ಅತ್ಯಂತ ಕಡಿಮೆ ಸಮಯದಲ್ಲಿ ಭಕ್ತರಿಗೆ ದರ್ಶನ; ಹೊಸ ವ್ಯವಸ್ಥೆಗೆ ಮುಂದಾದ TTD; ಇದು ವಿಶ್ವದಲ್ಲೇ ಮೊದಲು!

author-image
admin
Updated On
ಅತ್ಯಂತ ಕಡಿಮೆ ಸಮಯದಲ್ಲಿ ಭಕ್ತರಿಗೆ ದರ್ಶನ; ಹೊಸ ವ್ಯವಸ್ಥೆಗೆ ಮುಂದಾದ TTD; ಇದು ವಿಶ್ವದಲ್ಲೇ ಮೊದಲು!
Advertisment
  • ಕಡಿಮೆ ಸಮಯದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಆಧುನಿಕ ವ್ಯವಸ್ಥೆ
  • ಗೂಗಲ್ ಇಂಕ್ ಜೊತೆ ಮಹತ್ವದ ಒಪ್ಪಂದಕ್ಕೆ ಮುಂದಾದ TTD
  • ಶೀಘ್ರವೇ ತಿಮ್ಮಪ್ಪನ ದರ್ಶನದ ವ್ಯವಸ್ಥೆಗೆ ಅತ್ಯಾಧುನಿಕ ಸೌಲಭ್ಯ

ಕಲಿಗಾಲದಲ್ಲಿ ಈಗೇನಿದ್ರೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನದ್ದೇ (AI) ಹವಾ. ಈ ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ಚಾಕಚಕ್ಯತೆ ಇದೀಗ ತಿಮ್ಮಪ್ಪನ ಭಕ್ತರ ನೆರವಿಗೂ ಬರಲಿದೆ. ತಿರುಪತಿ ತಿಮ್ಮಪ್ಪನ ದೇವಾಲಯ ಇಡೀ ವಿಶ್ವದಲ್ಲೇ AI ಅಳವಡಿಸಿಕೊಳ್ಳುವ ಮೊಟ್ಟ ಮೊದಲ ದೇವಾಲಯ ಅನ್ನೋ ಖ್ಯಾತಿಗೆ ಪಾತ್ರವಾಗುತ್ತಿದೆ.

ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷ, ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಲಕ್ಷಾಂತರ ಭಕ್ತರ ಆಸೆ ಒಂದೇ ಆಗಿರುತ್ತೆ. ನಮಗೆ ಆದಷ್ಟು ಬೇಗ ತಿಮ್ಮಪ್ಪನ ದರ್ಶನ ಆಗಬೇಕು ಅನ್ನೋದು. ಗೋವಿಂದನ ಜಪದಲ್ಲಿ ಲಕ್ಷಾಂತರ ಭಕ್ತರು ಪ್ರತಿ ದಿನ ತಿರುಪತಿಗೆ ಭೇಟಿ ನೀಡುತ್ತಾರೆ.

publive-image

ತಿರುಮಲಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಕಡಿಮೆ ಸಮಯದಲ್ಲಿ ದರ್ಶನ ಸಿಗಬೇಕು. ಇದಕ್ಕೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (TTD) ಸಾಕಷ್ಟು ವ್ಯವಸ್ಥೆಗಳನ್ನ ಮಾಡಿಕೊಂಡಿದೆ. ಆದರೆ ದಿನಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇರೋದು ದೊಡ್ಡ ಸವಾಲಿಗಿದೆ. ಈ ಹಿನ್ನೆಲೆ ಸವಾಲುಗಳ ಹಿನ್ನೆಲೆಯಲ್ಲಿ TTD ಇದೀಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಮೊರೆ ಹೋಗುತ್ತಿದೆ.

publive-image

ಕಡಿಮೆ ಸಮಯದಲ್ಲಿ ಭಕ್ತರಿಗೆ ತಿಮ್ಮಪ್ಪನ ದರ್ಶನ ಆಗಬೇಕು ಎನ್ನುವ ಉದ್ದೇಶದಿಂದ ಎಐ ಆಧಾರಿತ ಸೌಲಭ್ಯ ತರಲು ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ TTD ಗೂಗಲ್ ಇಂಕ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಶೀಘ್ರವೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಮೂಲಕ ಭಕ್ತರ ಪ್ರವಾಸ ಹಾಗೂ ತಿಮ್ಮಪ್ಪನ ದರ್ಶನದ ವ್ಯವಸ್ಥೆಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: ಲಡ್ಡು ವಿವಾದದ ಬಳಿಕ ತಿರುಪತಿಯಲ್ಲಿ ದಿಟ್ಟ ನಿರ್ಧಾರ; ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ 

ತಿರುಮಲದಲ್ಲಿ ನಡೆದ ಟಿಟಿಡಿ ಟ್ರಸ್ಟ್ ಮಂಡಳಿಯ ಸಭೆಯ ನಂತರ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಒಪ್ಪಂದದ ಮೂಲಕ ಭಕ್ತರಿಗೆ ತೊಂದರೆಯಾಗದಂತೆ ಯಾತ್ರೆ ಕೈಗೊಳ್ಳಲು ತಿರುಮಲದಲ್ಲಿ ಎಐ ವ್ಯವಸ್ಥೆಗಳನ್ನ ಅಳವಡಿಸಿಕೊಳ್ಳಲಾಗುವುದು ಎಂದಿದ್ದಾರೆ. ಈ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನದ್ದೇ (AI) ಅಳವಡಿಸಿಕೊಂಡ ವಿಶ್ವದ ಮೊದಲ ಹಿಂದೂ ದೇವಸ್ಥಾನವೆಂಬ ಖ್ಯಾತಿಗೆ ಟಿಟಿಡಿ ಪಾತ್ರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment