Advertisment

‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ

author-image
AS Harshith
Updated On
BREAKING: ತುಂಗಭದ್ರಾ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್‌ ಅಳವಡಿಕೆ ಕಾರ್ಯ ಸಕ್ಸಸ್‌
Advertisment
  • ತುಂಡರಿಸಿ ಹೋದ ತುಂಗಭದ್ರಾ ಡ್ಯಾಂನ 19ನೇ ಕ್ರೆಸ್ಟ್​ ಗೇಟ್​​
  • ಇಂದಿಗೆ ಮೂರು ದಿನ.. ದಿನಕ್ಕೆ 1 ಲಕ್ಷಕ್ಕೂ ನೀರು ನದಿ ಪಾಲು
  • ಕನ್ನಯ್ಯ ನಾಯ್ಡು ಯಾರು? ಜಲಾಶಯ ಬಗ್ಗೆ ಹೀಗೆ ಹೇಳಿದ್ಯಾಕೆ?

ವಿಜಯನಗರ: ತುಂಗಭದ್ರಾ ಡ್ಯಾಂ ಅಪಾಯದಲ್ಲಿದೆ. ಜಲಾಶಯದ 18ನೇ ಕ್ರೆಸ್ಟ್​ ಗೇಟ್​​ ನೀರಿನ ಒತ್ತಡಕ್ಕೆ ತುಂಡರಿಸಿ ಹೋಗಿದೆ. ಇಂದಿನ 3 ದಿನ ಕಳೆದಿದ್ದು, ದಿನನಿತ್ಯವೂ 1 ಲಕ್ಷಕ್ಕೂ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸದ್ಯ ಅಪಾಯದಲ್ಲಿರೋ ಡ್ಯಾಂನ ಗೇಟ್ ಪರಿಶೀಲನೆ ಮಾಡಲು ಆಂಧ್ರ ಪ್ರದೇಶದಿಂದ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಬಂದಿದ್ದು, ಚೈನ್​ ಲಿಂಕ್​ ಗೇಟ್​​ ಕೂರಿಸಲು ಮುಂದಾಗಿದ್ದಾರೆ. ಅದಕ್ಕೂ ಮುನ್ನ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ಅವರು ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ ಎಂದಿದ್ದಾರೆ.

Advertisment

ಇದನ್ನೂ ಓದಿ: ವಿಷ ಸೇವಿಸಿ ಸಾವಿಗೆ ಶರಣಾದ ಅಮ್ಮ, ತಮ್ಮ, ಮಗ.. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?

ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸೋದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿ ಇಳಿಸೋದು ಕಷ್ಟ. ಐವತ್ತು ಟನ್ ಭಾರದ ಐದು ಪೀಸ್ ಕಬ್ಬಿಣ ಗೇಟ್ ಒಂದೊಂದು ಇಳಿಸುತ್ತೇವೆ. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗ್ತಿದೆ. ನಾಳೆಯಿಂದ ಒಂದೊಂದೇ ಪೀಸ್​​ಗಳನ್ನು ಹಾಕ್ತೇವೆ ಎಂದು ಹಿರಿಯ ತಜ್ಞ ಕನ್ನಯ್ಯ ಹೇಳಿದ್ದಾರೆ.

publive-image

ಇದನ್ನೂ ಓದಿ: ಅಂದು ದ್ವಾರಕೀಶ್​​ ಕನಸಿನ ಮನೆ ಖರೀದಿಸಿದ್ದ ರಿಷಬ್​! ಇದುವರೆಗೂ ಅಲ್ಲಿಗೆ ಕಾಲಿಟ್ಟಿಲ್ಲವಂತೆ​! ಯಾಕೆ?

Advertisment

ಬಳಿಕ ಮಾತು ಮುಂದುವರೆಸಿದ ಅವರು, ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡ್ತೇವೆ. ಗೇಟ್ ಆಯಸ್ಸು  40 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ಟೆಂಪರ್ ವೆರಿ ವರ್ಕ್. ನೀರು ಕಡಿಮೆಯಾದ ಮೇಲೆ ‌ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಕನ್ನಯ್ಯರವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment