Advertisment

ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​.. ಇದೆಲ್ಲ ಪಕ್ಕದ ಮನೆಯವನ ಕಿರಾತಕ ಬುದ್ಧಿ

author-image
Bheemappa
Updated On
ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​.. ಇದೆಲ್ಲ ಪಕ್ಕದ ಮನೆಯವನ ಕಿರಾತಕ ಬುದ್ಧಿ
Advertisment
  • ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಆರೋಪಿ ಆಕೆಯನ್ನು ಬಿಡಲಿಲ್ಲ
  • ಆತನನ್ನು ಅವೈಡ್ ಮಾಡಿದ ಮೇಲೆ ಜಗಳಕ್ಕೆ ಬರುತ್ತಿದ್ದ
  • ಕೊಲೆ ಬಳಿಕ ಸ್ನೇಹಿತನ ಸಹಾಯದಿಂದ ಎಸ್ಕೇಪ್ ಆಗಿದ್ದ ಆರೋಪಿ

ತುಮಕೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಿವಾಹಿತ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Advertisment

ದಿಲೀಪ್, ನಟರಾಜ್ ಬಂಧಿತ ಆರೋಪಿಗಳು. ಅಕ್ಟೋಬರ್ 25 ರಂದು ತುರುವೇಕೆರೆ ತಾಲೂಕಿನ ದುಂಡು ಕೋಡಿಹಳ್ಳಿ ಗ್ರಾಮದಲ್ಲಿ ಕಾವ್ಯ (24) ಎಂಬ ವಿವಾಹಿತ ಮಹಿಳೆ ಮೇಲೆ ಕಲ್ಲು ಎತ್ತಿ ಹಾಕಿ ಆರೋಪಿ ದಿಲೀಪ್ ಕೊಲೆ ಮಾಡಿದ್ದ. ಬಳಿಕ ಸ್ನೇಹಿತ ನಟರಾಜ್​ ಎನ್ನುವರ ಸಹಾಯ ಪಡೆದು ಪರಾರಿಯಾಗಿದ್ದ. ಈ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಹಿಳೆಯ ಪಕ್ಕದ ಮನೆಯಲ್ಲಿದ್ದ ದಿಲೀಪ್ ಎರಡ್ಮೂರು ವರ್ಷಗಳಿಂದ ಆಕೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಆದರೆ ಇತ್ತೀಚೆಗೆ ಮಹಿಳೆ ಅವನನ್ನು ಅವೈಡ್ ಮಾಡಿದ್ದಳು. ಇದರಿಂದಾಗಿಯೇ ಇಬ್ಬರ ನಡುವೆ 2-3 ಬಾರಿ ಜಗಳ ಕೂಡ ಆಗಿತ್ತು. ಜಗಳ ಜೋರಾಗಿದ್ದರಿಂದ ಮಹಿಳೆಯ ಪತಿ ಗಿರೀಶ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ಆರೋಪಿಯನ್ನು ಕರೆಯಿಸಿ ಮಹಿಳೆಯ ಸಹವಾಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎನ್ನಲಾಗಿದೆ. ​

ಇದಾದ ಒಂದೇ ವಾರದಲ್ಲಿ ಆರೋಪಿಯು ತೋಟದಿಂದ ಮನೆಗೆ ಬರುತ್ತಿದ್ದ ಮಹಿಳೆ ಜೊತೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ನಂತರ ಸ್ನೇಹಿತನ ಸಹಾಯದಿಂದ ಎಸ್ಕೇಪ್ ಆಗಿದ್ದ. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ತುರುವೇಕೆರೆ ಸಿಪಿಐ ಲೋಹಿತ್ ಹಾಗೂ ಪಿಎಸ್ಐ ರಾಮಚಂದ್ರಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment