/newsfirstlive-kannada/media/post_attachments/wp-content/uploads/2024/02/tukali-santhosh.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿರೋ ತುಕಾಲಿ ಸಂತೋಷ್​ ಸಖತ್​ ಬ್ಯುಸಿಯಾಗಿದ್ದಾರೆ. ಅದರಲ್ಲೂ ಬಿಗ್​ಬಾಸ್​ ಮುಗಿದ ಬಳಿಕವಂತು ಗಿಚ್ಚಿ ಗಿಲಿಗಿಲಿ ಸೀಸನ್​ 3ರಲ್ಲಿ ಸ್ಪರ್ಧಿಯಾಗಿದ್ದಾರೆ. ಇನ್ನು ಭಾನುವಾರದ ಎಪಿಸೋಡ್​ನಲ್ಲಿ ವೇದಿಕೆ ಮೇಲೆ ಸ್ಕಿಟ್​ ಮಾಡುತ್ತಿದ್ದಾಗ ತುಕಾಲಿ ಸಂತೋಷ್ ಅವರ ಕೈಗೆ ಗಂಭೀರವಾಗಿ ಪೆಟ್ಟಾಗಿದೆ.
ಹೌದು, ವೇದಿಕೆ ಮೇಲೆ ವಿನೋದ ಗೊಬ್ಬರಗಾಲ, ಚಿಲ್ಲರ್ ಮಂಜು, ತುಕಾಲಿ ಸಂತೋಷ್​ ಹಾಗೂ ಅವರ ಪತ್ನಿ ಮಾನಸಾ ಸೇರಿಕೊಂಡು ಸ್ಕಿಟ್ ಮಾಡುತ್ತಿದ್ದರು. ಸ್ಕಿಟ್ ಮಾಡುವ ಭರದಲ್ಲಿ ತಕಾಲಿ ಸಂತೋಷ್ ತಮ್ಮ ಶರ್ಟ್​ ಅನ್ನು ಹರಿಯುವ ವೇಳೆ ಈ ಘಟನೆ ನಡೆದಿದೆ. ಕೂಡಲೇ ಆ ಶೋವನ್ನು ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ಗಂಟೆಗಳ ಬಳಿಕ ತುಕಾಲಿ ಸಂತೋಷ್​ ಅವರು ಮತ್ತೆ ಬಂದು ಆ ಸ್ಕಿಟ್​ ಅನ್ನು ಮುಂದುವರೆಸಿದರು. ಇನ್ನು ತುಕಾಲಿ ಸಂತೋಷ್​ ಅವರ ಕಾಮಿಡಿಗೆ ಶೃತಿ ಅವರು ಬಿದ್ದು ಬಿದ್ದು ನಕ್ಕಿದ್ದರು. ಅಷ್ಟು ಕಷ್ಟವನ್ನು ಅನುಭವಿಸುತ್ತಿದ್ದರೂ ಕೂಡ ಮತ್ತೆ ಬಂದು ಸ್ಕಿಟ್​ ಮಾಡಿದ್ದಕ್ಕೆ ಎಲ್ಲರು ಅಭಿನಂದಿಸಿದರು.
View this post on Instagram
ಈ ಹಿಂದೆ ಬಿಗ್​ಬಾಸ್​ನಲ್ಲಿ ಇದ್ದಾಗಲೂ ಕೂಡ ತುಕಾಲಿ ಸಂತೋಷ್​ ಕೈಗೆ ಪೆಟ್ಟಾಗಿತ್ತು. ಆಗ ವೈದ್ಯರು ಇದಕ್ಕೆ ಅಬಾರ್ಷನ್ ಮಾಡಿಸಬೇಕು ಅಂತಾ ಹೇಳಿದ್ದರಂತೆ. ಗಿಚ್ಚಿ ಗಿಲಿಗಿಲಿ ಶೋ ಮುಗಿದ ಬಳಿಕ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇನೆ ಅಂತಾ ಹೇಳಿಕೊಂಡಿದ್ದಾರೆ. ಸದ್ಯ ದೊಡ್ಡ ಗಂಡಾಂತರದಿಂದ ತುಕಾಲಿ ಸಂತೋಷ್​ ಪಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ