/newsfirstlive-kannada/media/post_attachments/wp-content/uploads/2024/08/Tungabadra-dam-9.jpg)
ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಗೇಟ್ ತುಂಡರಿಸಿದೆ. ಸದ್ಯ ಡ್ಯಾಂ ತೀರದಲ್ಲಿ ಭಾರೀ ಅಪಾಯ ಮುನ್ಸೂಚನೆ ಎದುರಾಗಿದೆ. ಅತ್ತ ಕ್ರೆಸ್ಟ್​ ಗೇಟ್​ ತುಂಡರಿಸಿದಂತೆ ಅಧಿಕಾರಿಗಳು ಹೈ ಅಲರ್ಟ್​ ಆಗಿದ್ದು, ತುಂಗಭದ್ರಾ ಜಲಾಶಯದ ವೈಕುಂಠ ಅಥಿತಿ ಗೃಹದಲ್ಲಿ ಹೈ-ವೋಲ್ಟೇಜ್ ಮೀಟಿಂಗ್ ಕರೆಯಲಾಗಿದೆ.
ಟಿಬಿ ಬೋರ್ಡ್ ಕಾರ್ಯದರ್ಶಿ ಓಆರ್ ಕೆ ರೆಡ್ಡಿ, ಮತ್ತು MD ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ರಾತ್ರಿಯಿಂದಲೇ ಅಧಿಕಾರಿಗಳು ಸಭೆಗಳು, ಸಂಪರ್ಕ ಜೋರಾಗಿದೆ. ಹೈದರಾಬಾದ್​ಗೂ ಟಿಬಿ ಬೋರ್ಡ್ ಅಧಿಕಾರಿಗಳು ಮಾಹಿತಿ ರವಾನೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/Tungabadra-dam-10.jpg)
ಎನಾಯ್ತು?
ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಪರಿಣಾಮ 19ನೇ ಚೈನ್​ಲಿಂಕ್​ ಗೇಟ್​ ಕಟ್​ ಆಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಈಗಾಗಲೇ ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ.
/newsfirstlive-kannada/media/post_attachments/wp-content/uploads/2024/08/Tungabadra-dam-11.jpg)
ಗೇಟ್​ ತುಂಡರಿಸಿದ ಕಾರಣ ತುಂಗಭದ್ರಾ ಡ್ಯಾಂನಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗುತ್ತಿದೆ. ಇದೀಗ ನದಿಗೆ ನೀರು ಹರಿಬಿಟ್ಟ ಕಾರಣ ಹಂಪಿಯ ಸ್ಮಾರಕಗಳು ಮತ್ತೊಮ್ಮೆ ಮುಳುಗಿದೆ. ಸಾಲು ಮಂಟಪ, ಜನಿವಾರ ಮಂಟಪ, ಧಾರ್ಮಿಕ ವಿಧಿ ವಿಧಾನಗಳ ಮಂಟಪ, ಪುರಂದರ ದಾಸರ ಮಂಟಪ ಮುಳುಗಡೆಯಾಗಿವೆ. ಇದರಿಂದ ಸ್ತಳೀಯ ನಿವಾಸಿಗಳಿಗೆ ಆತಂಕ ಹೆಚ್ಚಾಗುತ್ತಿದೆ.
ಅತ್ತ ಕಂಪ್ಲಿ ಸೇತುವೆ ಕೂಡ ಮುಳುವ ಭೀತಿಯಲ್ಲಿದೆ. ಇದರ ಜೊತೆಗೆ ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮೂರು ಜಿಲ್ಲೆಗಳ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
/newsfirstlive-kannada/media/post_attachments/wp-content/uploads/2024/08/Tungabadra-dam-6.jpg)
ಗೇಟ್​ ಸರಿ ಪಡಿಸಲು ಆಗಲ್ವಾ?
ತುಂಗಭದ್ರಾ ನೀರಾವರಿ ವಲಯದ ಸಿಇ ಎಲ್ ಬಸವರಾಜ್ ಈ ಕುರಿತು ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ. 69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಘಟನೆಯಾಗಿದೆ. 19ನೇ ಕ್ರಸ್ಟ್​ ಗೇಟ್ ಒಂದ್​ ಕಡೆ ಡಿ-ಲಿಂಕ್​ ಆಗಿ ಕಟ್ ಆಗಿ ಹೋಗಿದೆ. ಉಳಿದ ಗೇಟ್​ಗಳನ್ನು ಓಪನ್ ಮಾಡಿ ನದಿಗೆ ನೀರು ಹರಿಸಲಾಗ್ತಿದೆ. ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗ್ತಿದೆ. ಇರೋ ನೀರಲ್ಲಿ ಕೆಲಸ ಮಾಡಲು ಆಗುತ್ತಾ? ಇಲ್ವೋ ನೋಡಬೇಕು ಎಂದು ಹೇಳಿದ್ದಾರೆ.
ಬಳಿಕ ಬೆಳಗ್ಗೆ ಜಲಾಶಯಕ್ಕೆ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಲಿದೆ. ತಜ್ಞರ ತಂಡ ಬಂದ ಬಳಿಕ ಮುಂದಿನ ಕ್ರಮದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಸದ್ಯ ಡ್ಯಾಂಗೆ ಯಾವುದೇ ತೊಂದರೆ ಇಲ್ಲ ಎಂದ ಸಿಇ ಬಸವರಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us