ಬಾಗಿನ ಅರ್ಪಣೆಗೆಂದು ತುಂಗಭದ್ರಾ ಡ್ಯಾಂ ಭರ್ತಿ! ಅಷ್ಟರಲ್ಲೇ ಚೈನ್​​ಲಿಂಕ್​ ಗೇಟ್ ಕಟ್​? ನಿಜವಾಗಿ ಆಗಿದ್ದೇನು?

author-image
AS Harshith
Updated On
ಬಾಗಿನ ಅರ್ಪಣೆಗೆಂದು ತುಂಗಭದ್ರಾ ಡ್ಯಾಂ ಭರ್ತಿ! ಅಷ್ಟರಲ್ಲೇ ಚೈನ್​​ಲಿಂಕ್​ ಗೇಟ್ ಕಟ್​? ನಿಜವಾಗಿ ಆಗಿದ್ದೇನು?
Advertisment
  • ಇದೇ 13ರಂದು ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು
  • ಭರ್ತಿಯಾಗಿದ್ದ ಡ್ಯಾಂಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆಗೆ ಮಾಡಲಿದ್ದರು
  • ತುಂಗಭದ್ರಾ ಡ್ಯಾಂ ಎರಡು ವರ್ಷದ ಬಳಿಕ 105 ಟಿಂಎಸಿ ನೀರು ಸಂಗ್ರಹವಾಗಿ ಭರ್ತಿಯಾಗಿದೆ

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಚೈನ್​​ಲಿಂಕ್​ ಗೇಟ್​ ತುಂಡಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಸದ್ಯ ಜನರಲ್ಲಿ ಆತಂಕ ಮನೆ ಮಾಡಿದೆ.

ತುಂಗಭದ್ರಾ ರಾಜ್ಯದಲ್ಲಿ 2ನೇ ಅತೀ ದೊಡ್ಡ ಜಲಾಶಯವಾಗಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಈ ಬಾರಿಯ ಮಳೆಯಿಂದ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಇದೇ 13ರಂದು ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಅದಕ್ಕೂ ಮುನ್ನ ಡ್ಯಾಂನ 19ನೇ ಕ್ರೆಸ್ಟ್​ ಗೇಟ್​​ ಒಡೆದಿದೆ.

publive-image

ಇದನ್ನೂ ಓದಿ: ತುಂಗಭದ್ರಾ ನದಿ ತೀರದಲ್ಲಿ ಭಾರೀ ಅಪಾಯ.. ಕ್ರೆಸ್ಟ್​ ಗೇಟ್​​ ಒಡೆದಂತೆ ಮುಳುಗಡೆಯಾಯ್ತು ಹಂಪಿ ಸ್ಮಾರಕ!

ತುಂಗಭದ್ರಾ ಎರಡು ವರ್ಷದ ಬಳಿಕ 105 ಟಿಂಎಸಿ ನೀರು ಸಂಗ್ರಹವಾಗಿ ಭರ್ತಿಯಾಗಿದ್ದು, ಭರ್ತಿಯಾಗಿದ್ದ ಡ್ಯಾಂಗೆ ಸಿಎಂ ಸಿದ್ದರಾಮಯ್ಯರಿಂದ ಬಾಗಿನ ಅರ್ಪಣೆಗೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅದಕ್ಕಾಗಿ ನಿನ್ನೆಯಷ್ಟೇ ಜಲಾಶಯಕ್ಕೆ ನೀರನ್ನು ಭರ್ತಿ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ನಿನ್ನೆ ರಾತ್ರಿ ವೇಳೆಗೆ 19ನೇ ಕ್ರಸ್ಟ್​ಗೇಟ್​ ತುಂಡರಿಸಿ ಹೋಗಿದೆ. ಪರಿಣಾಮ ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್​ ನೀರು ಹೊರಗೆ ಹರಿದು ಹೋಗುತ್ತಿದೆ.

publive-image

ಇದನ್ನೂ ಓದಿ:Tungabhadra Dam: ಕಿತ್ತುಹೋದ 19ನೇ ಕ್ರಸ್ಟ್​ ಗೇಟ್.. ಬರಿದಾಗಲಿದೆ ತುಂಗೆಯ ಒಡಲು! ಸಂಪೂರ್ಣ ಖಾಲಿ ಮಾಡ್ತಾರಾ ಡ್ಯಾಂ ನೀರು?

ಇನ್ನು ಡ್ಯಾಂನಿಂದ ಹರಿದು ಹೋಗುತ್ತಿರುವ ನೀರಿನಿಂದಾಗಿ ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಅಪಾಯದಲ್ಲಿವೆ. ಪ್ರವಾಹ ಭೀತಿ ಎದುರಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment