newsfirstkannada.com

BBK10: ಬಿಗ್​ಬಾಸ್​ ಮನೆಯಲ್ಲಿ ಸಂತು ಮತ್ತು ಪಂತು ಮಸ್ತ್​​ ಸ್ಟಾಟರ್ಜಿ ಪ್ಲೈ.. ಏನದು ಗೊತ್ತಾ?

Share :

Published January 19, 2024 at 9:09pm

  ತುಕಾಲಿ ಸಂತೋಷ್ ಯಾವಾಗ ಯಾರ ಪರ ಇರ್ತಾರೆ ನಿಮಗೆ ಗೊತ್ತಾ?

  ಮನೆ ಮಂದಿ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದ ತುಕಾಲಿ ಸಂತೋಷ

  ವರ್ತೂರ್​ಗೆ ಫಿನಾಲೆ ಟಿಕೆಟ್ ಮಿಸ್​ ಆಗಲು ತುಕಾಲಿ ಸಂತು ಕಾರಣನಾ?

ಬಿಗ್​ಬಾಸ್​ನಲ್ಲಿ ಇರಬೇಕಂದ್ರೆ ಶಕ್ತಿ ಪ್ರದರ್ಶನದ ಜೊತೆ ಯುಕ್ತಿ ಪ್ರದರ್ಶನವೂ ತುಂಬಾ ಮುಖ್ಯ. ಮನೆ ಒಳಗೆ ಮಾಡೋ ಸ್ಟಾಟರ್ಜಿ ಹೇಗಿರಬೇಕು ಅಂದ್ರೆ ಎದುರಾಳಿ ವ್ಯಕ್ತಿಗೆ ಸ್ವಲ್ಪವೂ ಅನುಮಾನ ಬಾರದಂತೆ ನಿರ್ವಹಿಸಬೇಕು. ಗೊತ್ತಾದ್ರೂ ಏನು ಮಾಡಲು ಆಗದಂತಿರಬೇಕು. ಆದ್ರೆ ಈ ಸೀಸನ್​ನಲ್ಲಿ ಕೂತ್ರು ನಿಂತ್ರೂ ಒಂದೇ ಮಾಡೋದು ಅದುವೇ ಸ್ಟಾಟರ್ಜಿ. ಅದರಲ್ಲೂ ತುಕಾಲಿ ಸಂತೋಷ್ ಅಂತೂ ಯಾವಾಗ ಯಾರ ಪರ ಇರ್ತಾರೆ. ಯಾವಾಗ ಯಾರ ವಿರುದ್ಧ ಆಗ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇದು ಅವರ ಸ್ಟಾಟರ್ಜಿಯೋ ಅಥವಾ ಅವರು ಇರೋದೇ ಹೀಗೋ ಗೊತ್ತಿಲ್ಲ. ಸದ್ಯ ಅದಕ್ಕೆ ಕೆಲ ಉದಾಹರಣೆಗಳನ್ನು ನೀಡುತ್ತೇವೆ.

1. ಸಂಗೀತಾ ಶೃಂಗೇರಿ ಎಂದರೆ ನಿಗಿ ನಿಗಿ ಕೆಂಡ ಕಾರುತ್ತಿದ್ದ ತುಕಾಲಿ!

ಬಿಗ್​ಬಾಸ್​ ಸೀಸನ್ 10 ಶುರುವಾದಗಿನಿಂದ ಫ್ಯಾಮಿಲಿ ರೌಂಡ್ ಆಗುವವರೆಗೂ ಸಂಗೀತಾ ಹಾಗೂ ತುಕಾಲಿಗೆ ಆಗ್ತಾನೆ ಇರಲಿಲ್ಲ. ಇಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಳ್ತಲೇ ಇದ್ದರು. ಆದ್ರೆ ಯಾವಾಗ ಫ್ಯಾಮಿಲಿ ರೌಂಡ್​ನಲ್ಲಿ ತುಕಾಲಿ ಪತ್ನಿ ಬಂದು ಮುಂದಿನ ಕ್ಯಾಪ್ಟನ್ ಆಗಬೇಕು ಅಂದ್ರೋ ಆಗಿನಿಂದ ತುಕಾಲಿಗೆ ಸಂಗೀತಾ ಮೇಲೆ ವಿಶೇಷ ಅಭಿಮಾನ ಬೆಳಿತು. ಸುದೀಪ್ ಸರ್ ಎರಡು ಕೈಯಲ್ಲಿ ಒಂದು ನನ್ನದಿದ್ರೆ ಇನ್ನೊಂದು ಕೈನಲ್ಲಿ ಸಂಗೀತಾ ಇರಬೇಕು. ಆಕೆ ನಿಜವಾದ ಫೈಟರ್ ಅಂತೆಲ್ಲ ಹೇಳಿದ್ದರು. ಆದ್ರೀಗ ಕಥೆ ಫುಲ್ ಉಲ್ಟಾ ಆಗಿದೆ. ತಾನು ಈ ವೀಕ್ ಸೇಫ್​ ಆಗ್ತಿದ್ದ ಹಾಗೇ ಜೊತೆಗೆ ಹಳೆ ಕಂಟೆಸ್ಟೆಂಟ್ ಮನೆಗೆ ಬಂದು ಹೋದ ತಕ್ಷಣ ಸಂಗೀತಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗೇಮ್​ನಲ್ಲಿ ಸಂಗೀತಾಗೆ ಆಡಲು ಬಿಟ್ಟು ಇಕ್ಕಟ್ಟಿನಲ್ಲಿ ಸಿಕ್ಕಿಸೋಣ ಎಂದು ವರ್ತೂರ್ ಜೊತೆ ಕುಳಿತು ಪ್ಲಾನ್ ಮಾಡ್ತಿದ್ದಾರೆ. ತುಕಾಲಿ ಸ್ಟಾಟರ್ಜಿ ಇಲ್ಲಿಗೆ ನಿಂತಿಲ್ಲ ಮುಂದಿನ ಉದಾಹರಣೆಗಳು ಇವೆ.

2. ನಿಮ್ಮಿಂದಲೇ ಅವನಿಗೆ ಹವಾ ಎನ್ನುವ ರೀತಿಯಲ್ಲಿ ವಿನಯ್​ಗೆ ಹೇಳಿದ ತುಕಾಲಿ

ಈ ವಾರದ ಆರಂಭದಲ್ಲಿ ತುಕಾಲಿ ಹಾಗೂ ವರ್ತೂರ್ ಮನೆ ಮುಂದೆ ಕುಳಿತು ಮಾತಾಡ್ತಿರ್ತಾರೆ. ಆಗ ತುಕಾಲಿ ವಿನಯ್​ಗೆ ಅಣ್ಣ ನೀವು ಸೈಲೆಂಟ್ ಆದ ತಕ್ಷಣ ಕಾರ್ತಿಕ್ ಹೇಗೆ ಮೂಲೆ ಗುಂಪಾದ ನೋಡಿ, ನಿಮ್ಮಿಂದಲೇ ಅವನಿಗೆ ಹವಾ ಎನ್ನುವ ರೀತಿ ಮಾತಾಡ್ತಾರೆ. ಅಷ್ಟೇ ಅಲ್ಲದೇ ನಮ್ರತಾ ಜೊತೆ ಸೇರಿ ಕಾರ್ತಿಕ್ ಆಟ ಮರೆತಿದ್ದಾನೆ ಎಂದು ಎಲ್ಲರ ಮುಂದೆಯೂ ಹೇಳಿದ್ರು. ಆದ್ರೆ ನಿನ್ನೆಯ ಸಂಚಿಕೆ ನೋಡಿದರೆ, ಕಾರ್ತಿಕ್​ಗೆ ತುಕಾಲಿ ಫುಲ್​ ಸಪೋರ್ಟ್ ಮಾಡ್ತಿದ್ದಾರೆ. ಒಂದು ಗೇಮ್​ನಲ್ಲಿ ವೋಟ್ ಹಾಕಿ ಅವರನ್ನು ಅಟ್ಟಕ್ಕೆ ಏರಿಸುವಂತೆ ಮಾತಾಡ್ತಿದ್ದಾರೆ. ಅಲ್ಲದೇ ಕಾರ್ತಿಕ್​ನ ಬಳಸಿಕೊಂಡು ಸಂಗೀತಾ ಹಾಗೂ ವಿನಯ್​ನ ಮೂಲೆಗುಂಪು ಮಾಡುವ ಪ್ರಯತ್ನ ಮಾಡೋದು ಮೇಲ್ನೋಟಕ್ಕೆ ಕಂಡು ಬರ್ತಿದೆ.

3. ವರ್ತೂರ್​ಗೆ ಫಿನಾಲೆ ಟಿಕೆಟ್ ಮಿಸ್​ ಆಗಲು ತುಕಾಲಿ ಸಂತೋಷ್ ಕೂಡ ಕಾರಣ

ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಎಂಥ ಒಳ್ಳೆ ಫ್ರೆಂಡ್ಸ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ವರ್ತೂರ್​ನ ಟಿಕೆಟ್ ಟು ಫಿನಾಲೆ ಗೇಮ್​ನಲ್ಲಿ ವಿನಯ್ ಹೊರಗಿಟ್ರು ಅನ್ನೋ ಸಿಟ್ಟು ವರ್ತೂರ್ ತುಂಬಾನೇ ಇದೆ. ಈ ಬಗ್ಗೆ ಅವರು ಸಾಕಷ್ಟು ಸಲ ಮಾತಾಡಿದ್ದಾರೆ ಕೂಡ. ಇನ್ನೂ ನಿನ್ನೆಯ ಸಂಚಿಕೆಯಲ್ಲೂ ನೀತು ಬಳಿ ಈ ಮಾತು ಹೇಳ್ತಿದ್ರು. ಆದ್ರೆ ವರ್ತೂರ್​ನ ಹೀಗೆ ಗೇಮ್​ನಿಂದ ಹೊರಗಿಡಬಹುದು ಎಂದು ಐಡಿಯಾ ಕೊಟ್ಟಿದ್ದೇ ತುಕಾಲಿ. ಈ ಬಗ್ಗೆ ವರ್ತೂರ್​ಗೆ ಗೊತ್ತಿದ್ಯೋ ಇಲ್ವೋ ಗೊತ್ತಿಲ್ಲ. ಆದ್ರೆ ವರ್ತೂರ್​ಗೆ ಫಿನಾಲೆ ಟಿಕೆಟ್ ಮಿಸ್​ ಆಗಲು ತುಕಾಲಿ ಸಂತೋಷ್ ಕೂಡ ಒಂದು ರೀತಿ ಕಾರಣವೇ.

4. ತುಕಾಲಿ ನಮ್ರತಾ ಕಂಡರೇ ಉರಿದು ಬೀಳುತ್ತಿದ್ದ ತುಕಾಲಿ ಬಳಿಕ ಚೇಂಜ್​

ಬಿಗ್​ಬಾಸ್​ ಅಂದ್ಮೇಲೆ ಗಲಾಟೆ ಕಾಮನ್. ಅಂತೆಯೇ ತುಕಾಲಿ ಸಂತೋಷ್ ಕೂಡ ಮನೆ ಮಂದಿ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಮುಂದೆ ಚೆನ್ನಾಗಿ ಇದ್ದು ಹಿಂದೆ ಅವರ ಬಗ್ಗೆ ಸಾಕಷ್ಟು ಮಾತಾಡಿದ್ದಾರೆ. ಈ ಬಗ್ಗೆ ಖುದ್ದು ತುಕಾಲಿಯೇ ಒಪ್ಪಿಕೊಂಡಿದ್ದಾರೆ. ಆದ್ರೆ ಇಲ್ಲಿ ಗಮನಿಸಬೇಕಾದ ಒಂದು ವಿಚಾರ ಏನಪ್ಪ ಅಂದ್ರೆ ತುಕಾಲಿ ನಮ್ರತಾ ಕಂಡ್ರೆ ಉರಿದುಬೀಳ್ತಿದ್ರು. ಅವಳು ಡ್ಯಾನ್ಸ್ ಮಾಡಿದ್ರೆ ಬರೀ ಒಂದೇ ಸ್ಟೆಪ್ ಹಾಕ್ತಾಳೆ. ಅವಳನ್ನ ನೋಡಿದ್ರೆ ನನಗೆ ಮೈಯೆಲ್ಲ ಉರಿಯುತ್ತೆ ಅಂದಿದ್ರು. ಆದ್ರೆ ಇದೇ ತುಕಾಲಿ ನಮ್ರತಾ ಕ್ಯಾಪ್ಟನ್​ ಆಗಬೇಕು ಅಂತ ಬಹಳ ಆಸೆಯಿದೆ ನನಗೆ ಅಂತ ಹೇಳ್ತಾರೆ. ನಮ್ರತಾ ಜೊತೆ ಚೆನ್ನಾಗಿಯೇ ಇದ್ದು ಆಕೆಗೆ ಪ್ಯೂರ್ ಹಾರ್ಟ್ ಇಲ್ಲ ಅಂತ ಹೇಳಿ ಹೊರಗೆ ಹೋದ್ರೆ ನಾನು ನಮ್ರತಾನ ಯಾವುದೇ ಕಾರಣಕ್ಕೂ ಭೇಟಿ ಆಗಲ್ಲ ಅಂತಲೂ ಹೇಳ್ತಾರೆ. ಇದೇ ಥರ ತನಿಷಾ ಜೊತೆಯೂ ನಡೆದಿದೆ. ಬೆಂಕಿ ಸಾಮಾನ್ಯ ಬೆಂಕಿಯಲ್ಲ ಎಂದು ತನಿಷಾ ಹಿಂದೆ ಸಾಕಷ್ಟು ಬಾರಿ ಮಾತಾಡಿದ್ದಾರೆ. ಆದ್ರೆ ನಿನ್ನೆ ತನಿಷಾ ಮನೆಯಿಂದ ಹೊರ ಹೋಗುವಾಗ ಕಣ್ಣೀರು ಹಾಕ್ತಾರೆ. ಹೀಗೆ ಹೇಳ್ತಾ ಹೋದ್ರೆ ಇಂತದ್ದೇ ಸಾಕಷ್ಟು ವಿಚಾರಗಳಿವೆ. ಇದು ತುಕಾಲಿಯ ಸ್ಟಾಟರ್ಜಿಯೋ ಅಥವಾ ತುಕಾಲಿ ಇರೋದೇ ಹೀಗೆನಾ ಅಂತ ಅನುಮಾನ ಮೂಡೋದು ಸಹಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಬಿಗ್​ಬಾಸ್​ ಮನೆಯಲ್ಲಿ ಸಂತು ಮತ್ತು ಪಂತು ಮಸ್ತ್​​ ಸ್ಟಾಟರ್ಜಿ ಪ್ಲೈ.. ಏನದು ಗೊತ್ತಾ?

https://newsfirstlive.com/wp-content/uploads/2024/01/tukali-6.jpg

Load More