ಒಡಲು ತುಂಬಿಸುತ್ತಿದ್ದಾಳೆ ತುಂಗಭದ್ರೆ.. ನದಿ ಪಾತ್ರದಲ್ಲಿ ಪ್ರವಾಹ ಭೀತಿ, ಜನರಿಗೆ ಎಚ್ಚರಿಕೆ ರವಾನೆ

author-image
AS Harshith
Updated On
ರಾಜ್ಯದಲ್ಲಿ ಮಹಾ ಮಳೆ! ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ 6 ಮಂದಿ, ಬೆಳೆದು ನಿಂತಿದ್ದ ಬೆಳೆ ನುಂಗಿದ ವರದಾ ನದಿ! 
Advertisment
  • ಮಳೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಹೆಚ್ಚಳ
  • 105 ಟಿಎಂಸಿ ಸಂಗ್ರಹ ಸಾಮರ್ಥ್ಯ ತುಂಗಭದ್ರಾ ಜಲಾಶಯ
  • ಜಲಾಶಯಕ್ಕೆ ಒಂದು ಗಂಟೆಯಲ್ಲಿ ಎಷ್ಟು ನೀರು ಹರಿದು ಬರ್ತಿದೆ?

ವಿಜಯನಗರ: ಮಳೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರು ಹೆಚ್ಚಳವಾಗಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಜಲಾಶಯದಲ್ಲಿ ಬರೋಬ್ಬರಿ 73.681 ಟಿಎಂಸಿ ನೀರು ಸಂಗ್ರಹವಾಗಿದೆ.

ಒಂದು ತಾಸಿಗೆ 1 ಲಕ್ಷ 27 ಸಾವಿರದ 792 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರ್ತಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗೋಕೆ ದಿನಗಣನೆ ಪ್ರಾರಂಭವಾಗಿದೆ.

ಇದನ್ನೂ ಓದಿ: KRS ಡ್ಯಾಂ ಬಹುತೇಕ ಭರ್ತಿ, ನದಿ ಪಾತ್ರದಲ್ಲಿ ಪ್ರವಾಹ ಭೀತಿ! ಒಳ ಹರಿವು, ಹೊರ ಹರಿವು ಎಷ್ಟಿದೆ?

ಈಗಾಗಲೇ ಟಿಬಿ ಬೋರ್ಡ್ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ. ಯಾವುದೇ ಕ್ಷಣದಲ್ಲೂ ನದಿಗೆ ನೀರು ಹರಿಸೋ ಸೂಚನೆ ನೀಡಲಾಗಿದೆ. ಮಳೆಯ ಹಿನ್ನೆಲೆ ವಿಜಯನಗರ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment