Advertisment

ಕುತ್ತಿಗೆವರೆಗೂ ನೀರಿತ್ತು… ಇಡೀ ರಾತ್ರಿ ಮಂಡಿ ಮೇಲೆ ಕೂತಿದ್ದೆ; ಸಾವು ಗೆದ್ದು ಬಂದ ಹಂಸಾ ಹೇಳಿದ್ದೇನು?

author-image
admin
Updated On
ಕುತ್ತಿಗೆವರೆಗೂ ನೀರಿತ್ತು… ಇಡೀ ರಾತ್ರಿ ಮಂಡಿ ಮೇಲೆ ಕೂತಿದ್ದೆ; ಸಾವು ಗೆದ್ದು ಬಂದ ಹಂಸಾ ಹೇಳಿದ್ದೇನು?
Advertisment
  • ಕೆರೆ ಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಏನಾಯ್ತು?
  • ಹಂಸಾ ಇಡೀ ರಾತ್ರಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಆ ಕ್ಷಣಗಳು
  • ತುಂಬಾ ಕೂಗಿದೆ, ಅಲ್ಲಿ ಉಸಿರಾಟ ಆಡೋಕೆ ಸಣ್ಣದಾಗಿ ಜಾಗ ಇತ್ತು

ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ ಯುವತಿಯೊಬ್ಬಳು ಕೆರೆ ಕೋಡಿ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದರು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಕೆರೆ ಕೋಡಿಯಿಂದ ಹೊರ ಬಿದ್ದ ಹಂಸಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisment

ಸಾವಿನಿಂದ ಪಾರಾದ ಹಂಸಾ ಸುರಕ್ಷಿತವಾಗಿದ್ದು, ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಏನಾಯ್ತು? ಇಡೀ ರಾತ್ರಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಆ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಸ್ಕೂಲ್ ಫ್ರೆಂಡ್ ಬಂದಿದ್ದಳು. ನಾವಿಬ್ಬರೇ ಮೈದಾಳ ಕೆರೆಗೆ ಹೋಗಿದ್ವಿ. ಕೆರೆ ಕೋಡಿಯ ನೀರಿನಲ್ಲಿ ಫೋಟೋ ತೆಗೆದುಕೊಳ್ಳುವಾಗ ಏನಾಯ್ತೋ ಗೊತ್ತಿಲ್ಲ. ಪಟ್ ಅಂತ ಸ್ಲೀಪ್ ಆಯ್ತು ಎಂದು ಹಂಸಾ ಹೇಳಿದ್ದಾರೆ.

publive-image

ನನಗೆ ಸ್ವೀಮಿಂಗ್ ಏನು ಬರಲ್ಲ. ಸೋ ನನ್ನ ಅದೃಷ್ಟ ಏನೋ ಗೊತ್ತಿಲ್ಲ. ಒಳಗಡೆ ಹೋಗಬೇಕಾದ್ರೆ ಜೀವ ಹೋಯ್ತು ಅಂದುಕೊಂಡೆ. ಆದರೆ ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಕೊಂಡಿದ್ದೆ. ಬಂಡೆ ಮೇಲೆ‌ ಅಡ್ಜೆಸ್ಟ್ ಮಾಡಿಕೊಂಡು ಇಡೀ ರಾತ್ರಿ ಮಂಡಿ ಮೇಲೆ ನಿಂತಿದ್ದೆ.

ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳುವಾಗ ಆಪತ್ತು.. 12 ಗಂಟೆ ಕೆರೆ ಕೋಡಿ ನೀರಿನಲ್ಲಿ ಸಿಲುಕಿದ್ದ ಯುವತಿ; ಆಮೇಲೇನಾಯ್ತು? 

Advertisment

ನನಗೆ ಒಂದು ಭರವಸೆ ಇತ್ತು. ಬೇರೆಯವರು ನೀರಿನಲ್ಲಿ ಮುಳುಗಿರೋದು ಎಲ್ಲಾ ನೋಡಿದ್ನಲ್ಲ. ಡ್ರೋಣ್‌ ಎಲ್ಲಾ ಹಾರಿಸಿ ರಕ್ಷಣೆ ಮಾಡುತ್ತಾರೆ ಅನ್ನೋ ಭರವಸೆ ಇತ್ತು. ನೈಟ್ ಎಲ್ಲಾ ಸ್ವಲ್ಪ ಕಷ್ಟ ಆಯ್ತು. ನನಗೆ ಕತ್ತಿನವರೆಗೆ ನೀರಿತ್ತು. ನಾನು ಮಂಡಿ ಸಪೋರ್ಟ್ ಕೊಟ್ಟಿಲ್ಲ ಅಂದ್ರೆ ನೀರು ಬರ್ತಿತ್ತು. ಮಂಡಿ ಸಪೋರ್ಟ್ ಕೊಟ್ಟಿರೋದ್ರಿಂದ ನೀರು ಮೇಲೆ‌ ಬರಲಿಲ್ಲ. ತುಂಬಾ ಚಳಿಯಿತ್ತು. ಕಾಲು ಬಿಟ್ಟಿದ್ರೆ ಫುಲ್‌ ಕೆಳಗೆ ಹೋಗುತ್ತಿದ್ದೆ. ಅಲ್ಲಿ ಉಸಿರಾಟ ಆಡೋಕೆ ಸಣ್ಣದಾಗಿ ಜಾಗ ಇತ್ತು. ಅಲ್ಲಿ ತುಂಬಾ ಕೂಗಿದೆ.

publive-image

ರಾತ್ರಿಯೆಲ್ಲಾ ಕಾಲ ಕಳೆದ ಮೇಲೆ ನನಗೆ ಬೆಳಗ್ಗೆ ಶಬ್ದ ಗೊತ್ತಾಯ್ತು. ಬೆಳಗ್ಗೆ ಬಂದು ರಕ್ಷಣೆ ಮಾಡಿದ್ರು. ಅವರು ರಕ್ಷಣೆ ಮಾಡುವಾಗ ನನಗೆ ಸೌಂಡ್ ಎಲ್ಲಾ ಕೇಳ್ತಿತ್ತು. ನಿನ್ನೆ ನನಗೆ ಏನು ಗೊತ್ತಾಗಲಿಲ್ಲ. ನನಗೆ ಬದುಕ್ತಿನಿ ಅಂತ ನಂಬಿಕೆ ಇತ್ತು.

ನಾನು ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಾ ಇದ್ದೀನಿ. ದೇವರು ದೊಡ್ಡವನು. ಸಡನ್ ಆಗಿ ಸೆಲ್ಫ್‌ ಕಾನ್ಫಿಡೆನ್ಸ್ ಕಳೆದುಕೊಳ್ಳಬಾರದು. ಅಪ್ಪಾಜಿ, ಅಮ್ಮನ್ನ ನೆನಪಿಸಿಕೊಳ್ಳಬೇಕು. ನಾನು ಅಪ್ಪಾಜಿ, ಅಮ್ಮನ್ನ ನೆನಸಿಕೊಂಡೆ. ಖುಷಿಯಿದೆ, ನಾನು ಇದನ್ನ ಒಂದು ಅನುಭವ ಅಂತ ತಗೊಂಡಿದ್ದೀನಿ. ಮೀಡಿಯಾಯಿಂದ ಹಿಡಿದು ಎಲ್ಲರಿಗೂ ನಾನು ಧನ್ಯವಾದ ಹೇಳ್ತೀನಿ. ಟ್ರಾವೆಲಿಂಗ್ ಮಾಡುವಾಗ ಫೋಟೋ ತೆಗೆದುಕೊಳ್ಳುವಾಗ ಸೇಫ್ಟಿ ತುಂಬಾ ಮುಖ್ಯ. ನನಗೆ ಮಂತ್ರಾಲಯದಲ್ಲಿ ಇದೇ ರೀತಿ ಸ್ಲೀಪ್ ಆಗಿತ್ತು. ಅವಾಗ ಮೊಬೈಲ್ ಕೆಳಗೆ ಬಿದಿತ್ತು. ಇವಾಗ ನನಗೆ ಏನು ಪ್ರಾಬ್ಲಂ‌ ಇಲ್ಲ ಎಂದು ಹಂಸಾ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment