ಪರಿಷತ್​ ಚುನಾವಣೆಯ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್​ ಜೈ..ಜೈಕಾರ.. ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಭದ್ರ

author-image
Gopal Kulkarni
Updated On
ಪರಿಷತ್​ ಚುನಾವಣೆಯ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್​ ಜೈ..ಜೈಕಾರ.. ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಭದ್ರ
Advertisment
  • ಪರಿಷತ್ ಚುನಾವಣೆಯ ಮರು ಮತ ಎಣಿಕೆ ಮುಕ್ತಾಯ
  • ಮುಚ್ಚಿದ ಲಕೋಟೆಯಲ್ಲಿ ಪ್ರಾಣೇಶ್, ಗಾಯಿತ್ರಿ ಭವಿಷ್ಯ ಭದ್ರ
  • ಈ ಹಿಂದೆ 6 ಮತಗಳ ಅಂತರದಿಂದ ಗೆದ್ದಿದ್ದ ಗಾಯಿತ್ರಿ ಶಾಂತೇಗೌಡ

ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಗೆ ಹಿನ್ನಡೆಯಾಯ್ತಾ? ಎಂಎಲ್ಸಿ ಸ್ಥಾನವೇ ಕೈ ತಪ್ಪುತ್ತಾ? ಭವಿಷ್ಯವಿಗಾ ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿದೆ. ಸತತ 13 ಗಂಟೆ ಮರುಎಣಿಕೆ ಕಾರ್ಯ ನಡೆಸಲಾಯ್ತು. ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿದ್ರು. ಬಿಜೆಪಿ ಕಾರ್ಯಕರ್ತರು ಮಾತ್ರ ಸೈಲೆಂಟ್ ಆಗಿ ಅಭ್ಯರ್ಥಿ ಮಾತನಾಡಿಸಿದರು

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

2021ರ ಡಿಸೆಂಬರ್ 10ರಂದು ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಚುನಾವನಣೆ ನಡೆದಿತ್ತು. ವಿಧಾನ ಪರಿಷತ್ ಹಾಲಿ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ವಿರುದ್ಧ ಕೇವಲ 6 ಮತಗಳ ಅಂತರದಿಂದ ಗೆಲವು ಸಾಧಿಸಿ, ಪರಿಷತ್​ಗೆ ಪ್ರವೇಶ ಪಡೆಸಿದ್ದರು. ಈ ಚುನಾವಣೆಯಲ್ಲಿ ಸ್ಥಳೀಯ ಪಟ್ಟಣ ಪಂಚಾಯತ್‌, ನಗರಸಭೆ, ಪುರಸಭೆಗಳ 12 ಜನ ನಾಮನಿರ್ದೇಶಿತ ಸದಸ್ಯರು ತಮ್ಮ ಮತಗಳನ್ನು ಚಲಾಯಿಸಿದ್ದರು. ಆದರೆ ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಶ್ನಿಸಿ ಎ.ವಿ. ಗಾಯತ್ರಿ ಶಾಂತೇಗೌಡ ಕೋರ್ಟ್‌ ಮೆಟ್ಟಿಲೇರಿದ್ದರು. ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಇದೀಗ ಮರು ಮತ ಎಣಿಕೆ ನಡೆದಿದೆ.

ಇದನ್ನೂ ಓದಿ: ರಾಜ್ಯ, ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಮೂಡಿಸುತ್ತಿದೆ ಡಿಕೆಶಿ ಹೇಳಿಕೆ.. ಕುಂಭಮೇಳದ ಬಗ್ಗೆ ಡಿಸಿಎಂ ಹೇಳಿದ್ದೇನು?

ಸುಪ್ರೀಂಕೋರ್ಟ್ ಆದೇಶದಂತೆ ಚಿಕ್ಕಮಗಳೂರಿನ IDSG ಕಾಲೇಜಿನಲ್ಲಿ ಸತತ 13 ಗಂಟೆಗಳ ಕಾಲ ಮತ ಎಣಿಕೆ ಕಾರ್ಯ ನಡೆಯಿತು. ಸಂಪೂರ್ಣ ವಿಡಿಯೋ ಚಿತ್ರೀಕರಣದ ಮೂಲಕ ಮತ ಎಣಿಕೆ ನಡೆಯಿತು. ಅಭ್ಯರ್ಥಿಗಳು ಹಾಗೂ ಏಜೆಂಟ್ ಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎಣಿಕೆ ಕಾರ್ಯ ಮುಗಿದ ನಂತ್ರ ಮೊದಲು ಉಪಸಭಾಪತಿ ಎಂ ಕೆ ಪ್ರಾಣೇಶ್ ಹೊರಬಂದ್ರು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿಸಿ ತೆರಳಿದ್ರು. ನಂತ್ರ ಗಾಯತ್ರಿ ಶಾಂತೇಗೌಡ ಬರ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆಯ ರೀತಿ ಜೈಕಾರ ಕೂಗಿದ್ರು. ಇಬ್ಬರು ಅಭ್ಯರ್ಥಿಗಳಿಗೆ ಪೊಲೀಸ್ ಭದ್ರತೆಯಲ್ಲಿ ಮತಕೇಂದ್ರದಿಂದ ಕರೆದೊಯ್ಯಲಾಯ್ತು.
ಇನ್ನು ನ್ಯಾಯಲಯದ ಸೂಚನೆಯಂತೆ ಮುಚ್ಚಿದ ಲಕೋಟೆಯಲ್ಲಿ ಭವಿಷ್ಯ ಭದ್ರವಾಗಿದೆ. ಮಾರ್ಚ್ 4 ಹಾಗೂ 7 ರಂದು ಹೈಕೋರ್ಟ್ ಹಾಗೂ ಸುಪ್ರಿಂಗೆ ಮರು ಮತ ಎಣಿಕೆಯ ಅಂಕಿ ಅಂಶ ಸಲ್ಲಿಕೆ ಆಗಲಿದೆ.  ಬಿಜೆಪಿ ಅಭ್ಯರ್ಥಿ ಪ್ರಾಣೇಶ್​ ಅವರೇ ಗೆಲ್ತಾರಾ. ಅಥವಾ ಕಾಂಗ್ರೆಸ್​ ಅಭ್ಯರ್ಥಿ ವಿನ್​ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment