newsfirstkannada.com

BBMPಯಲ್ಲಿ ಕೆಲಸ ಮಾಡ್ತಿದ್ದ ಖತರ್ನಾಕ್.. 19 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಬಂಧಿಸಿದ್ದೇ ರೋಚಕ

Share :

Published May 23, 2024 at 3:57pm

Update May 23, 2024 at 4:06pm

    ಎಸ್​ಪಿ ಅಶೋಕ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದೇ ರೋಚಕ

    ಪೊಲೀಸ್ ಕ್ಯಾಂಪ್​ ಮೇಲೆ ಸುಮಾರು 300 ನಕ್ಸಲರು ದಾಳಿ ಮಾಡಿದ್ರು

    ಬೆಂಗಳೂರಲ್ಲೇ ವಾಸವಿದ್ದುಕೊಂಡು ಡ್ರೈವರ್ ಆಗಿ ಕೆಲಸ ಮಾಡ್ತಿದ್ದನು

ತುಮಕೂರು: ಪಾವಗಡದ ವೆಂಕಟಮ್ಮನಹಳ್ಳಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಶಂಕರ ಅಲಿಯಾಸ್ ಕೊತ್ತಗೆರೆ ಶಂಕರ (38) ಬಂಧಿತ ಆರೋಪಿ.

2005ರಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೋಯಿಸ್ಟ್ ನಕ್ಸಲರು ಭಯಾನಕವಾದ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಬಂದೂಕು ಹಾಗೂ ಬಾಂಬ್​ಗಳಿಂದಾಗಿ ಕರ್ತವ್ಯ ನಿರತದಲ್ಲಿದ್ದ 7 ಮಂದಿ ಪೊಲೀಸರು ಸಾವನ್ನಪ್ಪಿದ್ದರು. ಇದೇ ವೇಳೆ 5 ಜನ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ಕ್ಯಾಂಪ್ ಮುಂಭಾಗ ನಿಂತಿದ್ದ ಖಾಸಗಿ ಬಸ್ ಕ್ಲೀನರ್​ನನ್ನ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್​; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್​ನಲ್ಲಿ ಬಾಲಾಪರಾಧಿ ಏನೇನು ಮಾಡಬೇಕು ಗೊತ್ತಾ?

ಬಳಿಕ ಪೊಲೀಸ್ ಕ್ಯಾಂಪ್​ನಲ್ಲಿದ್ದ ಬಂದೂಕು ಹಾಗೂ ಗುಂಡುಗಳನ್ನ ದೋಚಿಕೊಂಡು ನಕ್ಸಲರು ನಾಪತ್ತೆ ಆಗಿದ್ದರು. ಈ ಸಂಬಂಧ ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ 32 ಜನ ಆರೋಪಿಗಳ ಮೇಲೆ ಪಾವಗಡ ಜೆಎಂಎಫ್​ಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದರು. ಅದರಂತೆ ತುಮಕೂರು ಎಸ್​ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ನಕ್ಸಲ್ ಶಂಕರನನ್ನ ಯಶಸ್ವಿಯಾಗಿ ಬಂಧಿಸಲಾಗಿದೆ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್ ಕೇಸ್​; 2 ಪಬ್​ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್​ ಕಟ್ಟಿದ್ದ ಬಾಲಕ?

ಆರೋಪಿಯು ಬೆಂಗಳೂರಿನ ಗೌರಿಪಾಳ್ಯದಲ್ಲಿ ವಾಸವಿದ್ದುಕೊಂಡು ಬಿಬಿಎಂಪಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBMPಯಲ್ಲಿ ಕೆಲಸ ಮಾಡ್ತಿದ್ದ ಖತರ್ನಾಕ್.. 19 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಬಂಧಿಸಿದ್ದೇ ರೋಚಕ

https://newsfirstlive.com/wp-content/uploads/2024/05/BNG_NAXAL_BBMP.jpg

Load More