/newsfirstlive-kannada/media/post_attachments/wp-content/uploads/2025/06/TMK_MANOJ.jpg)
ತುಮಕೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಜೀವ ಕಳೆದುಕೊಂಡಿದ್ದ ಮೃತ ಯುವಕ ಮನೋಜ್ ಅವರ ತಂದೆ ದೇವರಾಜ್ ಅವರಿಗೆ 25 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಲಾಗಿದೆ.
ಕುಣಿಗಲ್ ತಾಲೂಕಿನ ನಾಗಸಂದ್ರ ಗ್ರಾಮದ ಮೃತ ಯುವಕ ಮನೋಜ್ (18). ಇವರ ತಂದೆ ದೇವರಾಜ್ ಅವರಿಗೆ ತುಮಕೂರು ಜಿಲ್ಲಾಡಳಿತದ ಡಿಸಿ ಶುಭಕಲ್ಯಾಣ್ ಅವರು 25 ಲಕ್ಷ ರೂಪಾಯಿಯ ಚೆಕ್ ಅನ್ನು ನೀಡಿದ್ದಾರೆ. ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಖಾತೆಯಿಂದ ಪರಿಹಾರದ ಹಣವನ್ನು ಚೆಕ್ ಮೂಲಕ ವಿತರಣೆ ಮಾಡಲಾಗಿದೆ.
ಇದನ್ನೂ ಓದಿ:ರಿಂಕು ಸಿಂಗ್, ಪ್ರಿಯಾ ಸರೋಜ್ ಅದ್ಧೂರಿ ನಿಶ್ಚಿತಾರ್ಥ ಸಮಾರಂಭ.. ಯಾರೆಲ್ಲಾ ಬಂದಿದ್ರು, ಮದುವೆ ಯಾವಾಗ?
ಪರಿಹಾರದ ಚೆಕ್ ಸ್ವೀಕರಿಸಿದ ಮೃತ ಮನೋಜ್ ತಂದೆ ದೇವರಾಜ್ ಅವರು ಕಣ್ಣೀರು ಹಾಕುತ್ತಿದ್ದರು. ಮಗನೇ ಹೋದ ಮೇಲೆ ಈ ಹಣ ಪಡೆದು ಏನು ಮಾಡಲಿ?. ಮುಂದೆ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ಮಗ ನಮ್ಮ ಕಣ್ಣ ಮುಂದಿದ್ದರೆ ಸಾಕಾಗಿತ್ತು ಎಂದು ಗೋಳಾಡಿದ್ದಾರೆ. ಪರಿಹಾರದ ಮೊತ್ತವನ್ನ ಮನೋಜ್ ತಾಯಿ ಮತ್ತು ತಂಗಿಯ ಭವಿಷ್ಯಕ್ಕೆ ಮುಡಿಪಾಗಿಡುತ್ತೇನೆ ಎಂದು ಹೇಳಿದ್ದಾರೆ.
ಮನೋಜ್ ತಂದೆ, ತಾಯಿ ಮೂಲತಹ ತುಮಕೂರಿನವರು ಆದರೂ ಜೀವನಕ್ಕಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಆರ್ಸಿಬಿ ಸಂಭ್ರಮಾಚರಣೆ ನೋಡಲು ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮನೋಜ್ ಬಂದಿದ್ದನು. ಈ ವೇಳೆ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಿಂದ ಜೀವ ಬಿಟ್ಟಿದ್ದನು. ಮನೋಜ್ ಜೊತೆ ಇನ್ನು 10 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಎಲ್ಲರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ