Advertisment

JCBಯಲ್ಲೇ ನುಗ್ಗಿದ ತುಮಕೂರು ರೈತರು; ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ದಿಢೀರ್‌ ಸ್ಥಗಿತ

author-image
admin
Updated On
JCBಯಲ್ಲೇ ನುಗ್ಗಿದ ತುಮಕೂರು ರೈತರು; ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ದಿಢೀರ್‌ ಸ್ಥಗಿತ
Advertisment
  • ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ರೈತರ ಲಗಾಮು
  • ನಿಟ್ಟೂರಿನಿಂದ ಪಾದಯಾತ್ರೆಯಲ್ಲಿ ಸುಂಕಾಪುರಕ್ಕೆ ಬಂದ ಹೋರಾಟಗಾರರು
  • 5 ಜೆಸಿಬಿ ಮೂಲಕ ದೊಡ್ಡ, ದೊಡ್ಡ ಪೈಪ್‌ಗಳನ್ನ ನಾಲೆಗೆ ಉರುಳಿಸಿ ಆಕ್ರೋಶ

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ರೈತರು ನಡೆಸಿದ ತೀವ್ರ ಹೋರಾಟ ಸಕ್ಸಸ್ ಆಗಿದೆ. ನಿಟ್ಟೂರಿನಿಂದ ಪಾದಯಾತ್ರೆ ಮೂಲಕ ಕಾಮಗಾರಿ ನಡೆಯುತ್ತಿರುವ ಸುಂಕಾಪುರದತ್ತ ಸಾವಿರಾರು ರೈತರು, ಹೋರಾಟಗಾರರು ಲಗ್ಗೆಯಿಟ್ಟಿದ್ದರು.

Advertisment

publive-image

ಸುಂಕಾಪುರದಲ್ಲಿ JCBಯಲ್ಲೇ ಕಾಮಗಾರಿಗೆ ಮಣ್ಣು ಹಾಕಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಕೆನಾಲ್‌ನ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ.

publive-image

ಸುಂಕಾಪುರಕ್ಕೆ ಲಗ್ಗೆಯಿಟ್ಟ ಸಾವಿರಾರು ರೈತರು, ಪ್ರತಿಭಟನಾಕಾರರು ಜೆಸಿಬಿ ಮೂಲಕ ನಾಲೆಯನ್ನು ಮುಚ್ಚಲು ಯತ್ನಿಸಿದರು. 5 ಜೆಸಿಬಿ ಮೂಲಕ ದೊಡ್ಡ, ದೊಡ್ಡ ಪೈಪ್‌ಗಳನ್ನ ಉರುಳಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜೆಸಿಬಿ ಮೂಲಕ ನಾಲೆ ಮುಚ್ಚಿಸುವಾಗ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕಾಮಗಾರಿಗೆ ಮಣ್ಣು ಹಾಕಿ ರೈತರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಕಾಮಗಾರಿಯನ್ನು ಸ್ಥಗಿತಗೊಳಿಸಿತು.

publive-image

ಇದನ್ನೂ ಓದಿ: ಹೇಮಾವತಿ ನೀರಿಗಾಗಿ ತುಮಕೂರು ರೈತರ ಹೋರಾಟ ಯಾಕೆ? ಏನಿದರ ಇತಿಹಾಸ? ಅಸಲಿಗೆ ಆಗಿದ್ದೇನು? 

Advertisment

ಪ್ರತಿಭಟನೆ ಬಳಿಕ ಹೇಮಾವತಿ ಲಿಂಕ್ ಕೆನಾಲ್​ನ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಸ್ಥಗಿತ ಬೆನ್ನಲ್ಲೇ ರೈತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಕಾಮಗಾರಿ ಹಿಂಪಡೆಯಲು 1 ತಿಂಗಳ ಗಡುವು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment