಕಟ್ಟೆಯಲ್ಲಿದೆ ‘ಮೋದಿ ಲಡ್ಡು’.. ಭಾರೀ ಫೇಮಸ್ಸು! ಇದರಲ್ಲೇನಿದೆ ವಿಶೇಷತೆ? 

ಲಡ್ಡು ವಿವಾದದ ಬಳಿಕ ಮೊದಲ ಬಾರಿಗೆ 18 ಹಿಂದೂಯೇತರರಿಗೆ VRS ನೀಡಲಾಗಿದೆ. ಇನ್ನೂ ಉಳಿದ ಹಿಂದೂಯೇತರ ಉದ್ಯೋಗಿಗಳಿಗೆ ವಿಆರ್‌ಎಸ್ ನೀಡಿಕೆಗೆ ಟಿಟಿಡಿ ಅಧ್ಯಕ್ಷರು ತೀರ್ಮಾನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment