/newsfirstlive-kannada/media/post_attachments/wp-content/uploads/2024/07/Pregnant.jpg)
ನಂಬೋಕಾಗ್ತಿಲ್ಲ! ಒಂದೇ ವರ್ಷದಲ್ಲಿ ಒಂದೇ ಜಿಲ್ಲೆಯಲ್ಲಿ ಬರೊಬ್ಬರಿ 326 ಬಾಲಕಿಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಅಂದ್ರೆ ನಂಬೋಕಾಗುತ್ತಾ?. ಖಂಡಿತಾ ಇಲ್ಲ. ಆದ್ರೆ ಇದು ಅಚ್ಚರಿಯಾದ್ರೂ ಸತ್ಯ. ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ತುಮಕೂರಲ್ಲಿ. ಅವರಲ್ಲೂ ನಾಲ್ವರು 11 ವರ್ಷಕ್ಕಿಂತಲೂ ಚಿಕ್ಕ ಹೆಣ್ಮಕ್ಕಳು ಗರ್ಭಿಣಿಯಾಗಿದ್ದಾರೆ.
ಬೆಂಗಳೂರಿಗೆ ಪರ್ಯಾಯ ನಗರವಾಗಿ ಹೊರಹೊಮ್ಮುತಿದೆ ಕಲ್ಪತರು ನಾಡು ತುಮಕೂರು. ಇದರ ಜೊತೆ ಜೊತೆಗೆ ನೈತಿಕ ಮೌಲ್ಯಗಳೂ ಕುಸಿಯುತ್ತಿದೆ ಅನ್ನೋದಕ್ಕೆ ಈ ವರದಿ ಸಾಕ್ಷಿಯಾಗಿದೆ. ಮಡಿ, ಮೈಲಿಗೆ ಬ್ರಹ್ಮಚಾರ್ಯ ಪಾಲನೆ ಎಲ್ಲವೂ ಪಾತಾಳಕ್ಕೆ ಕುಸಿದಿದೆ. ಹೌದು, ಒಂದೇ ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಬರೊಬ್ಬರಿ 326 ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಜಿಂಬಾಬ್ವೆ ದಾಳಿಗೆ ತರಗೆಲೆಯಂತೆ ವಿಕೆಟ್ ಒಪ್ಪಿಸಿದ ಟೀಂ ಇಂಡಿಯಾ ದಾಂಡಿಗರು! 13 ರನ್ಗಳ ಭರ್ಜರಿ ಸೋಲು
ಜನರಲ್ಲಿ ಶಿಕ್ಷಣದ ಕೊರತೆ, ಮೊಬೈಲ್ ಬಳಕೆ, ತಂದೆ ತಾಯಿಗಳ ನಿರ್ಲಕ್ಷ್ಯದಿಂದ ಮಕ್ಕಳು ತಪ್ಪು ದಾರಿ ತುಳಿದಿದ್ದು ಚಿಕ್ಕವಯಸ್ಸಿನಲ್ಲೇ ಅನೈತಿಕವಾಗಿ ಗರ್ಭಧರಿಸುತಿದ್ದಾರೆ. ಇದರಲ್ಲಿ ಅತ್ಯಾಚಾರದಿಂದಲೂ ಗರ್ಭಧರಿಸಿದ ಪ್ರಕರಣಗಳು ಕೂಡ ಇವೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ 125 ಮಂದಿ ಜೈಲು ಪಾಲಾಗಿದ್ದಾರೆ.
ಇದನ್ನೂ ಓದಿ: ಆರು ಅಂತಸ್ತಿನ ಕಟ್ಟಡ ನೆಲಸಮ.. ಅವಶೇಷದಡಿ ಹಲವರು ಸಿಲುಕಿರುವ ಶಂಕೆ
ಒಂದೆಡೆ ಬಾಲ್ಯ ವಿವಾಹ, ಮತ್ತೊಂದೆಡೆ ಮದುವೆಗೂ ಪ್ರೀತಿ ಪ್ರೇಮದ ಹೆಸರನಲ್ಲಿ ಲೈಂಗಿಕ ಸಾಂಗತ್ಯ, ಇವೆಲ್ಲವೂ ಹದಿ ಹರೆಯದ ಬಾಲೆಯರಲ್ಲಿ ಗರ್ಭಧಾರಣೆಯಾಗಿದೆ. ಕೆಲವು ಪ್ರಕರಣಗಳಲ್ಲಿ ಅನೈತಿಕವಾಗಿ ಹುಟ್ಟಿದಾ ಮಗುವನ್ನು ಮಾರಾಟ ಮಾಡಿ ಕರುಳ ಬಳ್ಳಿಯ ಸಂಬಂಧ ಕಡಿದುಕೊಂಡು ನಿರಾಳವಾಗಿ ಇದ್ದ ಪ್ರಕರಣವೂ ಬೆಳಕಿಗೆ ಬಂದಿದೆ. ಆದರೂ ಇವೆಲ್ಲವನ್ನೂ ಪೋಕ್ಸೋ ಪ್ರಕರಣ ಎಂದೇ ಪರಿಗಣಿಸಲಾಗುತ್ತಿದೆ.
ಇದನ್ನೂ ಓದಿ: VIDEO: ಆ್ಯಸಿಡ್ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಯು ಈ ದೃಶ್ಯ ಕಂಡಾಗ ಕರಗದೆ ಇರದು!
ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಹೆಚ್ಚಿನ ಮಂದಿ ಹೆಣ್ಣು ಮಕ್ಕಳ ತಂದೆ, ಅಣ್ಣ, ಸಂಬಂಧಿಕರು, ಶಿಕ್ಷಕರು ಇದ್ದಾರೆ. ಕೆಲವರು ಎರಡು ಬಾರಿ ಜೈಲು ಪಾಲಾಗಿದ್ದಾರೆ. ಬಾಲಕಿಯನ್ನು ಮದುವೆಯಾಗಿ, ಲೈಂಗಿಕ ಸಂಬಂಧ ಇಟ್ಟುಕೊಂಡರೆ ಅದು ಅತ್ಯಾಚಾರ ಪ್ರಕರಣವೆಂದೇ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ಸುಲ್ತಾನನೇ ಸಿಕ್ಕಿರುವಾಗ.. ಈ ಕೊಲೆ, ಪಶ್ಚಾತ್ತಾಪ ಇರಲ್ಲ.. ಪವಿತ್ರಾ ಬಗ್ಗೆ ಹೀಗಂದ್ರಾ ಈ ಡೈರೆಕ್ಟರ್!
ಒಟ್ಟಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಹಿರಂಗ ಪಡಿಸಿದ ಅಂಕಿ ಅಂಶ ನಿಜಕ್ಕೂ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ. ಇನ್ನೊಂದೆಡೆ ಹೆಣ್ಣುಮಕ್ಕಳ ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಏನೇ ಆಗಲಿ ಪೋಷಕರು ಎಚ್ಚರಿಕೆ ವಹಿಸಿದ್ರೆ ಕೊಂಚ ಈ ಪ್ರಮಾಣ ಕಡಿಮೆ ಮಾಡಲು ಸಾಧ್ಯ.
ವಿಶೇಷ ವರದಿ: ಮಧು ಇಂಗಳದಾಳ್, ತುಮಕೂರು ಪ್ರತಿನಿಧಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ