newsfirstkannada.com

ತುಮಕೂರು ಕುಚ್ಚಂಗಿಯಲ್ಲಿ 3 ಮೃತದೇಹ ಸಿಕ್ಕ ಕೇಸ್​; 8 ಆರೋಪಿಗಳನ್ನು ಬಂಧಿಸಿದ ಪೊಲೀಸರು

Share :

Published March 26, 2024 at 2:54pm

    ಬಂಗಾರದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡ ಬೆಳ್ತಂಗಡಿ ಮೂಲದವರು

    ಚಿನ್ನ ಖರೀದಿಗೆ ತಂದಿದ್ದ ಹಣ ದೋಚಲು ಮೂವರ ಕೊಲೆಗೈದ ಹಂತಕರು

    ಮಾರ್ಚ್​ 21 ರಂದು ತುಮಕೂರು ಕುಚ್ಚಂಗಿ ಕೆರೆ ಬಳಿ ಕೊಲೆ

ತುಮಕೂರು ಕುಚ್ಚಂಗಿ ಕೆರೆ ಬಳಿ ಸುಟ್ಟ ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಪಾತರಾಜು ಅಲಿಯಾಸ್ ಸ್ವಾಮಿ (35), ಗಂಗರಾಜು (35), ಮಧುಸೂದನ್ (24), ನವೀನ್ (24), ಕೃಷ್ಣ (22), ಗಣೇಶ್ (19), ಕಿರಣ್ (23), ಸೈಮನ್ (18), ಬಂಧಿತ ಆರೋಪಿಗಳು.

ಇದನ್ನೂ ಓದಿ: ತುಮಕೂರಲ್ಲಿ ರಾತ್ರೋರಾತ್ರಿ ಭಯಾನಕ ಘಟನೆ.. ಸುಟ್ಟ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ‌

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿಯ ಇಸಾಕ್, ಶಾಹುಲ್, ಸಿದ್ದಿಕ್ ಮೃತ ಕೊಲೆಯಾದ ದುರ್ದೈವಿಗಳು. ಚಿನ್ನದ ಆಸೆಗೆ ಬಿದ್ದು ಮೂವರು ಮಾರ್ಚ್​ 21 ರಂದು ಕೊಲೆಯಾಗಿದ್ದರು. ನಿಧಿ ಹುಡುಕಿ ಕೊಡುವುದಾಗಿ ಮುಂಗಡವಾಗಿ ಹಣ ಪಡೆದಿದ್ದ ಪ್ರಮುಖ ಆರೋಪಿಗಳಾದ ಪಾತರಾಜು ಅಲಿಯಾಸ್ ಸ್ವಾಮಿ, 6 ತಿಂಗಳ ಹಿಂದೆ ಮೃತರ ಬಳಿ ಅಡ್ವಾನ್ಸ್ ಪಡೆದಿದ್ದ ಎನ್ನಲಾಗಿದೆ.

ಇದನ್ನೂ ಓದಿತುಮಕೂರಲ್ಲಿ ಮೂವರ ಮೃತದೇಹ ಪತ್ತೆ ಕೇಸ್​​ಗೆ ಬಿಗ್​ ಟ್ವಿಸ್ಟ್​; ಬೆಚ್ಚಿ ಬೀಳಿಸಿದೆ ಕೊಲೆಯ ಕಾರಣ

6 ತಿಂಗಳ ಕಳೆದರೂ ನಿಧಿ ಹುಡುಕಿ ಕೊಡಲು ಪಾತರಾಜು ಸ್ವಾಮಿ ಸತಾಯಿಸುತ್ತಿದ್ದ. ಹಲವು ಬಾರಿ ಕರೆ ಮಾಡಿದ್ರು ಕರೆ ಸ್ವೀಕರಿಸದೇ ಕಳ್ಳಾಟ ನಡೆಸಿದ್ದ. ಈ ವೇಳೆ ನಮಗೆ ನಿಧಿ ಹುಡುಕಿ ಕೊಡಿ ಇಲ್ಲ ನಮ್ಮ ಹಣ ನಮಗೆ ವಾಪಸ್ ಕೊಡಿ. ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡೋದಾಗಿ ಮೃತರು ಹೇಳಿದ್ದರು. ಹಣ ವಾಪಸ್ ಕೊಡಲು ಆಗದೇ ಕೊಲೆ ಮಾಡಲು ಸ್ಕೇಚ್ ಹಾಕಿ, ಪ್ಲಾನ್​ ಅಂತೆಯೇ ಕೊಲೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಮಕೂರು ಕುಚ್ಚಂಗಿಯಲ್ಲಿ 3 ಮೃತದೇಹ ಸಿಕ್ಕ ಕೇಸ್​; 8 ಆರೋಪಿಗಳನ್ನು ಬಂಧಿಸಿದ ಪೊಲೀಸರು

https://newsfirstlive.com/wp-content/uploads/2024/03/death-2024-03-22T153215.171.jpg

Load More