Advertisment

ಬರೋಬ್ಬರಿ 11 ಕೋಟಿ ರೂಪಾಯಿಗೆ ಮಾರಾಟವಾಯ್ತು ಈ ಮೀನು..!

author-image
Ganesh
Updated On
ಬರೋಬ್ಬರಿ 11 ಕೋಟಿ ರೂಪಾಯಿಗೆ ಮಾರಾಟವಾಯ್ತು ಈ ಮೀನು..!
Advertisment
  • ಜಪಾನ್​ನ ಟೋಕಿಯೋ ಮಾರುಕಟ್ಟೆಯಲ್ಲಿ ಹರಾಜು
  • 2019ರಲ್ಲಿ ಇದೇ ಜಾತಿಯ ಮೀನು 18 ಕೋಟಿಗೆ ಸೇಲ್
  • ಬ್ಲೂಫಿನ್ ಟ್ಯೂನಾ ಮೀನಿನ ವಿಶೇಷತೆ ಏನು ಗೊತ್ತಾ?

ಜಪಾನ್‌ನ ಟೋಕಿಯೊದಲ್ಲಿ ನಡೆದ ಮೀನು ಹರಾಜಿನಲ್ಲಿ ಮೀನು ಒಂದರ ಬೆಲೆ ಸಂಚಲನ ಮೂಡಿಸಿದೆ. ಬರೋಬ್ಬರಿ 11 ಕೋಟಿ ರೂಪಾಯಿಗೆ ಸೇಲ್ ಆಗಿದೆ.

Advertisment

ಅಂದ್ಹಾಗೆ ಈ ಮೀನಿನ ಹೆಸರು ಬ್ಲೂಫಿನ್ ಟ್ಯೂನಾ (Bluefin tuna). ಜಪಾನ್​ ಟೋಕಿಯೋ ಮೀನು ಮಾರುಕಟ್ಟೆಯಲ್ಲಿ ಹರಾಜು ನಡೆದಿದೆ. ಇದು ಒಟ್ಟು 276 ಕೆಜಿ ತೂಕ ಹೊಂದಿತ್ತು. ಅಲ್ಲಿನ ಪ್ರಸಿದ್ಧ Sushi Zanmai ಎಂಬ ರೆಸ್ಟೋರೆಂಟ್ ಇದನ್ನು ಖರೀದಿ ಮಾಡಿದೆ. ಇದೇ ಮಾರುಕಟ್ಟೆಯಲ್ಲಿ 2019 ರಲ್ಲಿ ಬ್ಲೂಫಿನ್ ಟ್ಯೂನಾ ಮೀನು ಹರಾಜಿಗೆ ಇಡಲಾಗಿತ್ತು. ಅದು 18 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು.

https://twitter.com/surgeonwaqas/status/1876110625866498493

ಈ ಮೀನು ವೇಗವಾಗಿ ಚಲಿಸುವುದರಲ್ಲಿ ಹೆಸರುವಾಸಿ. ಇದರ ಗಾತ್ರವು ಮೋಟಾರ್ಸೈಕಲ್​ನಂತೆಯೇ ಇರುತ್ತದೆ. ಇದರ ಸರಾಸರಿ ವಯಸ್ಸು 40 ವರ್ಷ. ಬ್ಲೂಫಿನ್ ಟ್ಯೂನಾದಲ್ಲಿ ಮೂರು ಜಾತಿಗಳಿವೆ. ಸಮುದ್ರದ ಆಳದಲ್ಲಿ ಇವು ಇರುತ್ತವೆ. 1999 ರ ಮಾಹಿತಿಯ ಪ್ರಕಾರ, ಮೀನು ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಮೀನು ಇದಾಗಿದೆ.

ಇದನ್ನೂ ಓದಿ: ಪ್ರೀತಿಯಲ್ಲಿ ಬಿದ್ದು ಗುಹೆ ಸೇರಿದ ಐಷಾರಾಮಿ ಹುಡುಗಿ.. ನೀ ಗುಹೆಯೊಳಗೋ, ನಿನ್ನೊಳು ಗುಹೆಯೊ ಎಂದ ಹುಡುಗ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment