/newsfirstlive-kannada/media/post_attachments/wp-content/uploads/2024/10/Tunga-bhadra-1.jpg)
ತುಂಬಿದ ಜಲಾಶಯದ ಹರಿಯುವ ನೀರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಸ್ಟ್ ಗೇಟ್ ಅಳವಡಿಸಿ ಇತಿಹಾಸ ಸೃಷ್ಠಿಸಿದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಂಡ ಇದೀಗ ಆರ್ಥಿಕ ಸಂಕಷ್ಟ ಅನುಭವಿಸಿದೆ. ಅದಕ್ಕೆ ಕಾರಣ ಸಂಕಷ್ಟಕ್ಕೆ ಸಹಾಯವಾದವರನ್ನ ಸರ್ಕಾರ ಮರೆತಿರೋದು. ಸಂಭ್ರಮದಲ್ಲಿ ಮುಳುಗಿ ಸಂಭಾವನೆ ನೀಡದಿರೋದು. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.
ಜೀವದ ಹಂಗು ತೊರೆದು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ಗೆ ಸ್ಟಾಪ್‌ಲಾಗ್ ಲಾಗ್ ಅಳವಡಿಸಿ ನೀರು ಪೋಲಾಗುವುದನ್ನು ತಪ್ಪಿಸಿದ್ದ ಕನ್ನಯ್ಯ ನಾಯ್ಡು ಮತ್ತು ಕಾರ್ಮಿಕರ ಶ್ರಮಕ್ಕೆ ಬೆಲೆನೇ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣ ಎರಡೂವರೇ ತಿಂಗಳಾದರೂ ತುಂಗಭದ್ರಾ ಮಂಡಳಿ ಹಣವನ್ನೇ ಪಾವತಿಸಿಲ್ಲ ಅನ್ನೋದು.
ಸ್ಟಾಪ್ ಲಾಗ್ ಅಳವಡಿಸಿದವರಿಗೆ ಹಣ ಪಾವತಿಸಲು ಟಿಬಿ ಡ್ಯಾಂ ಮಂಡಳಿ ಅನುದಾನದ ಕೊರತೆ ಎದುರಿಸುತ್ತಿದೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ. ಈ ಕಾಮಗಾರಿ ನಂತರ ಎಲ್ಲ ಶ್ರಮಿಕರನ್ನು ಸರ್ಕಾರದಿಂದ ಗೌರವಿಸಲಾಯ್ತು. ನಂತರ ಭರ್ತಿಯಾದ ಜಲಾಶಯಕ್ಕೆ ಸಿಎಂ, ಡಿಸಿಎಂ, ಬಾಗಿನ ಕೂಡ ಅರ್ಪಿಸಿದರು. ಆದರೆ, ಸ್ಟಾಪ್‌ಲಾಗ್ ಗೇಟ್ ಅಳವಡಿಸಿದವರನ್ನು ಮರೆತಿರುವುದು ಎಷ್ಟು ಸರಿ ಎನ್ನೋ ಪ್ರಶ್ನೆ ಇದೀಗ ಉದ್ಭವವಾಗಿದೆ.
ಟಿಬಿ ಡ್ಯಾಂನ ಸ್ಟಾಪ್‌ಲಾಗ್ ಗೇಟ್ ನಿರ್ಮಾಣ, ತಜ್ಞರು, ಕಾರ್ಮಿಕರು ಮತ್ತು ಬಳಸಿದ ಯಂತ್ರ ಹಾಗೂ ವಾಹನಗಳು ಸೇರಿ 2.50 ಕೋಟಿ ರೂಪಾಯಿ ಹಣವನ್ನ ಪಾವತಿಸಬೇಕಿದೆ.
ಇದನ್ನೂ ಓದಿ: ಇಂದು ಬಡವರಿಗೆ ಧಾನ ಮಾಡಿ, ಕ್ರೀಡಾಪಟುಗಳಿಗೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ
ಶೀಘ್ರ ಹಣ ನೀಡೋದಾಗಿ ಟಿಬಿ ಡ್ಯಾಂನ ಕಾರ್ಯದರ್ಶಿ ಹೇಳ್ತಿದ್ದಾರೆ. ಅದೇನೇ ಇರಲಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಆಪತ್ಬಾಂಧವರಾಗಿ ಬಂದು ಧುಮ್ಮಿಕ್ಕಿ ಹರಿಯುತ್ತಿದ್ದ ನೀರನ್ನು ಬಂದ್ ಮಾಡಿದವರಿಗೆ ಸಿಗಬೇಕಾದ ಗೌರವಯುತ ಸಂಭಾವನೆಯನ್ನ ಪಾವತಿಸದಿದ್ದರೆ ಹೇಗೆ? ಕೆಲಸ ಮಾಡಿದಾಗ ಎಲ್ಲರೂ ಸಂಭ್ರಮಿಸಿದಂತೆ, ಅವರಿಗೆ ಸಿಗಬೇಕಾದ ಹಣವೂ ಸಿಗಬೇಕಲ್ವಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us