‘ಬಾರೋ ನನ್ನ ಕಂದ’.. ಕರುಳು ಹಿಂಡುತ್ತೆ ಜೀವಬಿಟ್ಟ ಮನೋಜ್​ ತಾಯಿ ಮಾತು; VIDEO

author-image
Veena Gangani
Updated On
‘ಬಾರೋ ನನ್ನ ಕಂದ’.. ಕರುಳು ಹಿಂಡುತ್ತೆ ಜೀವಬಿಟ್ಟ ಮನೋಜ್​ ತಾಯಿ ಮಾತು; VIDEO
Advertisment
  • ನನಗೆ ಮಗ ಬೇಕು ಸರ್​ ಅಂತ ಬಿಕ್ಕಿ ಬಿಕ್ಕಿ ತಾಯಿ ಕಣ್ಣೀರು
  • ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಮನೋಜ್ ಇನ್ನಿಲ್ಲ
  • 30ಕ್ಕೂ ಹೆಚ್ಚು ಮಂದಿ ವೈದೇಹಿ, ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭೀಕರ ದುರಂತಕ್ಕೆ ಯಾರು ಹೊಣೆ? ಒಂದಲ್ಲ ಎರಡಲ್ಲ ಬರೋಬ್ಬರಿ 11 ಜನ ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಚಿನ್ನಸ್ವಾಮಿ ಸ್ಟೇಡಿಯಂಗೆ ಆರ್​ಸಿಬಿ ಆಟಗಾರರನ್ನು ನೋಡಲು ಬಂದಿದ್ದವರಿಗೆ ದೊಡ್ಡ ಆಘಾತವಾಗಿದೆ.

ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ

[caption id="attachment_126573" align="alignnone" width="800"]ಮನೋಜ್ ಮನೋಜ್[/caption]

ಇದೇ ದುರಂತದಲ್ಲಿ ಐಪಿಎಲ್​ ಫೈನಲ್​ನಲ್ಲಿ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್​ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ಟೀಂನ ಮ್ಯಾನೇಜ್ಮೆಂಟ್​ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ, ಫ್ಯಾನ್ಸ್​ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದರ ಪರಿಣಾಮ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ರೆ, 30ಕ್ಕೂ ಹೆಚ್ಚು ಮಂದಿ ವೈದೇಹಿ, ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ, ಇದೇ ಘಟನೆಯಲ್ಲಿ ಕಾಲ್ತುಳಿತದಲ್ಲಿ ಪಾನಿಪುರಿ ವ್ಯಾಪಾರಿಯ ಮಗ ಮನೋಜ್ ಎಂಬುವವರು ಜೀವಬಿಟ್ಟಿದ್ದಾರೆ. ಇವರ ತಂದೆ ಪಾನಿಪುರಿ ಮಾರಾಟ ಮಾಡಿ ಮಗನನ್ನ ಓದಿಸುತ್ತಿದ್ದರಂತೆ. ಬೆಂಗಳೂರಿನ ಯಲಹಂಕದ ರೆಸಿಡೆನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಮೂಲತಃ ತುಮಕೂರಿನ ಕುಣಿಗಲ್​ನ ಯಡಿಯೂರಿನವರಾಗಿದ್ದಾರೆ. ಈಗ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಇಡುತ್ತಿದ್ದಾರೆ. ಇದೇ ದುಃಖದಲ್ಲಿ ಮನೋಜ್​ ತಾಯಿ, ನನ್ನ ಮಗ ನನ್ನ ಬಿಟ್ಟು ಹೋದ, ಹೀಗೆ ಆಗುತ್ತೆ ಅಂತ ಗೊತ್ತಿದ್ರೆ ನಾನು ಕಳಿಸುತ್ತಾ ಇರಲಿಲ್ಲ. ಚೆನ್ನಾಗಿ ಓದುತ್ತಾ ಇದ್ದ. ಸ್ನೇಹಿತರು ಅವನನ್ನು ಕರೆದುಕೊಂಡು ಹೋಗಿ ವಾಪಸ್ ಕರ್ಕೋಂಡು​ ಬರಲಿಲ್ಲ.ಇದ್ದ ಒಬ್ಬ ಮಗನನ್ನ ಕಳ್ಕೊಂಡ್ವಿ. ಈಗ ಯಾರನ್ನ ಮಗ ಅಂತ ಕರಿಯೋದು? ಹುಷಾರ್​ ಆಗಿ ಹೋಗಿ ಬಾರೋ ಅಂತ ಹೇಳಿದ್ದೆ. ನನಗೆ ನನ್ನ ಮಗ ಬೇಕು. ಬಾರೋ ಮನೋಜಾ, ಬಾರೋ ಕಂದ ಎಂದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment