newsfirstkannada.com

ಹೆಂಡತಿ ಜೊತೆಗಿನ ಫೋಟೋ ನೋಡಿ ಶಾಕ್​​ ಆದ ತುಕಾಲಿ ಸಂತೋಷ್​​.. ಅಸಲಿಗೆ ಆಗಿದ್ದೇನು?

Share :

Published January 27, 2024 at 6:31am

    ಹೆಂಡತಿ ಜೊತೆಗಿನ ಫೋಟೋ ನೋಡಿ ತಲೆ ಚಚ್ಚಿಕೊಂಡ ಸಂತೋಷ್​

    ನಮ್ಮ ತಾಯಾಣೆಗೂ ಅದು ಚೂರೂ ಚೆನ್ನಾಗಿಲ್ಲ ಎಂದ ಕಾಮಿಡಿ ಸಂತು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​ ಫಿನಾಲೆ ದಿನ ಬಂದೇ ಬಿಟ್ಟಿದೆ. ಇಂದು ಮತ್ತು ನಾಳೆ ಗ್ರ್ಯಾಂಡ್​ ಫಿನಾಲೆ ಇದ್ದು, ಭಾನುವಾರ ಎಪಿಸೋಡ್​ನಲ್ಲಿ​ ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ಅಧಿಕೃತವಾಗಿ ತಿಳಿಯಲಿದೆ.

ಸದ್ಯ ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ ಬಿಗ್​ ಮನೆಯಲ್ಲಿ 6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದಾರೆ. ಸಂಗೀತಾ, ಡ್ರೋನ್​ ಪ್ರತಾಪ್​​, ವಿನಯ್​​ ಗೌಡ, ಕಾರ್ತಿಕ್​​​, ವರ್ತೂರು ಸಂತೋಷ್​, ತುಕಾಲಿ ಸಂತೋಷ್​​ ಇದ್ದಾರೆ. ಈ ಆರು ಜನರಲ್ಲಿ ಫಿನಾಲೆ ದಿನ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಓರ್ವ ಸ್ಪರ್ಧಿ ಕೈಯಲ್ಲಿ ಬಿಗ್​ಬಾಸ್​​ ಟ್ರೋಫಿ ಸೇರಲಿದೆ.

ಇನ್ನು, ತುಕಾಲಿ ಸಂತೋಷ್​ ಅವರ ಹಳೆಯ ಫೋಟೋವೊಂದನ್ನು ಬಿಗ್​ಬಾಸ್​​ ಮನೆಗೆ ಕಳಿಸಿಕೊಟ್ಟಿದ್ದರು. ಆ ಫೋಟೋ ಚೆನ್ನಾಗಿಲ್ಲ ಎಂದು ತುಕಾಲಿ ​ಮನೆ ಮಂದಿ ಮುಂದೆ ಹೇಳಿದ್ದಾರೆ. ಆ ಫೋಟೋದಲ್ಲಿ ತುಕಾಲಿ ಸಂತೋಷ್​ ಹೆಂಡತಿ ಜೊತೆ ನಿಂತಿರುವ ಫೋಟೋವನ್ನು ನೋಡಿ ಶಾಕ್​ ಆಗಿದ್ದಾರೆ. ಆ ಫೋಟೋವನ್ನು ಯಾಕೆ ಕಳಿಸಿದ್ದೀರಿ? ನಮ್ಮ ತಾಯಾಣೆಗೂ ಅದು ಚೂರೂ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಇದೇ ಫೋಟೋ ನೋಡಿದ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೆಂಡತಿ ಜೊತೆಗಿನ ಫೋಟೋ ನೋಡಿ ಶಾಕ್​​ ಆದ ತುಕಾಲಿ ಸಂತೋಷ್​​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/01/bigg-boss-2024-01-26T215404.049.jpg

Load More