Advertisment

ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?

author-image
AS Harshith
Updated On
BREAKING: ತುಂಗಭದ್ರಾ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್‌ ಅಳವಡಿಕೆ ಕಾರ್ಯ ಸಕ್ಸಸ್‌
Advertisment
  • ಕಲ್ಯಾಣ ಕರ್ನಾಟಕ ಜೀವನಾಡಿ ತುಂಗಭದ್ರೆ ಇದೆಂಥ ಆಪತ್ತು?
  • ನೀರೆಲ್ಲಾ ಖಾಲಿಯಾದ ಬಳಿಕ ಹೊಸ ಡ್ಯಾಂ ಯೋಚನೆ!
  • ಡ್ಯಾಂ ಸುತ್ತಮುತ್ತ 2 ಕಿಮೀ ಯಾರು ಓಡಾಡದಂತೆ ನಿಷೇಧಾಜ್ಞೆ

ಮಲೆನಾಡಿನಲ್ಲಿ ಜನ್ಮವೆತ್ತಿದ್ರೂ ತುಂಗಭದ್ರೆ ದೃಷ್ಟಿ ಎಲ್ಲಾ ಕಲ್ಯಾಣದ ಜನರ ಬದುಕು ಹಸನಾಗಿಸುವ ಹೆಬ್ಬಯಕೆ. ತಳುಕು ಬಳುಕಿನೊಂದಿಗೆ ಹರಿದು ಬರುವ ಈ ಜೀವನದಿಗೆ ಟಿ.ಬಿ ಡ್ಯಾಂ ಅಲ್ಪ ವಿಶ್ರಾಂತಿ ತಾಣ. ಇಲ್ಲಿ ದೇವನದಿಯಾಗಿ ನೆಲೆ ನಿಲ್ಲುವ ಈ ಭಾಗಿರಥಿ ಕಲ್ಯಾಣ ಕರ್ನಾಟಕದ ದಾಹ ನೀಗಿಸುವ ಪುಣ್ಯವತಿ. ಆದ್ರೆ, ಅಧಿಕಾರಿಗಳ ಯಡವಟ್ಟು, ರೈತರ ಮಂದಹಾಸವನ್ನೇ ಕಿತ್ತುಕೊಂಡಿದೆ.

Advertisment

ಇದು ಆಘಾತ. ಉತ್ತರ ಕರ್ನಾಟಕದ ಜೀವನಾಡಿಗೆ ಹೊಡೆದ ಜಲಾಘಾತ. ತುಂಗಭದ್ರಾ ಡ್ಯಾಂನ 19ನೇ ಚೈಲ್​​ ಲಿಂಕ್​ ಗೇಟ್​​ನಿಂದ ಉತ್ತರವೇ ಮತ್ತೆ ಬಿಕ್ಕುವ ಭೀತಿ ಎದುರಾಗಿದೆ. ಡ್ಯಾಂನ ಒಂದೇ ಒಂದು ಗೇಟಿನಿಂದ ಪೂರ್ತಿ ಜಲಾಶಯದ ಮುಕ್ಕಾಲು ಭಾಗ ಖಾಲಿ ಆಗುವ ಆತಂಕವಿದ್ದು, ಈ ಬಾರಿಯೂ ಒಂದೇ ಬೆಳೆಗೆ ಸೀಮಿತ ಆಗಬೇಕಾ ಅನ್ನೋ ನೋವು ರೈತ ಸಮುದಾಯಕ್ಕೆ ಕಾಡ್ತಿದೆ.

publive-image

ಒಂದು ಗೇಟ್​ನ ಪ್ರಮಾದಕ್ಕೆ 60 ಟಿಎಂಸಿ ನೀರು ಖಾಲಿ ಭೀತಿ!

105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಡ್ಯಾಂನಿಂದ 60 ಟಿಎಂಸಿ ನೀರು ಖಾಲಿ ಮಾಡಿದರಷ್ಟೇ ರಿಪೇರಿ. ಎಲ್ಲಾ 33 ಗೇಟ್​ ಮೂಲಕ ನದಿಗೆ 1 ಲಕ್ಷ ಕ್ಯೂಸೆಕ್​ ನೀರು ಹರಿ ಬಿಡಲಾಗ್ತಿದೆ. ಮಧ್ಯರಾತ್ರಿ ವರೆಗೆ ಸುಮಾರು 9 ಟಿಎಂಸಿ ನೀರು ಹರಿದು ಹೋಗಿದೆ. 60 ಟಿಎಂಸಿ ನೀರು ಖಾಲಿ ಮಾಡಲು ಕನಿಷ್ಟ 5 ದಿನವಾದ್ರೂ ಅಗತ್ಯವಿದೆ. 21 ಅಡಿಯಷ್ಟು ನೀರು ಕಡಿಮೆ ಆದ್ರಷ್ಟೇ ಗೇಟ್ ದುರಸ್ತಿ ಸಾಧ್ಯ ಅಂತ ಅಧಿಕಾರಿಗಳೇ ಹೇಳ್ತಿದ್ದಾರೆ.

ಇದನ್ನೂ ಓದಿ: ಒಂದೇ ಕಲ್ಲಲ್ಲಿ 3 ಹಕ್ಕಿ; ಸ್ಟಾರ್​​ ಪ್ಲೇಯರ್​​ ಎಂಟ್ರಿಯಿಂದ ಆರ್​​ಸಿಬಿಗೆ ಬಂತು ಆನೆಬಲ!

Advertisment

ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಿದ್ರಂತೆ!

ಡ್ಯಾಂನ ನೀರು ಪೋಲಾಗುವುದನ್ನು ತಡೆಗಟ್ಟಲು ಕಾರಟಗಿ ತಾಲೂಕಿನ ನವಲಿ ಬಳಿ ಯೋಜಿತ ಸಮಾನಾಂತರ ಜಲಾಶಯ ನೆನಪಾಗಿದೆ. 140 ಟಿಎಂಸಿ ಇದ್ದ ತುಂಗಾಭದ್ರ ಜಲಾಶಯದಲ್ಲಿ ಭರ್ತಿ 32 ಟಿಎಂಸಿ ಹೂಳೇ ತುಂಬಿದೆ. ಇದೀಗ ಅದರ ಸಾಮರ್ಥ್ಯ 105 ಟಿಎಂಸಿಗೆ ಕುಸಿದಿದೆ.

publive-image

ತುಂಗಭದ್ರಾ ಡ್ಯಾಂ ಬಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ!

ಇನ್ನು ಡಿಸಿಎಂ ಡಿಕೆಶಿ ಈಗಾಗಲೇ ಕಟ್ಟಾಜ್ಞೆ ಹೊರಡಿಸಿದ್ದಾರೆ. ಡ್ಯಾಂ ಸುತ್ತಮುತ್ತ 2 ಕಿಮೀ ಯಾರು ಓಡಾಡದಂತೆ ನಿಷೇಧಾಜ್ಞೆ ಹೇರುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಬಿಟ್ರೆ ಯಾರು ಬಂದು ನೋಡುವಂತಿಲ್ಲ. ಯಾವ ರಾಜಕಾರಣಿಗಳು ಬಂದು ಬಿಡುವ ಹಾಗಿಲ್ಲ ಅಂತ ವಾರ್ನಿಂಗ್​ ನೀಡಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಹೆಜ್ಜೆ; ಭಕ್ತರಿಗೆ ಗುಡ್​ನ್ಯೂಸ್​​; ಇನ್ಮುಂದೆ ಮುಳುಗಿರೋ ಕೃಷ್ಣ ನಗರಿಯನ್ನು ನೋಡಬಹುದು!

Advertisment

ಇವತ್ತು ತುಂಗಭದ್ರಾ ಡ್ಯಾಂಗೆ ವಿಜಯೇಂದ್ರ ಭೇಟಿ!

ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಾ ಕಲ್ಯಾಣದ ಭಾಗ್ಯ ತೊಳೆಯುವ ಜನನಿ. ಆದ್ರೆ, ಅಧಿಕಾರಿಗಳ ಬೇಜವ್ದಾರಿತನ. ಸರ್ಕಾರದ ಗ್ಯಾರಂಟಿ ಪ್ರೀತಿ, ಜನಹಿತ ಮರೆತು, ಮಾತಿನಲ್ಲೇ ಕಾಲಹರಣ ಮಾಡಿದ ಸರ್ಕಾರದ ನಿರ್ಲಕ್ಷ್ಯಕ್ಕೆ ಉತ್ತರದ ಜನರ ಬದುಕನ್ನೇ ಮುಳುಗಿಸಿದೆ. ಇವತ್ತು ಇದೇ ಡ್ಯಾಂಗೆ ವಿಜಯೇಂದ್ರ ಭೇಟಿ ನೀಡ್ತಿದ್ದಾರೆ. ನಿನ್ನೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಡ್ಯಾಂ ವೀಕ್ಷಣೆ ಮಾಡಿ ಡಿಕೆಶಿ ಹೇಳಿದ ಜವಾಬ್ದಾರಿ ಹೇಳಿಕೆಯನ್ನ ಟೀಕಿಸಿದ್ರು.

publive-image

ಇದನ್ನೂ ಓದಿ: ಗಂಡ ಕೆಲಸಕ್ಕೆ ಹೋದಾಗ ಸರಸ.. ಪ್ರಿಯಕರನಿಗಾಗಿ ಪತಿಯ ಕತ್ತು ಹಿಸುಕಿ ಕೊಂದ ಪಾಪಿ ಪತ್ನಿ; ಅಸಲಿಗೆ ಆಗಿದ್ದೇನು?

ಒಟ್ಟಾರೆ, ಕಲ್ಯಾಣ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಸೇರಿ ತೆಲಂಗಾಣ, ಆಂಧ್ರದ ಹಲವು ಜಿಲ್ಲೆಗಳ ಜೀವ ಸಂಕುಲವನ್ನೇ ಸಲುಹುತ್ತಿದ್ದಾಳೆ. ತುಂಗಭದ್ರಾನಿಂದ ಕಿತ್ತೋದ ಗೇಟ್​ನಲ್ಲಿ ಅಭದ್ರತೆಯ ಮಡಿಲಿಗೆ ತಳ್ಳಿದ್ದು, ಭಯಮಿಶ್ರಿತ ಭೀತಿ ಉಕ್ಕಿಸ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment