/newsfirstlive-kannada/media/post_attachments/wp-content/uploads/2025/01/TTD.jpg)
ತಿರುಪತಿಯಲ್ಲಿ ಕಾಲ್ತುಳಿತ ದುರಂತಕ್ಕೆ ಟಿಟಿಡಿ ಬೇಸರ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬಿ.ಆರ್​.ನಾಯ್ಡು.. ಟಿಕೆಟ್ ಪಡೆಯುವಾಗ 6 ಜನ ಮೃತಪಟ್ಟಿದ್ದು ದುರಾದೃಷ್ಟಕರ ಎಂದಿದ್ದಾರೆ.
ಸಂಜೆ ವೇಳೆಗೆ ಪೊಲೀಸರ ತನಿಖಾ ವರದಿ ಟಿಟಿಡಿಗೆ ಸಿಗಲಿದೆ. ಆಮೇಲೆ ಏನ್ ಮಾಡ್ಬೇಕೆಂದು ಸಿಎಂ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ತೇವೆ. ತಿರುಪತಿ ಕಾಲ್ತುಳಿತದ ಹಿಂದೆ ಅಧಿಕಾರಿಗಳ ವೈಫಲ್ಯವಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದು ಸೂಚಿಸಿದ್ದೇವೆ. ಸಂತ್ರಸ್ತ ಕುಟುಂಬಗಳಿಗೆ ಟಿಟಿಡಿ ಬೆಂಬಲ ನೀಡಲಿದೆ. ಡಿಎಸ್ಪಿ ಗೇಟ್ ತೆರೆದಿದ್ದರಿಂದ ಘಟನೆ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೋದು ಒಳ್ಳೆಯದಾ? ಈ ಅನುಮಾನ ಕಾಡಿದೆಯಾ?
ಪ್ರತಿ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ಆಂಧ್ರಪ್ರದೇಶ ಸರ್ಕಾರ ಘೋಷಣೆ ಮಾಡಿದೆ. ಗೃಹ ಸಚಿವೆ ಅನಿತಾ ಅವರು ದುರ್ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಸರ್ಕಾರದ ಪರಿಹಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಭಕ್ತರು ಒಂದು ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: BIGG BOSS; ಮಾರಿಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಾಯಿತು.. ಧನರಾಜ್ ಬಗ್ಗೆ ಭವ್ಯ ವ್ಯಂಗ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us